ಹಿಮಾಂಶು ರಾಯ್ ಹಲವು ಉನ್ನತ-ಮಟ್ಟದ ಪ್ರಕರಣಗಳ ತನಿಖೆಯನ್ನು ಮುನ್ನಡೆಸಿದ್ದ ಸೂಪರ್ ಕಾಪ್

ಪೋಲೀಸ್ ಅಧಿಕಾರಿ ಹಿಮಾಂಶು ರಾಯ್ ಹಲವು ಉನ್ನತ ಮಟ್ಟದ ಪ್ರಕರಣಗಳ ತನಿಖೆಯನ್ನು ಮುನ್ನಡೆಸಿದ್ದು, ಗೆಳೆಯರ ಬಳಗದಲ್ಲಿ ಫಿಟ್ನೇಸ್ ಫ್ರೇಕ್ ಹಾಗೂ ಸೂಪರ್ ಕಾಪ್ ಎಂದೇ ಹೆಸರುವಾಸಿಯಾಗಿದ್ದರು.
ಹಿಮಾಂಶು ರಾಯ್
ಹಿಮಾಂಶು ರಾಯ್

ನವದೆಹಲಿ :  ಮುಂಬೈಯಲ್ಲಿಂದು ತಮ್ಮ  ರಿವಾಲ್ವರ್ ನಿಂದಲೇ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಉಗ್ರ ನಿಗ್ರಹ ದಳದ ಮಾಜಿ ಮುಖ್ಯಸ್ಥ, ಪೋಲೀಸ್ ಅಧಿಕಾರಿ  ಹಿಮಾಂಶು ರಾಯ್  ಹಲವು ಉನ್ನತ ಮಟ್ಟದ ಪ್ರಕರಣಗಳ ತನಿಖೆಯನ್ನು ಮುನ್ನಡೆಸಿದ್ದು, ಗೆಳೆಯರ ಬಳಗದಲ್ಲಿ  ಫಿಟ್ನೇಸ್ ಫ್ರೇಕ್ ಹಾಗೂ ಸೂಪರ್ ಕಾಪ್ ಎಂದೇ ಹೆಸರುವಾಸಿಯಾಗಿದ್ದರು.

ಹಿಮಾಂಶು ರಾಯ್ ನಡೆಸಿದ್ದ ಕೆಲ ಉನ್ನತ ಮಟ್ಟದ ಪ್ರಕರಣಗಳ ತನಿಖೆಗಳು ಈ ಕೆಳಗಿನಂತಿವೆ.

 * 2013ರ  ಐಪಿಎಲ್  ಕ್ರಿಕೆಟ್ ಟೂರ್ನಿಯಲ್ಲಿ ಬೆಳಕಿಗೆ ಬಂದಿದ್ದ ಸ್ಪಾಟ್ ಪಿಕ್ಸಿಂಗ್ ಪ್ರಕರಣದ ತನಿಖೆ ಸಂಬಂಧ  ಬುಕ್ಕಿಗಳೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಹಿನ್ನೆಲೆಯಲ್ಲಿ  ವಿದು ದಾರಾ ಸಿಂಗ್  ಹಾಗೂ  ಗುರುನಾಥ್  ಮೇಯಪ್ಪನ್ ಅವರನ್ನು  ಬಂಧಿಸಿದ್ದರು.  ಗುರುನಾಥ್ ಮೇಯಪ್ಪನ್  ಮಾಜಿ ಐಸಿಸಿ ಅಧ್ಯಕ್ಷ ಎನ್ . ಶ್ರೀನಿವಾಸನ್ ಅವರ ಆಳಿಯ  ಹಾಗೂ ಚನ್ನೈ ಸೂಪರ್ ಕಿಂಗ್ಸ್ ಪ್ರಾಂಚೈಸಿ ಯಾಗಿದ್ದರು. ಈ ಪ್ರಕರಣದಲ್ಲಿ ಕ್ರಿಕಿಟಿಗ ಶ್ರೀಶಾಂತ್ ಅವರನ್ನು ತನಿಖೆಗೊಳಪಡಿಸಿದ್ದರು.

