ಅಯೋಧ್ಯಾ ವಿವಾದ: 1994 ರ ತೀರ್ಪು ಮರುಪರಿಶೀಲನೆ ಮನವಿಗೆ ಹಿಂದೂ ಸಂಘಟನೆಗಳ ವಿರೋಧ

ಅಯೋಧ್ಯೆ ವಿವಾದಕ್ಕೆ ಅಂಬಂಧಿಸಿ ಹಿಂದೂ ಧಾರ್ಮಿಕ ಮುಖಂಡರು 1994 ರ ಸುಪ್ರೀಂ ತೀರ್ಪಿಗೆ ಬದ್ದವಾಗಿರಬೇಕೆನ್ನುವ ತಮ್ಮ ಪ್ರತಿವಾದಿ ಮುಸ್ಲಿಮ್....
ಬಾಬರಿ ಮಸೀದಿ
ಬಾಬರಿ ಮಸೀದಿ
ನವದೆಹಲಿ: ಅಯೋಧ್ಯೆ ವಿವಾದಕ್ಕೆ ಅಂಬಂಧಿಸಿ ಹಿಂದೂ ಧಾರ್ಮಿಕ ಮುಖಂಡರು 1994 ರ ಸುಪ್ರೀಂ ತೀರ್ಪನ್ನು ಮರುಪರಿಶೀಲಿಸಬೇಕೆನ್ನುವ  ತಮ್ಮ ಪ್ರತಿವಾದಿ  ಮುಸ್ಲಿಮ್ ಸಮುದಾಯ ಮುಖಂಡರ ಮನವಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಅಯೋಧ್ಯೆ ಪ್ರಕರಣದ ಮೂಲ ಪ್ರತಿವಾದಿಗಳಲ್ಲಿ ಒಬ್ಬರಾಗಿದ್ದ ಎಂ. ಸಿದ್ದೀಕ್, ಮರಣ ಹೊಂದಿದ್ದು ಅವರ ಕಾನೂನುಬದ್ದ ಉತ್ತರಾಧಿಕಾರಿಯಾದ ಎಂ. ಇಸ್ಮಾಯಿಲ್ ಫರೂಕಿ 1994 ರ ತೀರ್ಪಿನ ಉಲ್ಲೇಖ ಮಾಡಿ ಮಸೀದಿಯು ಮುಸ್ಲಿಂ ಬಾಂಧವರ ಪ್ರಾರ್ಥನೆಗಳಿಗಾಗಿನ ಅವಿಭಾಜ್ಯ ಅಂಗ ಎಂದಿದ್ದಾರೆ.
ಮುಖ್ಯ ನ್ಯಾಯಮೂರ್ತಿ ದಿಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಎಸ್. ಎ. ನಝೀರ್ ಅವರ ವಿಶೇಷ ಪೀಠದ ಎದುರು  ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ಭೂ ಸ್ವಾಧೀನ ಕುರಿತ ವಿಚಾರದಲ್ಲಿ ಈ ಹಿಂದೆ 1994 ರ ಸುಪ್ರೀಂ ತೀರ್ಪನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದ್ದರು.
ಅಯೋಧ್ಯೆಯ ವಿವಾದದ ತೀರ್ಪಿನಲ್ಲಿ ಅಲಹಾಬಾದ್ ಹೈಕೋರ್ಟ್ ಇದನ್ನು ಈಗಾಗಲೇ ಉಲ್ಲೇಖಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com