ನಿವೃತ್ತಿ ಬೀಳ್ಕೊಡುಗೆ: ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಆಹ್ವಾನಕ್ಕೆ ನ್ಯಾ. ಚಲಮೇಶ್ವರ್ ನಕಾರ

ನ್ಯಾ.ಚಲಮೇಶ್ವರ್ ಅವರು ಜೂ.22 ಕ್ಕೆ ನಿವೃತ್ತರಾಗಲಿದ್ದು, ಸುಪ್ರೀಂ ಕೋರ್ಟ್ ನ ಬಾರ್ ಅಸೋಸಿಯೇಷನ್ (ಎಸ್ ಸಿ ಬಿಎ) ಯಿಂದ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನ್ಯಾ.ಚಲಮೇಶ್ವರ್
ನ್ಯಾ.ಚಲಮೇಶ್ವರ್
Updated on
ನವದೆಹಲಿ: ನ್ಯಾ.ಚಲಮೇಶ್ವರ್ ಅವರು ಜೂ.22 ಕ್ಕೆ ನಿವೃತ್ತರಾಗಲಿದ್ದು, ಸುಪ್ರೀಂ ಕೋರ್ಟ್ ನ ಬಾರ್ ಅಸೋಸಿಯೇಷನ್ (ಎಸ್ ಸಿ ಬಿಎ) ಯಿಂದ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಈ ಸಮಾರಂಭದಲ್ಲಿ ವೈಯಕ್ತಿಕ ಕಾರಣಗಳಿಂದಾಗಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ ಎಂದು ನ್ಯಾ.ಚಲಮೇಶ್ವರ್ ಹೇಳಿದ್ದಾರೆ. 
ನ್ಯಾ.ಚಲಮೇಶ್ವರ್ ಸಮಾರಂಭದಕ್ಕೆ ಗೈರು ಹಾಜರಾಗುತ್ತಿರುವುದನ್ನು ಸ್ವತಃ ಎಸ್ ಸಿಬಿಎ ಪದಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸುಪ್ರೀಂ ಕೋರ್ಟ್ ನ ಇತರ ಮೂವರು ಹಿರಿಯ ನ್ಯಾಯಮೂರ್ತಿಗಳು ಸಿಜೆಐ ದೀಪಕ್ ಮಿಶ್ರಾ ಅವರ ವಿರುದ್ಧ ಆರೋಪ ಮಾಡಿ ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ನ್ಯಾ.ಚಲಮೇಶ್ವರ್ ಸಹ ಭಾಗಿಯಾಗಿದ್ದರು. 
ಸುಪ್ರೀಂ ಕೋರ್ಟ್ ನ ಬಾರ್ ಕೌನ್ಸಿಲ್ ಅಧ್ಯಕ್ಷ ವಿಕಾಸ್ ಸಿಂಗ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಮೇ.18 ರಂದು ನಡೆಯುವ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಚಲಮೇಶ್ವರ್ ಅವರಿಗೆ ಆಹ್ವಾನ ನೀಡಲಾಯಿತು. ಆದರೆ ವೈಯಕ್ತಿಕ ಕಾರಣಗಳಿಂದ ಬರಲು ಸಾಧ್ಯವಾಗುತ್ತಿಲ್ಲ ಎಂದು ಚಲಮೇಶ್ವರ್ ಹೇಳಿರುವುದಾಗಿ ಸಿಂಗ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com