* ಹಿಮಾಂಶು ರಾಯ್  ಉಗ್ರ ನಿಗ್ರಹ ದಳದ ಮುಖ್ಯಸ್ಥರಾದ ನಂತರ  ಬಾದ್ರಾ ಕುರ್ಲಾದಲ್ಲಿನ ಅಮೆರಿಕನ್ ಸ್ಕೂಲ್ ಸಂಕೀರ್ಣ  ಸ್ಪೋಟ ಸಂಚಿನ ಆರೋಪದ ಮೇರೆಗೆ ಸಾಪ್ಟ್ ವೇರ್ ಎಂಜಿನಿಯರ್  ಅನೀಸ್  ಅನ್ಸಾರಿಯನ್ನು ಬಂಧಿಸಿದ್ದರು. 26/11 ಮುಂಬೈಯ ದಾಳಿಯ ಪ್ರಕರಣದಲ್ಲಿ ಈತ ಮುಖ್ಯ ಪಾತ್ರ ವಹಿಸಿದ್ದ. ದಾವೂದ್ ಇಬ್ರಾಹೀಂ ಸಹೋದರ ಇಕ್ಬಾಲ್ ಕಸ್ಕಾರ್ ಚಾಲಕ ಅರಿಫ್ ಬಾಯೆಲ್ ಮೇಲೆ 2011ರಲ್ಲಿ ಹಿಮಾಂಶ್ ರಾಯ್ ಗುಂಡಿನ ದಾಳಿ ನಡೆಸಿದ್ದರು.


* ಪತ್ರಕರ್ತ ಜೆ ದೇಯ್ ಕೊಲೆ ಪ್ರಕರಣದ ತನಿಖೆಯಲ್ಲೂ ಹಿಮಾಂಶು ರಾಯ್ ಪ್ರಮುಖ ಪಾತ್ರ ವಹಿಸಿದ್ದರು. ತನಿಖಾ ಪತ್ರಿಕೋದ್ಯಮದಲ್ಲಿ ಹೆಸರುವಾಸಿದ್ದ ಜೆ ದೇಯ್,  ಮೇಲೆ ಹಾಡುಹಾಗಲೇ ನಾಲ್ವರು ಅಪರಿಚಿತರು ಗುಂಡಿನ ದಾಳಿ ನಡೆಸಿ 2011 ಜೂನ್.11 ರಂದು ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ದರೋಡೆಕೋರ ಚೋಟ ರಾಜನ್ ಅವರಿಗೆ ಈ ತಿಂಗಳ ಆರಂಭದಲ್ಲಿ ದೋಷಿ ಎಂದು  ನ್ಯಾಯಾಲಯ ಘೋಷಿಸಿದೆ

*  ಮುಂಬೈನ ವಕೀಲೆ ಪಲ್ಲವಿ ಪುರ್ ಕಾಯಸ್ತ ಕೊಲೆ ಪ್ರಕರಣದ ತನಿಖೆಯನ್ನು ಸಹ ಹಿಮಾಂಶು ರಾಯ್ ನಡೆಸಿದ್ದರು.  ದೆಹಲಿ ಮೂಲದ ಐಎಎಸ್ ಅಧಿಕಾರಿಯಾಗಿದ್ದ ಪಲ್ಲವಿ ಅವರನ್ನು ಸೆಂಟ್ರಲ್ ಮುಂಬೈನಲ್ಲಿ ಅಮಾನವೀಯ ರೀತಿಯಲ್ಲಿ  2012ರಲ್ಲಿ ಹತ್ಯೆ ಮಾಡಲಾಗಿತ್ತು. ಆಕೆಯ ಮನೆ ಕಾವಲುಗಾರನೇ  ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕುತ್ತಿಗೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ. ಆತನಿಗೆ 2014ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

* ಹಿಮಾಂಶು ರಾಯ್ ದೆಹಲಿಯಲ್ಲಿ 2012ರಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣದ ತನಿಖೆ ನಡೆಸಿದ್ದರು. ಅರುಣ್ ಟಿಕ್ಕು ಮತ್ತು ಚಿತ್ರ ನಿರ್ಮಾಪಕ ಕರಣ್ ಕುಮಾರ್ ಕಕ್ಕಡ್ ಹತ್ಯೆ ಮಾಡಿದ್ದ ಪ್ರಮುಖ ಆರೋಪಿ ವಿಜಯ್ ಪಾಲಂಡೆಯನ್ನು  ಬಂಧಿಸಿ ಜೈಲಿಗೊಪ್ಪಿಸಿದ್ದರು.









ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com