ಲವ್ ಜಿಹಾದ್ ತಡೆಯಲು ಬಾಲ್ಯ ವಿವಾಹದಿಂದ ಮಾತ್ರ ಸಾಧ್ಯ: ಬಿಜೆಪಿ ಶಾಸಕ
ದೇಶದಲ್ಲಿ ಲವ್ ಜಿಹಾದ್ ಪ್ರಕಣಗಳನ್ನು ತಪ್ಪಿಸಲು ಬಾಲ್ಯ ವಿವಾಹದಿಂದ ಮಾತ್ರ ಸಾಧ್ಯ ಎನ್ನುವ ಮೂಲಕ ಅಗರ್ ಮಾಲ್ವಾ ಕ್ಷೇತ್ರದ ಬಿಜೆಪಿ ಶಾಸಕ ಗೋಪಾಲ್ ಪಾರ್ಮರ್ ವಿವಾದ ಹುಟ್ಟಿ ಹಾಕಿದ್ದಾರೆ...
ಭೋಪಾಲ್: ದೇಶದಲ್ಲಿ ಲವ್ ಜಿಹಾದ್ ಪ್ರಕಣಗಳನ್ನು ತಪ್ಪಿಸಲು ಬಾಲ್ಯ ವಿವಾಹದಿಂದ ಮಾತ್ರ ಸಾಧ್ಯ ಎನ್ನುವ ಮೂಲಕ ಅಗರ್ ಮಾಲ್ವಾ ಕ್ಷೇತ್ರದ ಬಿಜೆಪಿ ಶಾಸಕ ಗೋಪಾಲ್ ಪಾರ್ಮರ್ ವಿವಾದ ಹುಟ್ಟಿ ಹಾಕಿದ್ದಾರೆ.
ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ವಿವಾಹವಾಗುವ ಮೂಲಕ ಲವ್ ಜಿಹಾದ್ ಮಾಡುತ್ತಿದ್ದಾರೆ. ಇದನ್ನು ತಡೆಯಬೇಕಾದರೆ ಹಿಂದೂ ಯುವತಿಯರಿಗೆ ಚಿಕ್ಕ ವಯಸ್ಸಿನಲ್ಲೇ ಮನೆಯವರೇ ಮದುವೆ ಮಾಡಿಸಬೇಕು ಎಂದು ಗೋಪಾಲ್ ಪಾರ್ಮರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕೇರಳದ ಹಾದಿಯಾ ಪ್ರಕರಣದ ಸಂಬಂಧ ಮಾತನಾಡುವ ವೇಳೆ ಶಾಸಕ ಗೋಪಾಲ್ ಪಾರ್ಮರ್ ಅವರು ಈ ಹೇಳಿಕೆ ನೀಡಿದ್ದಾರೆ. ಹಿಂದಿನ ಕಾಲದಲ್ಲಿ ಹುಡುಗಿಯರಿಗೆ ಬೌದ್ಧಿಕ ಪ್ರೌಢಿಮೆ ಬರುವ ಮೊದಲೇ ಮನೆಯವರೇ ಮದುವೆ ಮಾಡುತ್ತಿದ್ದರು. ಅಂತಹ ಮದುವೆಗಳು ಬಹು ಕಾಲದವರೆಗೂ ಇರುತ್ತಿದ್ದವು.
18 ವರ್ಷಕ್ಕೆ ಮದುವೆಯಾಗಬೇಕೆಂಬ ಕಾಯ್ದೆ ಯಾವಾಗಿನಿಂದ ಜಾರಿಗೆ ಬಂದಿದೆಯೋ ಆಗಿನಿಂದ ಮದುವೆ ವ್ಯವಸ್ಥೆ ಹಾಳಾಗಿದೆ . ಬಾಲ್ಯ ವಿವಾಹವೇ ಸರಿ ಎಂದು ಶಾಸಕರು ಹೇಳಿರುವುದು ಭಾರೀ ಸುದ್ದಿಯಾಗಿದೆ.