ಭಾರತ ಆಕ್ರಮಿತ ಕಾಶ್ಮೀರ ಎಂಬುದು ಇಲ್ಲ: ಸಹಾಯ ಕೇಳಿದ ಕಾಶ್ಮೀರಿ ವಿದ್ಯಾರ್ಥಿಗೆ ಸುಷ್ಮಾ ಸ್ವರಾಜ್

ಭಾರತದ ವಿದೇಶಾಂಗ ಇಲಾಖೆಯಿಂದ ಸಹಾಯ ಕೇಳಿದ ಫಿಲಿಪೇನ್ಸ್ ನಲ್ಲಿರುವ ಕಾಶ್ಮೀರ ಮೂಲದ ವಿದ್ಯಾರ್ಥಿಗೆ ಸುಷ್ಮಾ ಸ್ವರಾಜ್ ಕಾಶ್ಮೀರದ ಬಗ್ಗೆ ಬುದ್ಧಿವಾದ ಹೇಳಿದ್ದಾರೆ.
ಭಾರತ ಆಕ್ರಮಿತ ಕಾಶ್ಮೀರ ಎಂಬುದು ಇಲ್ಲ: ಸಹಾಯ ಕೇಳಿದ ಕಾಶ್ಮೀರಿ ವಿದ್ಯಾರ್ಥಿಗೆ ಸುಷ್ಮಾ ಸ್ವರಾಜ್
ಭಾರತ ಆಕ್ರಮಿತ ಕಾಶ್ಮೀರ ಎಂಬುದು ಇಲ್ಲ: ಸಹಾಯ ಕೇಳಿದ ಕಾಶ್ಮೀರಿ ವಿದ್ಯಾರ್ಥಿಗೆ ಸುಷ್ಮಾ ಸ್ವರಾಜ್
ನವದೆಹಲಿ: ಭಾರತದ ವಿದೇಶಾಂಗ ಇಲಾಖೆಯಿಂದ ಸಹಾಯ ಕೇಳಿದ ಫಿಲಿಪೇನ್ಸ್ ನಲ್ಲಿರುವ ಕಾಶ್ಮೀರ ಮೂಲದ ವಿದ್ಯಾರ್ಥಿಗೆ ಸುಷ್ಮಾ ಸ್ವರಾಜ್ ಕಾಶ್ಮೀರದ ಬಗ್ಗೆ ಬುದ್ಧಿವಾದ ಹೇಳಿದ್ದಾರೆ. 
ಶೇಖ್ ಅತೀಕ್ ಎಂಬ ವಿದ್ಯಾರ್ಥಿ ಪಾಸ್ ಪೋರ್ಟ್ ಗೆ ಸಂಬಂಧಿಸಿದಂತೆ ಸಹಾಯ ಕೇಳಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೆ ಟ್ವೀಟ್ ಮಾಡಿದ್ದರು. " ನಾನು ಫಿಲಿಪೇನ್ಸ್ ನಲ್ಲಿ ವೈದ್ಯಕೀಯ ವಿಷಯ ವ್ಯಾಸಂಗ ಮಾಡುತ್ತಿರುವ ಜಮ್ಮು-ಕಾಶ್ಮೀರ ಮೂಲದ ವಿದ್ಯಾರ್ಥಿ, ನನ್ನ ಪಾಸ್ಪೋರ್ಟ್ ಹಾಳಾಗಿದ್ದು ಒಂದು ತಿಂಗಳ ಹಿಂದೆ ಪುನಃ ಪಡೆಯಲು ಅರ್ಜಿ ಸಲ್ಲಿಸಿದ್ದೆ, ಈಗ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಮಸ್ಯೆಗಾಗಿ ಭಾರತಕ್ಕೆ ಬರಬೇಕಿದ್ದು ತುರ್ತಾಗಿ ಪಾಸ್ಪೋರ್ಟ್ ಅಗತ್ಯವಿದೆ ಸಹಾಯ ಮಾಡಿ" ಎಂದು ಮನವಿ ಮಾಡಿದ್ದ. 
ವಿದ್ಯಾರ್ಥಿಯ ಟ್ವಿಟರ್ ಪ್ರೊಫೈಲ್ ನಲ್ಲಿ ಆತನ ಮೂಲ ಭಾರತ ಆಕ್ರಮಿತ ಕಾಶ್ಮೀರ ಎಂಬುದನ್ನು ಗಮನಿಸಿದ ಸುಷ್ಮಾ ಸ್ವರಾಜ್, ನೀವು ಜಮ್ಮು-ಕಾಶ್ಮೀರ ರಾಜ್ಯದವರಾಗಿದ್ದರೆ, ನಾವು ಖಂಡಿತ ಸಹಾಯ ಮಾಡುತ್ತೇವೆ, ಆದರೆ ನಿಮ್ಮ ಪ್ರೊಫೈಲ್ ಪ್ರಕಾರ ನೀವು ಭಾರತ ಆಕ್ರಮಿತ ಕಾಶ್ಮೀರದಲ್ಲಿದ್ದೀರಿ, ಭಾರತ ಆಕ್ರಮಿತ ಕಾಶ್ಮೀರ ಎಂಬ ಪ್ರದೇಶವಿಲ್ಲ ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ.  ನಂತರ ವಿದ್ಯಾರ್ಥಿ ತನ್ನ ವಿವರದಲ್ಲಿ ಭಾರತ ಆಕ್ರಮಿತ ಕಾಶ್ಮೀರ ಎಂಬುದನ್ನು ಡಿಲೀಟ್ ಮಾಡಿದ್ದಾನೆ ಅಷ್ಟೇ ಅಲ್ಲದೇ ಆತನ ಟ್ವೀಟ್ ಖಾತೆಯೂ ಡಿಲೀಟ್ ಆಗಿದೆ. ಬದಲಾವಣೆಯನ್ನು ಗಮನಿಸಿದ ಸುಷ್ಮಾ ಸ್ವರಾಜ್ ವಿದ್ಯಾರ್ಥಿಗೆ ಸಹಾಯ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com