ಅಲೀಘರ್ ಮುಸ್ಲಿಂ ವಿಶ್ವವಿದ್ಯಾನಿಲಯದಿಂದ ಜಿನ್ನಾ ಭಾವ ಚಿತ್ರ ತೆಗೆದುಹಾಕಲು ಬಿಜೆಪಿ ಪಟ್ಟು

ಅಲೀಘರ್ ಮುಸ್ಲಿಂ ವಿಶ್ವವಿದ್ಯಾನಿಲಯದಿಂದ ಮೊಹಮ್ಮದ್ ಅಲಿ ಜಿನ್ನಾ ಭಾವ ಚಿತ್ರ ತೆಗೆದುಹಾಕಲು ಬಿಜೆಪಿ ಪಟ್ಟು ಹಿಡಿದಿದ್ದು, ಈ ಆಗ್ರಹ ವಿವಾದಕ್ಕೆ ಕಾರಣವಾಗಿದೆ.
ಅಲೀಘರ್ ಮುಸ್ಲಿಂ ವಿಶ್ವವಿದ್ಯಾನಿಲಯ
ಅಲೀಘರ್ ಮುಸ್ಲಿಂ ವಿಶ್ವವಿದ್ಯಾನಿಲಯ
ಅಲೀಘರ್: ಅಲೀಘರ್ ಮುಸ್ಲಿಂ ವಿಶ್ವವಿದ್ಯಾನಿಲಯದಿಂದ ಮೊಹಮ್ಮದ್ ಅಲಿ ಜಿನ್ನಾ ಭಾವ ಚಿತ್ರ ತೆಗೆದುಹಾಕಲು ಬಿಜೆಪಿ ಪಟ್ಟು ಹಿಡಿದಿದ್ದು,  ಈ ಆಗ್ರಹ ವಿವಾದಕ್ಕೆ ಕಾರಣವಾಗಿದೆ. 
ಅಲೀಘರ್ ಸಂಸದ, ಹಾಗೂ ಬಿಜೆಪಿ ಮುಖಂಡ ಸತೀಶ್ ಗೌತಮ್ ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರ ಭಾವ ಚಿತ್ರ ಅಲೀಘರ್ ವಿಶ್ವವಿದ್ಯಾನಿಲಯದಲ್ಲಿರುವುದನ್ನು ಆಕ್ಷೇಪಿಸಿ ಉಪಕುಲಪತಿಗಳಿಗೆ ಪತ್ರ ಬರೆದಿದ್ದು,  ಜಿನ್ನಾ ಮುಕ್ತ ಎಎಂಯು ಎಂಬ ಹ್ಯಾಷ್ ಟ್ಯಾಗ್ ನಡಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವನ್ನೂ ಪ್ರಾರಂಭಿಸಿದ್ದಾರೆ. 
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಕರಣ್ ದಲಾಲ್, ಭಾರತ ವಿಭಜನೆಗೂ ಮುನ್ನ ಜಿನ್ನಾ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದರು. ಭಾರತದ ವಿಭಜನೆಯಲ್ಲಿ ಜಿನ್ನಾ ಪಾತ್ರವಿತ್ತು ಎಂಬುದು ಬೇರೆಯ ವಿಷಯ ಆದರೆ ಎಎಂಯುವಿನಿಂದ ಜಿನ್ನಾ ಭಾವಚಿತ್ರ ತೆಗೆಸುವುದು ಬಿಜೆಪಿಯ ರಾಜಕಾರಣದ ಗಿಮಿಕ್ ಎಂದು ಹೇಳಿದ್ದಾರೆ. 
ಇನ್ನು ವಿವಿಯೂ ಜಿನ್ನಾ ಭಾವಚಿತ್ರ ಇರುವುದನ್ನು ಸಮರ್ಥಿಸಿಕೊಂಡಿದ್ದು, ಜಿನ್ನಾ ವಿವಿಯ ಸ್ಥಾಪಕ ಸದಸ್ಯರುಗಳಲ್ಲಿ ಒಬ್ಬರಾಗಿದ್ದರು ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com