ಮಹಾರಾಷ್ಟ್ರ: ಖೈದಿಗಳಿಗಾಗಿ ಜೈಲಿನಲ್ಲಿ ರೇಡಿಯೋ ಕೇಂದ್ರ ಸ್ಥಾಪನೆ

ಮಹಾರಾಶ್ಟ್ರದ ಅಹಮದ್ ನಗರ ಜೈಲಿನಲ್ಲಿ ಖೈದಿಗಳಿಗೆ ವಿಶೇಷ ರೇಡಿಯೋ ಸ್ಟೇಷನ್ ಪ್ರಾರಂಭಿಸುವ ಮೂಲಕ ಖೈದಿಗಳ ಪುನರ್ವಸತಿ ಹಾಗೂ ಸುಧಾರಣೆ ಸಂಬಂಧ ವಿಶೇಷ ಪ್ರಯತ್ನವೊಂದು ನಡೆದಿದೆ.
ಮಹಾರಾಷ್ಟ್ರ: ಖೈದಿಗಳಿಗಾಗಿ ಜೈಲಿನಲ್ಲಿ ರೇಡಿಯೋ ಕೇಂದ್ರ ಸ್ಥಾಪನೆ
ಮಹಾರಾಷ್ಟ್ರ: ಖೈದಿಗಳಿಗಾಗಿ ಜೈಲಿನಲ್ಲಿ ರೇಡಿಯೋ ಕೇಂದ್ರ ಸ್ಥಾಪನೆ
Updated on: 
ಆಹಮದ್ ನಗರ(ಮಹಾರಾಷ್ಟ್ರ): ಮಹಾರಾಶ್ಟ್ರದ ಅಹಮದ್ ನಗರ ಜೈಲಿನಲ್ಲಿ ಖೈದಿಗಳಿಗೆ ವಿಶೇಷ ರೇಡಿಯೋ ಸ್ಟೇಷನ್ ಪ್ರಾರಂಭಿಸುವ ಮೂಲಕ ಖೈದಿಗಳ ಪುನರ್ವಸತಿ ಹಾಗೂ ಸುಧಾರಣೆ ಸಂಬಂಧ ವಿಶೇಷ ಪ್ರಯತ್ನವೊಂದು ನಡೆದಿದೆ.
ವಿಶೇಷವೆಂದರೆ ಈ ರೇಡಿಯೋ ಕೇಂದ್ರ ಸಂಪೂರ್ಣವಾಗಿ ಖೈದಿಗಳಿಂದಲೇ ನಡೆಸಲ್ಪಡುತ್ತಿದೆ.
"ಈ ರೇಡಿಯೋ ಸ್ಟೇಷನ್ ಸಂಪೂರ್ಣವಾಗಿ ಅಪರಾಧಿಗಳು, ಖೈದಿಗಳಿಂದ ನಿರ್ವಹಿಸಲ್ಪಡುತ್ತಿದೆ. ಹಾಡುಗಳ ವಿನಂತಿ, ಆರೋಗ್ಯ ಕಾರ್ಯಕ್ರಮ, ಭಕ್ತಿಗೀತೆ, ಆದ್ಯಾತ್ಮಿಕ ಕಾರ್ಯಕ್ರಮಗಳನ್ನು ರೇಡಿಯೋದಲ್ಲಿ ಪ್ರಸಾರೆಅ ಮಾಡಲಾಗುತ್ತದೆ."ಜೈಲು ಸೂಪರಿಟೆಂಡೆಂಟ್ ಎನ್.ಜೆ. ಸಾವಂತ್ ಹೇಳಿದ್ದಾರೆ.
ರೇಡಿಯೋ ಕಾರ್ಯಕ್ರಮ ಪ್ರಸಾರಕ್ಕಾಗಿ ಜೈಲಿನ ಪ್ರತಿ ಬ್ಯಾರಕ್ ನಲ್ಲಿ ಸ್ಪೀಕರ್ ಗಳನ್ನು ಅಳವಡಿಸಲಾಗಿದೆ.
"ಖೈದಿಗಳ ಮನಸ್ಸನ್ನು ಉತ್ತಮ ಸಕಾರಾತ್ಮಕತೆಗೆ ತಿರುಗಿಸಲು, ಅವರಲ್ಲಿ ಧನಾತ್ಮಕ ಆಲೋಚನೆ ಹೊಮ್ಮಿಸಲು ನಾವು ಈ ಪ್ರೆಅಯತ್ನ ಮಾಡುತ್ತಿದ್ದೇವೆ"ಹಿರಿಯ ಜೈಲರ್ ಶ್ಯಾಮಕಾಂತ್ ಹೇಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com