ವಯಸ್ಕ ಜೋಡಿಗಳು ವಿವಾಹವಾಗದೇ ಒಟ್ಟಿಗೇ ಇರಬಹುದು: ಸುಪ್ರೀಂ ಕೋರ್ಟ್

ವಯಸ್ಕ ಜೋಡಿಗಳು ವಿವಾಹವಾಗದೇ ಒಟ್ಟಿಗೇ ಇರಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ನವದೆಹಲಿ: ವಯಸ್ಕ ಜೋಡಿಗಳು ವಿವಾಹವಾಗದೇ ಒಟ್ಟಿಗೇ ಇರಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. 
20 ವರ್ಷದ ಕೇರಳ ಮಹಿಳೆಯ ವಿವಾಹವನ್ನು ಅಸಿಂಧುಗೊಳಿಸಿದ್ದ ಪ್ರಕರಣದ ಬಗ್ಗೆ ನಡೆದ ವಿಚಾರಣೆಯ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, "20 ವರ್ಷದ ಮಹಿಳೆ ಆಕೆಗೆ ಯಾರೊಂದಿಗೆ ಜೀವನ ನಡೆಸಬೇಕೆಂದೆನಿಸುತ್ತದೋ ಅವರೊಂದಿಗೆ ಇರಬಹುದು" ಎಂದು ಹೇಳಿದೆ.
ಲಿವ್-ಇನ್ ರಿಲೇಷನ್ ಶಿಪ್ ಕಾನೂನಾತ್ಮಕವಾಗಿ ಮಾನ್ಯವಾಗಿದ್ದು, ಶೋಷಣೆಯಿಂದ ಮಹಿಳೆಯರಿಗೆ ರಕ್ಷಣೆ ನೀಡುವ 2005 ರ ಕಾಯ್ದೆ ಯ ಅಡಿಯಲ್ಲಿ ಲಿವ್-ಇನ್ ರಿಲೇಷನ್ ಶಿಪ್ ಕಾನೂನು ಮಾನ್ಯವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 
ತುಷಾರಾ ಎಂಬ ಮಹಿಳೆಯೊಂದಿಗಿನ ತಮ್ಮ ವಿವಾಹವನ್ನು ಕೇರಳ ಹೈಕೋರ್ಟ್ ಅಸಿಂಧುಗೊಳಿಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ನಂದಕುಮಾರ್ ಅವರ ಅರ್ಜಿ ವಿಚಾರಣೆಯನ್ನು ನಡೆಸಿದ ವೇಳೆಯಲ್ಲಿ ಸುಪ್ರೀಂ ಕೋರ್ಟ್  ವಯಸ್ಕ ಜೋಡಿಗಳು ವಿವಾಹವಾಗದೇ ಒಟ್ಟಿಗೇ ಇರಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com