ನವದೆಹಲಿ: ಎಕೆ-47 ಬುಲೆಟ್ ನಿಂದ ರಕ್ಷಣೆ ನೀಡುವ ಸಾಮರ್ಥ್ಯವುಳ್ಳ ಗುಂಡು ನಿರೋಧಜ ಜಾಕೆಟ್ ಶೀಘ್ರವೇ ಭಾರತೀಯ ಯೋಧರ ಕೈ ಸೇರಲಿದೆ.
ಎಕೆ-47 ಬುಲೆಟ್ ಗಳು ವಿಶ್ವದಲ್ಲೇ ಅತ್ಯಂತ ಘಾತುಕವಾದ ಬುಲೆಟ್ ಆಗಿದ್ದು, ಇದರಿಂದಲೂ ರಕ್ಷಣೆ ನೀಡಬಲ್ಲ ಬುಲೆಟ್ ಪ್ರೂಫ್ ಜಾಕೆಟ್ ಗಳು ಶೀಘ್ರವೇ ಭಾರತೀಯ ಯೋಧರಿಗೆ ಸಿಗಲಿದೆ. ಈ ಬುಲೆಟ್ ಪ್ರೂಫ್ ಜಾಕೆಟ್ ಗಳು ಡಿಎಂಎಸ್ ಆರ್ ಡಿಇ ಯಿಂದ ಭಾರತದಲ್ಲೇ ತಯಾರಾಗಿದ್ದು, ನಿರಂತರ 5 ವರ್ಷಗಳ ಸಂಶೋಧನೆಯ ಫಲವಾಗಿದೆ.
ಯೋಧರ ಕುತ್ತಿಗೆ, ಎದೆ ಭಾಗ ಹಾಗೂ ತೊಡೆ ಭಾಗಗಳಿಗೂ ಈ ಗುಂಡು ನಿರೋಧಕ ಜಾಕೆಟ್ ರಕ್ಷಣೆ ನೀಡಲಿದೆ. ಹತ್ತಿರದಿಂದ ಎಕೆ-47 ರೈಫಲ್ ನಿಂದ ಗುಂಡು ಹಾರಿಸಿದರೂ ಸಹ ಯೋಧರಿಗೆ ಮಾರಣಾಂತಿಕ ಗಾಯಗಳು ಆಗುವುದಿಲ್ಲ ಎಂದು ಡಿಎಂಎಸ್ ಆರ್ ಡಿಇ ಅಧಿಕಾರಿಗಳು ಹೇಳಿದ್ದಾರೆ. ಮೊದಲ ಭಾಗದಲ್ಲಿ ಒಂದು ಲಕ್ಷ ಯುನಿಟ್ ನಷ್ಟು ಜಾಕೆಟ್ ಗಳನ್ನು ವಿತರಣೆ ಮಾಡಲಾಗುತ್ತದೆ.