ನ್ಯಾ. ಜೋಸೆಫ್ ಪದೋನ್ನತಿಗೆ ಮನವಿ, ನ್ಯಾ.ಚಲಮೇಶ್ವರ್ ರಿಂದ ಸಿಜೆಐ ಗೆ ಪತ್ರ

ಸುಪ್ರೀಂ ಕೋರ್ಟ್ ಹಿರಿಯ ನ್ಯಾಯಮೂರ್ತಿ ಚಲಮೇಶ್ವರ್ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರವೊಂದನ್ನು ಬರೆದು ಉತ್ತರಾಖಂಡ್ ಮುಖ್ಯ ನ್ಯಾಯಮೂರ್ತಿ....
ನ್ಯಾ. ಜೋಸೆಫ್ ಪದೋನ್ನತಿಗೆ ಮನವಿ,  ನ್ಯಾ.ಚಲಮೇಶ್ವರ್ ರಿಂದ ಸಿಜೆಐ ಗೆ ಪತ್ರ
ನ್ಯಾ. ಜೋಸೆಫ್ ಪದೋನ್ನತಿಗೆ ಮನವಿ, ನ್ಯಾ.ಚಲಮೇಶ್ವರ್ ರಿಂದ ಸಿಜೆಐ ಗೆ ಪತ್ರ
ನವದೆಹಲಿ: ಸುಪ್ರೀಂ ಕೋರ್ಟ್ ಹಿರಿಯ ನ್ಯಾಯಮೂರ್ತಿ ಚಲಮೇಶ್ವರ್ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರವೊಂದನ್ನು ಬರೆದು ಉತ್ತರಾಖಂಡ್ ಮುಖ್ಯ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಅವರನ್ನು ಸರ್ವೋಚ ನ್ಯಾಯಾಲಯ ನ್ಯಾಯಮೂರ್ತಿಗಳಾಗಿ ಉನ್ನತೀಕರಿಸಲು ಕೊಲಿಜಿಯಂ ಸಭೆ ಕರೆಯಬೇಕೆಂದು ಕೋರಿದ್ದಾರೆ.
ಈ ಹಿಂದೆ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಉನ್ನತೀಕರಣ ಪ್ರಸ್ತಾಪವನ್ನು ಕೇಂದ್ರವು ತಿರಸ್ಕರಿಸಿತ್ತು. ಏಪ್ರಿಲ್ 26ರಂದು ಜ್ಕೇಂದ್ರ ಸರ್ಕಾರ ಕೊಲಿಜಿಯಂ ಪ್ರಸ್ತಾವನೆಯನ್ನು ತಿರಸ್ಕರಿಸಿ ಪದೋನ್ನತಿ ಪ್ರಸ್ತಾಪವನ್ನು ಮರುಪರಿಶೀಲಿಸಲು ಕೇಳಿತ್ತು.ಈ ಪ್ರಸ್ತಾಪವು ಉನ್ನತ ನ್ಯಾಯಾಲಯದ ನಿಯಮಾವಳಿಗಳಿಗೆ ಅನುಗುಣವಾಗಿಲ್ಲ ಎನ್ನುವುದಾಗಿ ಅದು ಹೇಳಿದೆ.
ಜೂನ್ 22 ರಂದು ನಿವೃತ್ತರಾಗಿರುವ  ನ್ಯಾ. ಚಲಮೇಶ್ವರ್ ಉತ್ತರಾಖಂಡ ನ್ಯಾ.ಜೋಸೆಫ್ಪದೋನ್ನತಿಗೆ ಕೋರಿ ಪತ್ರ ಬರೆದಿದ್ದಾರೆ. ನಿನ್ನೆ (ಬುಧವಾರ) ಕೊಲಿಜಿಯಂ ಸಭೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ನ್ಯಾ.ಚಲಮೇಶ್ವರ್ ರಜೆಯಲ್ಲಿದ್ದರು  ಹೀಗಾಗಿ ಆದಷ್ಟು ಶೀಘ್ರದಲ್ಲಿ ಕೊಲಿಜಿಯಂ ಸಭೆ ಕರೆದು ನ್ಯಾ. ಕೆ.ಎಂ.ಜೋಸೆಫ್ ಪದೋನ್ನತಿಗೆ ಮತ್ತೆ ಶಿಫಾರಸು ಮಡಬೇಕೆಂದು ಅವರು ಕೇಳಿದ್ದಾರೆ ಎನ್ನಲಾಗಿದೆ.
ಈ ಮುನ್ನ ಕೊಲಿಜಿಯಂ ಸದಸ್ಯರು ಸಿಜೆಐಗೆ ಬರೆದ ಶಿಫಾರಸು ಪತ್ರದಲ್ಲಿ ಜೋಸೆಫ್ ಹೆಸರಿದ್ದಿತಾದರೂ ಕೇಂದ್ರವು ಆ ಪ್ರಸ್ತಾಪವನ್ನು ಅಮಾನ್ಯಗೊಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com