ಹಣಕಾಸು ಆಯೋಗ ಶಿಫಾರಸು ತಿದ್ದುಪಡಿಗೆ ಮನವಿ, ರಾಷ್ಟ್ರಪತಿಗಳ ಭೇಟಿ ಮಾಡಿದ ವಿರೋಧ ಪಕ್ಷಗಳ ಹಣಕಾಸು ಸಚಿವರ ನಿಯೋಗ

ದೇಶದ ಆರು ವಿರೋಧ ಪಕ್ಷ ಆಡಳಿತವಿರುವ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಸಚಿವರುಗಳು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಭೇಟಿಯಾಗಿದ್ದಾರೆ.
15 ನೇ ಹಣಕಾಸು ಆಯೋಗ ಶಿಫಾರಸ್ಸಿಗೆ ತಿದ್ದುಪಡಿ ಕೋರಿ ವಿರೋಧ ಪಕ್ಷಗಳಿಂದ  ರಾಷ್ಟ್ರಪತಿಗೆ ಮನವಿ
15 ನೇ ಹಣಕಾಸು ಆಯೋಗ ಶಿಫಾರಸ್ಸಿಗೆ ತಿದ್ದುಪಡಿ ಕೋರಿ ವಿರೋಧ ಪಕ್ಷಗಳಿಂದ ರಾಷ್ಟ್ರಪತಿಗೆ ಮನವಿ
ನವದೆಹಲಿ: ದೇಶದ ಆರು ವಿರೋಧ ಪಕ್ಷ ಆಡಳಿತವಿರುವ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಸಚಿವರುಗಳು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಭೇಟಿಯಾಗಿದ್ದಾರೆ. ಅವರು ಈ ವೇಳೆ  15 ನೇ ಹಣಕಾಸು ಆಯೋಗದ "ಅಸಮರ್ಪಕ" ನಿಯಮಗಳ ತಿದ್ದುಪಡಿ ಮಾಡುವಂತೆ ಕೋರಿದ್ದಾರೆ.
ನಿಯೋಗದಲ್ಲಿ ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಮತ್ತು ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸಹ ಉಪಸ್ಥಿತರಿದ್ದರು. ಈ ಇಬ್ಬರೂ ಆಯಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಹಣಕಾಸು ಇಲಾಖೆಯನ್ನು ನಿರ್ವಹಿಸುತ್ತಾರೆ.
ಇನ್ನು ನಿಯೋಗದಲ್ಲಿ  ಪಂಜಾಬ್, ಪಶ್ಚಿಮ ಬಂಗಾಳ, ಕೇರಳ ಮತ್ತು ಆಂಧ್ರಪ್ರದೇಶದ ಹಣಕಾಸು ಸಚಿವರೂ ಇದ್ದರು.
" 15 ನೇ ಹಣಕಾಸು ಆಯೋಗದ ಶಿಫಾರಸ್ಸುಗಳು ಈಗಿನಂತೆಯೇ ಜಾರಿಯಾದಲ್ಲಿ ರಾಜ್ಯಗಳು ತಮ್ಮ ಆರ್ಥಿಕ ಸ್ವಾಯತ್ತತೆಯನ್ನು ಕಳೆದುಕೊಳ್ಳಲಿವೆ" ರಾಷ್ಟ್ರಪತಿಗಳ ಭೇಟಿಯ ಬಳಿಕ ದೆಹಲಿ ಉಪ ಮುಖ್ಯಮಂತ್ರಿ ರ ಸಿಸೋಡಿಯಾ ಹೇಳಿದರು.
"15 ನೇ ಹಣಕಾಸು ಆಯೋಗದ ಶಿಫಾರಸ್ಸುಗಳು ಗಂಭೀರವಾದ  ಸಮಸ್ಯೆಯನ್ನು ತಂದೊಡ್ಡಲಿದೆ.ಇದೊಮ್ಮೆ ಈಗಿರುವ ಹಾಗೆಯೇ ಜಾರಿಯಾದಲ್ಲಿ  "ಸಂವಿಧಾನಾತ್ಮಕ ನಿಬಂಧನೆಗಳ ಉಲ್ಲಂಘನೆ" ಆಗಲಿದೆ ಇದರಲ್ಲಿ ಸಾಕಷ್ಟು ತಾಂತ್ರಿಕ ದೋಷಗಳಿದ್ದು ಇದಕ್ಕೆ ಸೂಕ್ತ ತಿದ್ದುಪಡಿ ತರಬೇಕಿದೆ.
ಹಣಕಾಸು ಆಯೋಗದ ಶಿಪಾರಸು ಜಾರಿಯಿಂದ ರಾಜ್ಯಗಳು  "ಗಮನಾರ್ಹ ಆರ್ಥಿಕ ಸಂಕಷ್ಟಗಳಿಗೆ" ಈಡಾಗುತ್ತದೆ ಎನ್ನುವುದಾಗಿ ನಿಯೋಗವು ರಾಷ್ಟ್ರಪತಿಗಳಿಗೆ ಮನವರಿಕೆ ಮಾಡಿದೆ.
ದೆಹಲಿಯಲ್ಲಿ ಎಎಪಿ ಅಧಿಕಾರಕ್ಕೆ ಬಂದ್ಂದಿನಿಂದ ಮುಖ್ಯಮಂತ್ರಿ  ಅರವಿಂದ್ ಕೇಜ್ರಿವಾಲ್ ಮತ್ತು ಸಿಶೋದಿಯಾ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತೆರಿಗೆ ಆದಾಯದಲ್ಲಿ ದೆಹಲಿಗೆ ಸಲ್ಲಬೇಕಾದ "ನ್ಯಾಯಯುತ ಪಾಲ್ನ್ನು" ನೀಡುತ್ತಿಲ್ಲ ಎಂದು ದೂರುತ್ತಾ ಬಂದಿದ್ದಾರೆ. ಈ ಏಪ್ರಿಲ್ ನಲ್ಲಿ ಕೇಜ್ರಿವಾಲ್ ನ್ಯಾಯಾಲಯದಲ್ಲಿ ಕೇಂದ್ರದ ನಿಲುವನ್ನು ಪ್ರಶ್ನಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com