ನಳಂದ,ಬಿಹಾರ: ಮೊಹಮದ್ ಅಲಿ ಜಿನ್ನಾ ಭಾವಚಿತ್ರ ವಿವಾದಕ್ಕೆ ಸಂಬಂಧಿಸಿದಂತೆ ಯೋಗಗುರು ಬಾಬಾ ರಾಮದೇವ್ ಪ್ರತಿಕ್ರಿಯೆ ನೀಡಿದ್ದಾರೆ.
ಬಿಹಾರದ ನಳಂದದಲ್ಲಿ ಆಯೋಜಿಸಿದ್ದ ಯೋಗ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರತಿಮೆ ಅಥವಾ ಫೋಟೋಗಳ ಬಗ್ಗೆ ಮುಸ್ಲಿಮರಿಗೆ ನಂಬಿಕೆಯಿಲ್ಲ, ಹೀಗಿರುವಾಗ ಮಹಮದ್ ಅಲಿ ಜಿನ್ನಾ ಭಾವಚಿತ್ರದ ಬಗ್ಗೆ ಏಕೆ ಚಿಂತಿತರಾಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಪಾಕಿಸ್ತಾನ ಸಂಸ್ಥಾಪಕ ಜಿನ್ನಾ ಅವರ ದೇಶಕ್ಕೆ ಮಾತ್ರ ಒಳ್ಳೆಯವರು, ಆದರೆ ಏಕತೆ ಮತ್ತು ಸಮಗ್ರತೆ ಮೇಲೆ ನಂಬಿಕೆ ಇಟ್ಟಿರುವ ಭಾರತದಲ್ಲಿ ಆತ ಆದರ್ಶ ವ್ಯಕ್ತಿ ಅಲ್ಲ ಎಂದು ಹೇಳಿರುವ ಅವರು ಜಿನ್ನಾ ಪ್ರೇತಾತ್ಮ ಬಹಳಷ್ಟು ಬೆಳಕಿಗೆ ಬರುತ್ತಿದೆ ಎಂದು ಹೇಳಿದ್ದಾರೆ.