ತಿರುಪತಿ ದೇವಾಲಯದ ಪ್ರಧಾನ ಅರ್ಚಕ ಎವಿ ರಮಣ ದೀಕ್ಷಿತರಿಗೆ ಹುದ್ದೆಯಿಂದ ಕೆಳಗಿಳಿಯಲು ಟಿಟಿಡಿ ಸೂಚನೆ

ತಿರುಪತಿ ತಿರುಮಲ ದೇವಸ್ಥಾನದಲ್ಲಿ ಪರಂಪರಾಗತವಾಗಿ ಇರುವ ಅಲ್ಲಿನ ಪ್ರಧಾನ ಅರ್ಚಕರಾದ ರಮಣ ...
ಚೆನ್ನೈಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಟಿಟಿಡಿ ಪ್ರಧಾನ ಅರ್ಚಕ ಎವಿ ರಮಣ ದೀಕ್ಷಿತರು
ಚೆನ್ನೈಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಟಿಟಿಡಿ ಪ್ರಧಾನ ಅರ್ಚಕ ಎವಿ ರಮಣ ದೀಕ್ಷಿತರು

ತಿರುಪತಿ: ತಿರುಪತಿ ತಿರುಮಲ ದೇವಸ್ಥಾನದಲ್ಲಿ ಪರಂಪರಾಗತವಾಗಿ ಇರುವ ಅಲ್ಲಿನ ಪ್ರಧಾನ ಅರ್ಚಕರಾದ ರಮಣ ದೀಕ್ಷಿತರು ಮತ್ತು ಇತರ ಮೂವರು ಮುಖ್ಯ ಅರ್ಚಕರಾದ ಶ್ರೀನಿವಾಸ ದೀಕ್ಷಿತರು, ನಾರಾಯಣ ದೀಕ್ಷಿತರು ಮತ್ತು ನರಸಿಂಹ ದೀಕ್ಷಿತರು ಅವರಿಗೆ ನಿವೃತ್ತಿಯ ಆದೇಶ ನೀಡಲಾಗಿದೆ. ಮತ್ತು ತಕ್ಷಣದಿಂದಲೇ ದೇವಾಲಯದ ಪೂಜಾ ವಿಧಿ ವಿಧಾನಗಳಲ್ಲಿ ಭಾಗವಹಿಸದಂತೆ ಸೂಚಿಸಲಾಗಿದೆ.

ಕಳೆದ ಮಧ್ಯರಾತ್ರಿ 12 ಗಂಟೆಗೆ ಅರ್ಚಕರಿಗೆ ಈ ಆದೇಶವನ್ನು ಹಸ್ತಾಂತರಿಸಲಾಗಿದ್ದು ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟಿಗಳಮಂಡಳಿಯ(ಟಿಟಿಡಿ) ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದಂತೆ ಈ ಆದೇಶ ನೀಡಲಾಗಿದೆ ಎಂದು ಹೇಳಿದರು.

ದೇವಸ್ಥಾನದಲ್ಲಿ ಪೂಜೆ ಮಾಡುವ ಅರ್ಚಕರ ನಿವೃತ್ತಿ ವಯಸ್ಸನ್ನು 65 ವರ್ಷಕ್ಕೆ ನಿಗದಿಪಡಿಸಬೇಕೆಂದು ತಿರುಪತಿ ತಿರುಮಲ ದೇವಸ್ಥಾನ ಮಂಡಳಿ ನಿರ್ಧರಿಸಿದ್ದು, ಈ ಬಗ್ಗೆ ಕಾನೂನು ಸಲಹೆಯನ್ನು ಕೇಳಿದೆ. ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಮುಖ್ಯಮಂತ್ರಿ ಕಚೇರಿ ಮತ್ತು ಸಶಕ್ತೀಕರಣ ಇಲಾಖೆಯ ಆದೇಶದಂತೆ ಕಳೆದ ರಾತ್ರಿ ಟಿಟಿಡಿ ಅಧಿಕಾರಿಗಳು ಸಭೆ ನಡೆಸಿ ಟಿಟಿಡಿ ಮಂಡಳಿಯ ನಿರ್ಧಾರವನ್ನು ಜಾರಿಗೆ ತರಬೇಕೆಂದು ಮತ್ತು ನಾಲ್ವರು ಮುಖ್ಯ ಅರ್ಚಕರಿಗೆ 65 ವರ್ಷ ನಿವೃತ್ತಿ ವಯಸ್ಸನ್ನು ನಿಗದಿಪಡಿಸಬೇಕೆಂದು ಆದೇಶ ತರುವಂತೆ ಕೋರಲು ನಿರ್ಧಾರ ತೆಗೆದುಕೊಂಡಿತ್ತು.

ಇಂದು ಬೆಳಗ್ಗೆ ದೇವಸ್ಥಾನದ ಪೂಜಾ ವಿಧಿ ವಿಧಾನ ನಡೆಸಬೇಕಾಗಿದ್ದ ಪ್ರಧಾನ ಅರ್ಚಕ ಎವಿ ರಮಣ ದೀಕ್ಷಿತರು ಟಿಟಿಡಿಯ ಆದೇಶದಂತೆ ದೇವಸ್ಥಾನದಲ್ಲಿ ಕರ್ತವ್ಯಕ್ಕೆ ಬರಲಿಲ್ಲ. ಧಾರ್ಮಿಕ ವಿಧಿ ವಿಧಾನಗಳನ್ನು ಬೇರೆ ಅರ್ಚಕರು ನೆರವೇರಿಸಿದರು. ಈ ಮಧ್ಯೆ ಟಿಟಿಡಿ ವೇಣುಗೋಪಾಲ್ ದೀಕ್ಷಿತರು ಅವರನ್ನು ನೂತನ ಮುಖ್ಯ ಅರ್ಚಕರನ್ನಾಗಿ ನೇಮಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com