2017ನೇ ಸಾಲಿನ ಯುಪಿಎಸ್ಸಿ ಅರ್ಹರ ಅಂಕಪಟ್ಟಿ ಬಿಡುಗಡೆ: ಟಾಪರ್ ಗೆ ಶೇ.55.6

2017ನೇ ಸಾಲಿನ ಕೇಂದ್ರ ನಾಗರಿಕ ಸೇವೆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳ ಅಂಕಗಳನ್ನು ...
ತೆಲಂಗಾಣದ ಅನುದೀಪ್ ಡುರಿಶೆಟ್ಟಿ 2017ನೇ ಸಾಲಿನ ಯುಪಿಎಸ್ಸಿ ಟಾಪರ್
ತೆಲಂಗಾಣದ ಅನುದೀಪ್ ಡುರಿಶೆಟ್ಟಿ 2017ನೇ ಸಾಲಿನ ಯುಪಿಎಸ್ಸಿ ಟಾಪರ್

ನವದೆಹಲಿ: 2017ನೇ ಸಾಲಿನ ಕೇಂದ್ರ ನಾಗರಿಕ ಸೇವೆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳ ಅಂಕಗಳನ್ನು ಬಿಡುಗಡೆ ಮಾಡಿರುವ ಕೇಂದ್ರ ನಾಗರಿಕ ಸೇವಾ ಆಯೋಗ, ಮೊದಲ ರ್ಯಾಂಕ್ ಗಳಿಸಿರುವ ಡುರಿಶೆಟ್ಟಿ ಅನಿದೀಪ್ ಶೇಕಡಾ 55.60 ಅಂಕ ಗಳಿಸಿದ್ದಾರೆ. ಇದು ಪರೀಕ್ಷೆಯ ಗುಣಮಟ್ಟ ಮತ್ತು ಕಠಿಣ ಪರೀಕ್ಷಾ ವಿಧಾನವನ್ನು ಸೂಚಿಸುತ್ತದೆ.

28 ವರ್ಷದ ಭಾರತೀಯ ಕಂದಾಯ ಸೇವಾಧಿಕಾರಿ ಡುರಿಶೆಟ್ಟಿ ಅನಿದೀಪ್, 1,126 ಅಂಕಗಳನ್ನು ಗಳಿಸಿದ್ದು ಅವುಗಳಲ್ಲಿ 950 ಲಿಖಿತ ಪರೀಕ್ಷೆ ಮತ್ತು 176 ಸಂದರ್ಶನದಲ್ಲಿ ಬಂದಿದೆ. ಇದು ಒಟ್ಟು 2,025ರಲ್ಲಿ ಪಡೆದ ಅಂಕಗಳಾಗಿದೆ.

ಮುಖ್ಯ ಪರೀಕ್ಷೆ 1750 ಅಂಕಗಳಿದ್ದು 275 ಅಂಕಗಳು ಸಂದರ್ಶನಕ್ಕೆ ಇದೆ.
ದೇಶಕ್ಕೆ ದ್ವಿತೀಯ ಸ್ಥಾನ ಗಳಿಸಿರುವ ಅನು ಕುಮಾರಿ ಶೇಕಡಾ 55.50 ಅಥವಾ 1,124 ಅಂಕ ಗಳಿಸಿದ್ದಾರೆ. ಅವುಗಳಲ್ಲಿ 937 ಲಿಖಿತ ಮತ್ತು 187 ಸಂದರ್ಶನಕ್ಕೆ ಬಂದಿವೆ.

ಮೂರನೇ ಸ್ಥಾನ ಪಡೆದ ಸಚಿನ್ ಗುಪ್ತಾ ಶೇಕಡಾ 55.40 ಅಂಕ ಗಳಿಸಿದ್ದು ಲಿಖಿತ ಪರೀಕ್ಷೆಯಲ್ಲಿ 946 ಮತ್ತು ಸಂದರ್ಶನದಲ್ಲಿ 176 ಅಂಕ ಗಳಿಸಿದ್ದಾರೆ.

2017ನೇ ಸಾಲಿನ ನಾಗರಿಕ ಸೇವೆ ಪರೀಕ್ಷೆ ಫಲಿತಾಂಶ ಏಪ್ರಿಲ್ 27ರಂದು ಪ್ರಕಟವಾಗಿತ್ತು. 750 ಪುರುಷರು ಮತ್ತು 240 ಮಹಿಳೆಯರು ಸೇರಿದಂತೆ ಒಟ್ಟು 990 ಅಭ್ಯರ್ಥಿಗಳು ಅರ್ಹರಾಗಿದ್ದು, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೇಮಕಾತಿ ಮಾಡಲು ಆಯೋಗ ಶಿಫಾರಸು ಮಾಡಿದೆ.

2017ನೇ ಸಾಲಿನ ಕೇಂದ್ರ ನಾಗರಿಕ ಸೇವೆ ಪರೀಕ್ಷೆ ಕಳೆದ ವರ್ಷ ಜೂನ್ 18ರಂದು ನಡೆಸಲಾಗಿತ್ತು. ಒಟ್ಟು 9,57,590 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು 4,56,625 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com