ಕಥುವಾ ಪ್ರಕರಣ: ಸ್ಥಿತಿ ವರದಿ ಸಲ್ಲಿಕೆಗೆ ಜಮ್ಮು ಕಾಶ್ಮೀರ ಸರ್ಕಾರಕ್ಕೆ ಅವಕಾಶ ನೀಡಿದ 'ಸುಪ್ರೀಂ'

ಜಮ್ಮು ಕಾಶ್ಮೀರದ ಕಥುವಾದಲ್ಲಿ ನಡೆದ ಎಂಟರ ಬಾಲಕಿಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಂಬಂಧ ಸ್ಥಿತಿ ವರದಿ ಸಲ್ಲಿಸುವಂತೆ ಜಮ್ಮು ಕಾಶ್ಮೀರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ನವದೆಹಲಿ: ಜಮ್ಮು ಕಾಶ್ಮೀರದ ಕಥುವಾದಲ್ಲಿ ನಡೆದ ಎಂಟರ ಬಾಲಕಿಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಂಬಂಧ ಸ್ಥಿತಿ ವರದಿ ಸಲ್ಲಿಸುವಂತೆ ಜಮ್ಮು ಕಾಶ್ಮೀರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಪ್ರಮುಖ ಆರೋಪಿಯ ಮೂವರು ಕಾಲೇಜು ಸ್ನೇಹಿತರಿಂದ, ರಾಜ್ಯ ಸರ್ಕಾರ ತನಿಖೆಯ ದಾರಿ ತಪ್ಪಿಸಬಹುದು ಎಂಬ ದ ಆರೋಪ ಕೇಳಿದ ಬಳಿಕ ನ್ಯಾಯಾಲಯ ಈ ಆದೇಶ ನಿಡಿದೆ.
ಪ್ರಕರಣದ ಪ್ರಮುಖ ಆರೋಪಿ ವಿಶಾಲ್ ಜಂಗೋತ್ರ ಮೂವರು ಕಾಲೇಜು ಸ್ನೇಹಿತರು ಸಲ್ಲಿಸಿದ್ದ ನೂತನ ಮನವಿಯನ್ನು ಆಲಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನೇತೃತ್ವದ ಪೀಠವು ಅರ್ಜಿದಾರರಿಗೆ ತನಿಖೆಯ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಅಪರಾಧ ಶಾಖೆ ಅಧಿಕಾರಿಗಳಿಂದ ಚಿತ್ರಹಿಂಸೆ ಮತ್ತು ಬೆದರಿಕೆ ಹಾಕದಂತೆ ಕೇಂದ್ರೀಯ ಸಂಸ್ಥೆಯಿಂದ ರಕ್ಷಣೆ ನೀಡಲಾಗುವುದು.ಎಂಬ ಭರವಸೆ ನಿಡಿದೆ,
ಜಮ್ಮು ಪ್ರದೇಶದವರಾದ ವಿದ್ಯಾರ್ಥಿಗಳಾದ ಸಾಹಿಲ್ ಶರ್ಮಾ, ಸಚಿನ್ ಶರ್ಮಾ ಮತ್ತು ನೀರಜ್ ಶರ್ಮಾ ಹಾಗೂ ಅವರ ಕುಟುಂಬ ಬೆದರಿಕೆಗೆಒಳಗಾಗುತ್ತಿದ್ದಾರೆ ಎಂದು ವಿದ್ಯಾರ್ಥಿಗಳ ಪರ ವಕೀಲ  ರವಿ ಶರ್ಮಾ ಹೇಳಿದ್ದಾರೆ
ಜಮ್ಮು ಮೂಲದ ವಿದ್ಯಾರ್ಥಿಗಳು ಉತ್ತರ ಪ್ರದೇಶದ ಮುಜಫರ್ ನಗರ  ಕಾಲೇಜಿನಲ್ಲಿ ಕೃಷಿ ಕ್ಷೇತ್ರದ ಬಿಎಸ್ಸ್ಸಿ ಪದವಿ ವ್ಯಾಸಂಗ ಮಾಡುತ್ತಿದ್ದು ಅವರು ಆರೋಪಿ ಜಂಗೋತ್ರ ಅವರ ಸಹಪಾಠಿಗಳಾಗಿದ್ದಾರೆ.
ಜನವರಿ 7 ರಿಂದ ಫೆಬ್ರವರಿ 10 ರವರೆಗೆ ಮುಜಫರ್ ನಗರದಲ್ಲಿ ಜಂಗೊತ್ರಾ ತಮ್ಮೊಂದಿಗೆ ಇದ್ದರು. ಆದರೆ ಪೋಲೀಸರು ಸತ್ಯದ ವಿರುದ್ಧ ಹೇಳಿಕೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com