ರಾಜಮಂಡ್ರಿ: ದೋಣಿ ಮಗುಚಿ 40 ಜನ ಜಲಸಮಾಧಿ ಶಂಕೆ

60 ಮಂದಿ ಪಯಣಿಸುತ್ತಿದ್ದ ದೋಣಿಯೊಂದು ಮಗುಚಿ 40 ಮಂದಿ ಜಲಸಮಾಧಿಯಾಗಿರುವ ಶಂಕೆ ವ್ಯಕ್ತವಾಗಿದೆ...
ದೋಣಿ ದುರಂತ
ದೋಣಿ ದುರಂತ
Updated on
ರಾಜಮಂಡ್ರಿ: 60 ಮಂದಿ ಪಯಣಿಸುತ್ತಿದ್ದ ದೋಣಿಯೊಂದು ಮಗುಚಿ 40 ಮಂದಿ ಜಲಸಮಾಧಿಯಾಗಿರುವ ಶಂಕೆ ವ್ಯಕ್ತವಾಗಿದೆ. 
ನಿನ್ನೆ ಸಂಜೆ ರಾಜಮಂಡ್ರಿಯ ದೇವಿಪಟ್ಟಣಂ ಸಮೀಪದ ಗೋದಾವರಿ ನದಿಯಲ್ಲಿ ದೋಣಿ ಮುಳುಗಿ ಈ ದುರ್ಘಟನೆ ಸಂಭವಿಸಿದೆ. ಈ ವೇಳೆ ಸ್ಥಳೀಯರು 20 ಜನರನ್ನು ರಕ್ಷಿಸಿದ್ದು ಸಂಜೆಯಾದ್ದರಿಂದ ರಕ್ಷಣಾ ಕಾರ್ಯಕ್ಕೆ ಅಡಚಣೆಯಾಗಿತ್ತು. 
ಇನ್ನು ದೋಣಿಯಲ್ಲಿ ಮದುವೆ ದಿಬ್ಬಣದ ಜೊತೆಗೆ ಬಹುತೇಕ ಮಂದಿ ಪ್ರವಾಸಿಗರಿದ್ದರು. ಇದೀಗ ಬೆಳಗ್ಗೆಯಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್‌) ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ(ಎಸ್ಡಿಆರ್‌ಎಫ್‌) ಸಹ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com