ಮೋದಿಯಿಂದ ಚಿನ್ನದ ಬಣ್ಣದ ಹೂ ಮಾಲೆ ಗಿಪ್ಟ್ ಪಡೆದ ಐಐಟಿ ವಿದ್ಯಾರ್ಥಿ

ಸಾಮಾಜಿಕ ಜಾಲತಾಣಗಳ ಐಐಟಿ ವಿದ್ಯಾರ್ಥಿಯೊಬ್ಬ ಮಾಡಿದ್ದ ಮನವಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರಮೋದಿ ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಧರಿಸಿದ್ದ ಚಿನ್ನದ ಬಣ್ಣದ ಹೂ ಮಾಲೆಯನ್ನು ಗಿಪ್ಟ್ ಆಗಿ ನೀಡಿದ್ದಾರೆ.
ಚಿನ್ನದ ಬಣ್ಣದ ಹೂ ಮಾಲೆಯೊಂದಿಗೆ ವಿದ್ಯಾರ್ಥಿ
ಚಿನ್ನದ ಬಣ್ಣದ ಹೂ ಮಾಲೆಯೊಂದಿಗೆ ವಿದ್ಯಾರ್ಥಿ

ನವದೆಹಲಿ : ಸಾಮಾಜಿಕ ಜಾಲತಾಣಗಳ  ಐಐಟಿ ವಿದ್ಯಾರ್ಥಿಯೊಬ್ಬ ಮಾಡಿದ್ದ ಮನವಿಯ ಹಿನ್ನೆಲೆಯಲ್ಲಿ  ಪ್ರಧಾನಿ ನರೇಂದ್ರಮೋದಿ ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ  ಧರಿಸಿದ್ದ ಚಿನ್ನದ ಬಣ್ಣದ ಹೂ ಮಾಲೆಯನ್ನು  ಗಿಪ್ಟ್ ಆಗಿ ನೀಡಿದ್ದಾರೆ.

  ಪ್ರಧಾನಿ ನರೇಂದ್ರಮೋದಿ  ಕಳೆದ ತಿಂಗಳು ಮಧ್ಯಪ್ರದೇಶದ ಸಾರ್ವಜನಿಕ ಸಮಾರಂಭವೊಂದರಲ್ಲಿ ಧರಿಸಿದ್ದ ಚಿನ್ನದ ಬಣ್ಣದ ಹೂಮಾಲೆ ನೀಡುಂತೆ  ಧಾನ್ ಬಾದ್ ನ  ಐಐಟಿಯ ವಿದ್ಯಾರ್ಥಿ ರಾಬೀಸ್ ಕುಮಾರ್ ಸಿಂಗ್ ಮನವಿ ಮಾಡಿಕೊಂಡಿದ್ದರು.

 ಪಂಚಾಯತ್ ರಾಜ್  ದಿನದಂದು ನಿಮ್ಮ ಭಾಷಣ ಕೇಳಿದೆ. ತುಂಬಾ ಚೆನ್ನಾಗಿ ಮಾತನಾಡ್ರಿ , ನೀವು ಧರಿಸಿದ ಚಿನ್ನದ ಬಣ್ಣದ ಹೂ ಮಾಲೆ ನನ್ನಗೆ ಇಷ್ಟವಾಗಿದ್ದು, ಅದನ್ನು ಕೊಡುವಂತೆ ಟ್ವೀಟರ್ ಮೂಲಕ ರಾಬೀಸ್ ಕುಮಾರ್ ಸಿಂಗ್  ಮನವಿ ಮಾಡಿಕೊಂಡಿದ್ದ.

 ಆದಾದ ಮಾರನೇ ದಿನವೇ ನರೇಂದ್ರಮೋದಿ ಆ ಚಿನ್ನದ ಬಣ್ಣದ  ಹೂ ಮಾಲೆಯನ್ನು  ಪತ್ರದೊಂದಿಗೆ ಕಳುಹಿಸಿಕೊಟ್ಟಿದ್ದಾರೆ. ಪಂಚಾಯತ್ ರಾಜ್ ದಿನದಿಂದ ನಾನು ಧರಿಸಿದ್ದ ಚಿನ್ನದ  ಬಣ್ಣದ ಹೂ ಮಾಲೆ ನಿನ್ನಗೆ ಇಷ್ಟವಾಗಿರುವುದನ್ನು ತಿಳಿದಿದ್ದು, ಕಾಗದ ಪತ್ರದೊಂದಿಗೆ  ಅದನ್ನು ಕಳುಹಿಸಲಾಗಿದೆ. ನಿನ್ನ ಭವಿಷ್ಯ ಚೆ್ನ್ನಾಗಿರಲಿ ಎಂದು ಪ್ರಧಾನಿ ಹಾರೈಸಿದ್ದಾರೆ.

 ಸಿಂಗ್ ಆ ಗಿಪ್ಟ್ ಪಡೆದಿದ್ದು, ನರೇಂದ್ರಮೋದಿಗೆ ಟ್ವೀಟ್ ಮೂಲಕವೇ ಕೃತಜ್ಞತೆ ಸಲ್ಲಿಸಿದ್ದಾರೆ.  ಕಾಗದ ಪತ್ರದೊಂದಿಗೆ ಗಿಪ್ಟ್ ಪಡೆದಿದ್ದು, ಸುಂದರವಾದ  ಬಹುಮಾನ ನೀಡಿದ್ದಕ್ಕಾಗಿ ಧನ್ಯವಾದ ತಿಳಿಸುವುದಾಗಿ ಅವರು ಹೇಳಿದ್ದಾರೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com