ಕಾವೇರಿ ವಿವಾದ: ಮೇ 14ರೊಳಗೆ ಯೋಜನೆಯ ಕರಡು ಸಲ್ಲಿಸುವಂತೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಆದೇಶ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕೇಂದ್ರ ಸರ್ಕಾರ ಮೇ 14ರ ಒಳಗೆ ಕರಡು ಸಲ್ಲಿಸಬೇಕೆಂದು ಆದೇಶ ನಿಡಿದೆ.
ಕಾವೇರಿ ನದಿ
ಕಾವೇರಿ ನದಿ
ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕೇಂದ್ರ ಸರ್ಕಾರ ಮೇ 14ರ ಒಳಗೆ ಯೋಜನೆಯ ಕರಡು ಸಲ್ಲಿಸಬೇಕೆಂದು ಆದೇಶ ನಿಡಿದೆ.
ಕಾವೇರಿ ವಿವಾದ ಸಂಬಂಧ ಸರ್ವೋಚ್ಚ ನ್ಯಾಯಾಲಯದ ತೀರ್ಪು ಜಾರಿಗೆ ಸೂಚಿಸಿದ ನ್ಯಾಯಾಲಯ ಮೇ 14ಕ್ಕೆ ಕೇಂದ್ರ ಜಲ ಸಂಪನ್ಮೂಲ ಕಾರ್ಯದರ್ಶಿ ನ್ಯಾಯಾಲಯದೆದುರು ಹಾಜರಾಗುವಂತೆ ತಿಳಿಸಿದೆ.
"ಮತ್ತೆ ಈ ವಿವಾದ ನ್ಯಾಯಾಲಯದ ಮುಂದೆ ಬರುವುದನ್ನು ನಾವು ಬಯಸುವುದಿಲ್ಲ. ಒಮ್ಮೆ ತೀರ್ಪು ನೀಡಿದ ಬಳಿಕ ಅದನ್ನು ಜಾರಿಗೆ ತರಬೇಕು" ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ  ಎ ಎಂ ಖಾನ್ವಿಲ್ಕರ್ ಮತ್ತು ಡಿ ವೈ ಚಂದ್ರಚೂಡ ಅವರನ್ನೊಳಗೊಂಡ ಪೀಠ ಆದೇಶಿಸಿದೆ.
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರವು ತೀರ್ಮಾನ ತೆಗೆದುಕೊಳ್ಳುವುದಕ್ಕೆ ಸಮಯ ಹಿಡಿಯುತ್ತದೆ ಎಂದ ಅಟಾರ್ನಿ ಜನರಲ್ ಕೆ. ಕೆ. ವೇಣುಗೋಪಾಲ್ ವಾದವನ್ನು ತಮಿಳು ನಾಡು ವಿರೋಧಿಸಿದೆ.
ಇದುವರೆಗೆ ಸ್ಕೀಮ್ ರಚನೆ ಮಾಡದ್ದಕ್ಕೆ ಕೇಂದ್ರದ ವಿರುದ್ಧ ತಮಿಳು ನಾಡು ಆಕ್ರೋಶ ವ್ಯಕ್ತಪಡಿಸಿದೆ.
ಕಾವೇರಿ ವಿವಾದ ಸಂಬಂಧ ನ್ಯಾಯಮಂಡಳಿ ನೀಡಿದ್ದ ತೀರ್ಪನ್ನು ಮಾರ್ಪಡಿಸಿ ಸುಪ್ರೀಂ ಕೋರ್ಟ್‌ ಕಳೆದ ಫೆಬ್ರುವರಿ 16ರಂದು ತೀರ್ಪು ಪ್ರಕಟಿಸಿತ್ತು.ಅದರಂತೆ ನೀರು ಹಂಚಿಕೆ ಸಂಬಂಧ ಕಾವೇರಿ ನಿರ್ವಹಣಾ ಮಂಡಳಿ ರಚನೆಯಾಗಬೇಕಿದೆ. ಅದಕ್ಕಾಗಿ ಸ್ಕೀಮ್ ಕರಡು ಸಲ್ಲಿಸುವಂತೆ ನ್ಯಾಯಾಲಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com