ಹಿಂಸಾಚಾರ ಇಸ್ಲಾಂಗೆ ವಿರುದ್ಧ, ಮಕ್ಕಳು ಹಿಂಸೆಯ ಹಾದಿ ತುಳಿಯದಂತೆ ತಡೆಯಬೇಕು: ಮುಫ್ತಿ

ಹಿಂಸಾಚಾರ ಇಸ್ಲಾಂಗೆ ವಿರುದ್ಧವಾಗಿದ್ದು, ನಿಮ್ಮ ಮಕ್ಕಳು ಹಿಂಸಾತ್ಮಕ ಹಾದಿ ತುಳಿಯದಂತೆ ನೋಡಿಕೊಳ್ಳಿ ಎಂದು ಜಮ್ಮು ಮತ್ತು...
ಮೆಹಬೂಬಾ ಮುಫ್ತಿ
ಮೆಹಬೂಬಾ ಮುಫ್ತಿ
Updated on: 
ಶ್ರೀನಗರ: ಹಿಂಸಾಚಾರ ಇಸ್ಲಾಂಗೆ ವಿರುದ್ಧವಾಗಿದ್ದು, ನಿಮ್ಮ ಮಕ್ಕಳು ಹಿಂಸಾತ್ಮಕ ಹಾದಿ ತುಳಿಯದಂತೆ ನೋಡಿಕೊಳ್ಳಿ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಸೋಮವಾರ ಪೋಷಕರಿಗೆ ಕರೆ ನೀಡಿದ್ದಾರೆ.
ಶಾಂತಿ ಮತ್ತು ಸೌರ್ಹಾದದಿಂದ ಜೀವನ ಮಾಡಿ ಅಂತ ದೇವರು ನಮಗೆ ಜೀವನ ನೀಡಿದ್ದಾನೆ. 18 ಅಥವಾ 21 ವರ್ಷಕ್ಕೆ ಕೊಲೆಯಾಗಿ ಅಂತ ಅಲ್ಲ. ಇದಕ್ಕೆ ಇಸ್ಲಾಂನಲ್ಲಿ ಅವಕಾಶವೂ ಇಲ್ಲ ಎಂದು ಕಾಶ್ಮೀರ ಸಿಎಂ ಹೇಳಿದ್ದಾರೆ.
ಯುವಕರನ್ನು ಬಲಿಪಡೆಯುತ್ತಿರುವ ಕಾಶ್ಮೀರ ಹಿಂಸಾಚಾರಕ್ಕೆ ರಾಷ್ಟ್ರೀಯ ನಾಯಕರು ಅರ್ಥಪೂರ್ಣ ಮಾತುಕತೆ ಮೂಲಕ ಪರಿಹಾರ ಕಡುಕೊಳ್ಳಬೇಕು ಎಂದು ಮುಫ್ತಿ ಒತ್ತಾಯಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಬಡ ಜನರ ಕೈಯಲ್ಲಿ ಬಂದೂಕು ಮತ್ತು ಕಲ್ಲು ಎರಡೂ ಇದೆ. ಆದುದರಿಂದ ಅವರ ಬದುಕು ದುರಂತಮಯವಾಗುವುದನ್ನು ತಪ್ಪಿಸಲು ಮಧ್ಯಂತರ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವಿದೆ ಎಂದಿದ್ದಾರೆ.
ಭಯೋತ್ಪಾದನೆಯ ಪಿಡುಗಿನಿಂದ ರಾಜ್ಯದಲ್ಲಿ ಜೀವ ಕಳೆದುಕೊಳ್ಳುತ್ತಿರುವ ಬಡ ಜನರನ್ನು ಪಾರು ಮಾಡಲು ಮಧ್ಯಮ ಮಟ್ಟದ ಉಪ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದು ಮೆಹಬೂಬ ಹೇಳಿದರು. 
ನಿನ್ನೆ ಶೋಪಿಯಾನ್‌ ಎನ್ ಕೌಂಟರ್‌ ನಲ್ಲಿ ಐವರು ನಾಗರಿಕರು ಹತ್ಯೆಯಾದ ಹಿನ್ನೆಲೆಯಲ್ಲಿ ಮೆಹಬೂಬಾ ಮುಫ್ತಿ ಅವರು, ಕೇಂದ್ರದಲ್ಲಿನ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ "ಹಾಲಿ ಸ್ಥಿತಿಯಲ್ಲಿ  ರಾಜ್ಯದ ಅಮಾಯಕರ ಜನರ ಜೀವ ಉಳಿಸಲು ಅವರ ಮೇಲೆ ಅನುಕಂಪವನ್ನು ತೋರಬೇಕು' ಎಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com