ಆದಾಯ ತೆರಿಗೆ ರದ್ದುಗೊಳಿಸುವಂತೆ ಸುಬ್ರಮಣಿಯನ್ ಸ್ವಾಮಿ ಒತ್ತಾಯ

ಮಧ್ಯಮ ವರ್ಗದ ಮೇಲೆ ಭಾರವನ್ನು ತಗ್ಗಿಸಲು ಮತ್ತು ದೇಶದಲ್ಲಿ ಹೆಚ್ಚಿನ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಆದಾಯ ತೆರಿಗೆ ರದ್ದುಗೊಳಿಸುವಂತೆ ಬಿಜೆಪಿಯ ರಾಜ್ಯಸಭೆ ಸದಸ್ಯ ಸುಬ್ರಮಣಿಯನ್ ಸ್ವಾಮಿ ಒತ್ತಾಯಿಸಿದ್ದಾರೆ.
ಸುಬ್ರಮಣಿಯನ್ ಸ್ವಾಮಿ
ಸುಬ್ರಮಣಿಯನ್ ಸ್ವಾಮಿ

ನವದೆಹಲಿ : ಮಧ್ಯಮ ವರ್ಗದ ಮೇಲೆ ಭಾರವನ್ನು ತಗ್ಗಿಸಲು ಮತ್ತು ದೇಶದಲ್ಲಿ ಹೆಚ್ಚಿನ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಆದಾಯ ತೆರಿಗೆ ರದ್ದುಗೊಳಿಸುವಂತೆ ಬಿಜೆಪಿಯ ರಾಜ್ಯಸಭೆ ಸದಸ್ಯ ಸುಬ್ರಮಣಿಯನ್ ಸ್ವಾಮಿ  ಒತ್ತಾಯಿಸಿದ್ದಾರೆ.

ಮಧ್ಯಮ ವರ್ಗದವರು ಮತ್ತು ಆರಂಭಿಕ ಆದಾಯದ ಯುವ ಉದ್ಯಮಿಗಳು ಆದಾಯ ತೆರಿಗೆಯ ಕಾರಣದಿಂದ ಬಳಲುತ್ತಿದ್ದಾರೆ , ಅದು ಅವರಿಗೆ "ಕಿರುಕುಳ" ಎನ್ನಿಸುತ್ತದೆ ಎಂದು ಅವರು ಹೇಳಿದ್ದಾರೆ.

"ಹಾಗಾದರೆ, ಭಾರತದಲ್ಲಿ ಯಾರು (ಆದಾಯ ತೆರಿಗೆ) ತೀರಾ ಕಡಿಮೆ ಭಾಗವನ್ನು ಪಾವತಿಸುತ್ತಿದ್ದಾರೆ? ಆದ್ದರಿಂದ, ಈ ಸಣ್ಣ ಭಾಗದ ಮೇಲೆ ನೀವು ಈ ಹೊರೆಯನ್ನು ಏಕೆ ವಿಧಿಸಬೇಕು" ಎಂದು ಸ್ವಾಮಿ ಕೇಳಿದ್ದಾರೆ.

ಆದಾಯ ತೆರಿಗೆ ರದ್ದುಗೊಳಿಸುವುದರಿಂದ ದೊಡ್ಡ ಪ್ರಮಾಣದ ಉಳಿತಾಯವಾಗಿ ಹೂಡಿಕೆ ಪ್ರಮಾಣದಲ್ಲೂ ಹೆಚ್ಚಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಆದಾಯ ತೆರಿಗೆ ರದ್ದು ಅಂದರೆ ಉಳಿತಾಯದ ದರ ಹೆಚ್ಚಾಗುತ್ತಿದೆ. ಉಳಿತಾಯದ ದರ ಹೆಚ್ಚಾದ್ದರೆ ಹೂಡಿಕೆ ಪ್ರಮಾಣವೂ ಹೆಚ್ಚಾಗುತ್ತದೆ, ಹೂಡಿಕೆ ಪ್ರಮಾಣ ಹೆಚ್ಚಾದರೆ ಆರ್ಥಿಕ ಬೆಳವಣಿಗೆ ಸಾಧಿಸಬಹುದು. ಆದ್ದರಿಂದ  ಪರೋಕ್ಷ ತೆರೆಗೆಯಿಂದ ತುಂಬಾ ನಷ್ಟವಾಗುತ್ತಿದ್ದು,ಅದನ್ನು ರದ್ದುಗೊಳಿಸುವಂತೆ  ಸುಬ್ರಮಣಿಯನ್ ಸ್ವಾಮಿ ಪ್ರತಿಪಾದಿಸಿದ್ದಾರೆ.

8 ನೇ ಐಐಐಎ (ಇಂಡಿಯನ್ ಎಕ್ಸಿಬಿಷನ್ ಇಂಡಸ್ಟ್ರಿ ಅಸೋಸಿಯೇಷನ್) ಮುಕ್ತ ಸಂವಾದದ ಕಾರ್ಯಕ್ರಮದಲ್ಲಿ  ಉದಯೋನ್ಮಖ ವಿಶ್ವದಲ್ಲಿ ಭಾರತದ ಭವಿಷ್ಯ ವಿಷಯ ಕುರಿತಂತೆ ಅವರು ಮಾತನಾಡುತ್ತಿದ್ದರು.

ಆದಾಯ ತೆರಿಗೆ ರದ್ದತಿಯಿಂಂದ ಉಂಟಾಗುವ ನಷ್ಟವನ್ನು ಕಲ್ಲಿದ್ದಲು ಬ್ಲಾಂಕ್ ಹಂಚಿಕೆ, ಸ್ಪೆಕ್ಟ್ರೇಮ್ ಮತ್ತಿತರ  ನೈಸರ್ಗಿಕ ಸಂಪನ್ಮೂಲಗಳ ಹರಾಜನ್ನು ಹೆಚ್ಚಿಸುವ ಮೂಲಕ  ಭರಿಸಿಕೊಳ್ಳಬಹುದು.  ಕಲ್ಲಿದ್ದಲು ಬ್ಲಾಂಕ್ ನ್ನು ಹರಾಜು ಮಾಡುವುದರಿಂದ ಸಂಪನ್ಮೂಲ ಹೆಚ್ಚಿಸಿಕೊಂಡಂತಾಗಿದೆ. ಇಂತಹ ಪದ್ಧತಿಯನ್ನು ಅನುಸರಿಸುವಂತೆ ಅವರು ಸರ್ಕಾರಕ್ಕೆ ಹೇಳಿದ್ದಾರೆ.

10 ವರ್ಷಗಳ ಅವಧಿಯಲ್ಲಿ ಸರ್ಕಾರ ಶೇ.10 ರಷ್ಟು ಬೆಳವಣಿಗೆಯಾದರೆ, ನಿರುದ್ಯೋಗ ಮತ್ತು ಬಡತನ ಸಮಸ್ಯೆಯನ್ನು ನಿವಾರಿಸಬಹುದು ಎಂದು ಸುಬ್ರಮಣಿಯನ್ ಸ್ವಾಮಿ ತಮ್ಮ ಭಾಷಣದಲ್ಲಿ ತಿಳಿಸಿದರು.



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com