ಕೊಚ್ಚಿ: ಕೇರಳದ ಕಾಸರಗೋಡಿನಲ್ಲಿ ಮುಸ್ಲಿಂ ಮಹಿಳೆಯನ್ನು ಮದುವೆಯಾಗಿದ್ದ ಯುವ ಕಾಂಗ್ರೆಸ್ ನಾಯಕನನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಚ್ಚಿಯ ಸಿಬಿಐ ವಿಶೇಷ ಕೋರ್ಟ್ ಇಬ್ಬರು ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ. ಅಲ್ಲದೆ ತಲಾ ಒಂದು ಲಕ್ಷ ರುಪಾಯಿ ದಂಡ ವಿಧಿಸಿದೆ.
2001ರಲ್ಲಿ ಮುಸ್ಲಿಂ ಮಹಿಳೆಯನ್ನು ಮದುವೆಯಾಗಿದ್ದ ಯುವ ಕಾಂಗ್ರೆಸ್ ಬಾಲಕೃಷ್ಣನ್ ಅವರನ್ನು ಹತ್ಯೆ ಮಾಡಲಾಗಿತ್ತು.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಸಿಬಿಐ ನ್ಯಾಯಾಧೀಶ ಎಸ್ ಸಂತೋಷ್ ಕುಮಾರ್ ಅವರು, ಅಪರಾಧಿಗಳಾದ ಮೊಹಮ್ಮದ್ ಇಖ್ಬಾಲ್ ಅಲಿಯಾಸ್ ಇಕ್ಕು, ಹಾಗೂ ಮೊಹಮ್ಮದ್ ಹನೀಫ್ ಅಲಿಯಾಸ್ ಜ್ಯಾಕಿ ಹನೀಫ್ ಗೆ ಜೀವಾವಧಿ ಶಿಕ್ಷೆ ವಿಧಿಸಿದೆ ಮತ್ತು ಇತರೆ ನಾಲ್ವರು ಆರೋಪಿಗಳನ್ನು ಖುಲಾಸೆಗೊಳಿಸಿದೆ.
ದಂಡದ ಹಣವನ್ನು ಬಾಲಕೃಷ್ಣನ್ ಅವರ ತಂದೆ ಗೋಪಾಲನ್ ಅವರಿಗೆ ನೀಡಬೇಕು ಎಂದು ಸಿಬಿಐ ಕೋರ್ಟ್ ಆದೇಶಿಸಿದೆ.