ಸತತ ಹಿಮಪಾತ: ಕೇದಾರನಾಥದಲ್ಲಿ ಸಿಲುಕಿರುವ ಹರೀಶ್ ರಾವತ್; ಯಾತ್ರೆಗೆ ತಡೆ

: ಕಳೆದ ರಾತ್ರಿಯಿಂದ ನಿರಂತರವಾಗಿ ಆಗುತ್ತಿರುವ ಹಿಮಪಾತದಿಂದಾಗಿ ಕೇದಾರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ...
ಕೇದಾರ ನಾಥ ದೇವಾಲಯ
ಕೇದಾರ ನಾಥ ದೇವಾಲಯ
ಡೆಹ್ರಾಡೂನ್: ಕಳೆದ ರಾತ್ರಿಯಿಂದ ನಿರಂತರವಾಗಿ ಆಗುತ್ತಿರುವ ಹಿಮಪಾತದಿಂದಾಗಿ ಕೇದಾರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ  ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಮಪಾತದಿಂದಾಗಿ ತಾತ್ಕಾಲಿಕವಾಗಿ ನಿಲುಗಡೆಗೊಂಡಿರುವ ಕೇದಾರನಾಥ ಯಾತ್ರೆಯಲ್ಲಿರುವ ಭಕ್ತರ ಪೈಕಿ ಸುಮಾರು ಆರು ಕಾಂಗ್ರೆಸ್‌ ನಾಯಕರು ಇದ್ದು ಅವರಲ್ಲಿ ಮಾಜಿ ಮುಖ್ಯಮಂತ್ರಿ ಹರೀಶ್‌ ರಾವ್‌, ರಾಜ್ಯ ಸಭಾ ಸದಸ್ಯ ಪ್ರದೀಪ್‌ ತಮ್ತಾ, ಸ್ಥಳೀಯ ಶಾಸಕ ಮನೋಜ್‌ ರಾವತ್‌ ಇದ್ದಾರೆ ಎಂದು ತಿಳಿದು ಬಂದಿದೆ.
ನಿರಂತರ ಹಿಮಪಾತದಿಂದಾಗಿ ಲಿಂಚೌಲಿ ಮತ್ತು ಭೀಮಬಲಿ ನಡುವಿನ ಮಾರ್ಗವು ಮುಚ್ಚಿದ್ದು ಅದನ್ನು ತೆರವುಗೊಳಿಸಿದ ಬಳಿಕ ಮತ್ತೆ ಕೇದಾರನಾಥ ಯಾತ್ರೆ ಮುಂದುವರಿಯುತ್ತದೆ. 
ಇನ್ನೂ ಬದರಿ ನಾಥದಲ್ಲೂ ಕೂಡ ಹೊಸದಾಗಿ ಹಿಮಪಾತ ಆರಂಭವಾಗಿದ್ದು, ಸುಮಾರು 2 ಇಂಚುಗಳಷ್ಟು ಹಿಮ ಹೊದಿಕೆಯಾಗಿದೆ.. ಅತ್ತ ದೆಹಲಿಯಲ್ಲಿ ಚಂಡಮಾರುತ ಅಪ್ಪಳಿಸುತ್ತಿದ್ದಂತೆಯೇ ಇತ್ತ ಹವಾಮಾನ ಇಲಾಖೆ 20 ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದೆ. ಪಂಜಾಬ್, ಹರಿಯಾಣ, ಚಂಡೀಘಡ, ದೆಹಲಿ, ಬಿಹಾರ, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಉತ್ತರ ಪ್ರದೇಶ, ಜಾರ್ಖಂಡ್, ಸಿಕ್ಕಿಂ, ಒಡಿಶಾ, ತೆಲಂಗಾಣ, ಉತ್ತರ ಕರ್ನಾಟಕ, ತಮಿಳುನಾಡು ಮತ್ತು ಕೇರಳಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಉಳಿದಂತೆ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com