ಡಿಡಿಸಿಎ ಮಾನನಷ್ಟ ಮೊಕದ್ದಮೆ: ಜೇಟ್ಲಿಗೆ ಉಂಟಾದ ನಷ್ಟದ ಬಗ್ಗೆ ವಿಶ್ವಾಸ್ ವಿಷಾದ

ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರಿಂದ ಪಡೆದ ಮಾಹಿತಿಯ ಆಧಾರದಲ್ಲಿ ನಾನು ಅರುಣ್ ಜೇಟ್ಲಿ ವಿರುದ್ಧ ಡಿಡಿಸಿಎ ಭ್ರಷ್ಟಾಚಾರದ ಆರೋಪ ಮಾಡಿದ್ದಾಗಿ ಆಮ್ ಆದ್ಮಿ ಪಕ್ಷದ ನಾಯಕ ಕುಮಾರ್ ವಿಶ್ವಾಸ್
ಕುಮಾರ್ ವಿಶ್ವಾಸ್
ಕುಮಾರ್ ವಿಶ್ವಾಸ್
Updated on
ನವದೆಹಲಿ: ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರಿಂದ ಪಡೆದ ಮಾಹಿತಿಯ ಆಧಾರದಲ್ಲಿ ನಾನು ಅರುಣ್ ಜೇಟ್ಲಿ ವಿರುದ್ಧ ಡಿಡಿಸಿಎ ಭ್ರಷ್ಟಾಚಾರದ ಆರೋಪ ಮಾಡಿದ್ದಾಗಿ ಆಮ್ ಆದ್ಮಿ ಪಕ್ಷದ ನಾಯಕ ಕುಮಾರ್ ವಿಶ್ವಾಸ್ ದೆಹಲಿ ಹೈಕೋರ್ಟ್ ಗೆ ಹೇಳಿಕೆ ನೀಡಿದ್ದಾರೆ. 
ಅರುಣ್ ಜೇಟ್ಲಿ ವಿರುದ್ಧದ ಭ್ರಷ್ಟಾಚಾರದ ಆರೋಪದ ವಿಷಯದಲ್ಲಿ ಹೆಚ್ಚು ಮುಂದುವರೆಯಲು ತಮಗೆ ವೈಯಕ್ತಿಕವಾಗಿ ಇಷ್ಟವಿರಲಿಲ್ಲ ಎಂದು ಕುಮಾರ್ ವಿಶ್ವಾಸ್ ಹೇಳಿದ್ದು, ಅರವಿಂದ್ ಕೇಜ್ರಿವಾಲ್ ಮಾಡಿರುವ ಆರೋಪದಿಂದಾಗಿ ಅರುಣ್ ಜೇಟ್ಲಿ ಅವರಿಗೆ ಉಂಟಾದ ನಷ್ಟದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. 
ಕುಮಾರ್ ವಿಶ್ವಾಸ್ ಪ್ರತಿಕ್ರಿಯೆ ಕೇಳಿದ ಬಳಿಕ ಅವರ ಹೇಳಿಕೆ ಬಗ್ಗೆ ನಿರ್ಧರಿಸಲು ಕೋರ್ಟ್ ಸಮಯಾವಕಾಶ ನೀಡಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com