ನ್ಯಾಯಮೂರ್ತಿ ಕೆ ಎಂ ಜೋಸೆಫ್
ನ್ಯಾಯಮೂರ್ತಿ ಕೆ ಎಂ ಜೋಸೆಫ್

ನ್ಯಾ.ಕೆ.ಎಂ ಜೋಸೆಫ್ ಪದೋನ್ನತಿ: ಮೇ 7ಕ್ಕೆ ಸು.ಕೋರ್ಟ್ ಬಾರ್ ಅಸೋಸಿಯೇಷನ್ ಸಾಮಾನ್ಯ ಸಭೆ

ಉತ್ತರಾಖಂಡ್ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶ ಕೆ. ಎಂ. ಜೋಸೆಫ್ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೇರಿಸುವುದು ಮತ್ತು...
ನವದೆಹಲಿ: ಉತ್ತರಾಖಂಡ್ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶ ಕೆ. ಎಂ. ಜೋಸೆಫ್ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೇರಿಸುವುದು ಮತ್ತು ಎಸ್ ಬಿಸಿಎ ಅಧ್ಯಕ್ಷ ಸ್ಥಾನದಿಂದ ವಿಕಾಸ್ ಸಿಂಗ್ ಅವರನ್ನು ಕೆಳಗಿಳಿಸುವುದರ ಕುರಿತಂತೆ ಚರ್ಚಿಸಲು ಮೇ 7ರಂದು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಸಾಮಾನ್ಯ ಸಭೆ ನಡೆಸಲು ತೀರ್ಮಾನಿಸಲಾಗಿದೆ. 
ನ್ಯಾ.ಕೆಎಂ ಜೋಸೆಫ್ ಅವರಿಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಬಡ್ತಿ ನೀಡುವುದರ ವಿಷಯದ ಬಗ್ಗೆ ಕೊಲಿಜಿಯಂ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲು ವಿಫಲವಾದ ಬಳಿಕ ಈ ತೀರ್ಮಾನಕ್ಕೆ ಬರಲಾಗಿದೆ.
ಮುಖ್ಯ ನ್ಯಾಯಮೂರ್ತಿ ಮಿಶ್ರ, ನ್ಯಾ. ಚಲಮೇಶ್ವರ್, ನ್ಯಾ.ರಂಜನ್ ಗೋಗೋಯಿ, ನ್ಯಾ.ಮದನ್ ಬಿ ಲೋಕುರ್. ನ್ಯಾ.ಕೆ.ಎಂ ಜೋಸೆಫ್ ಅವರಿದ್ದ ಕೊಲಿಜಿಯಂ ಸಭೆ ಮೇ.02 ರಂದು ನಡೆದಿದ್ದು, ಸರ್ಕಾರ ನ್ಯಾ. ಜೋಸೆಫ್  ಜೋಸೆಫ್ ಅವರ ಪದೋನ್ನತಿ ಶಿಫಾರಸ್ಸನ್ನು ವಾಪಸ್ ಕಳಿಸಿತ್ತು. 
ಜನವರಿ 10 ರಂದು,ಕೊಲಿಜಿಯಂ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಮತ್ತು ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಅವರನ್ನು ಸರ್ವೋಚ್ಚ ನ್ಯಾಯಾಲಯ ನ್ಯಾಯಮೂರ್ತಿಯಾಗಿಸಲು ಶಿಫಾರಸು ಮಾಡಿತ್ತು. ಆದರೆ ಕೇಂದ್ರ ಸರ್ಕಾರ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಶಿಫಾರಸ್ಸನ್ನಷ್ಟೇ ಮನ್ನಿಸಿ ನ್ಯಾ. ಜೋಸೆಫ್ ಹೆಸರನ್ನು ತಿರಸ್ಕರಿಸಿತ್ತು.

Related Stories

No stories found.

Advertisement

X
Kannada Prabha
www.kannadaprabha.com