ಭಾರತದ ಮಾರಕ ದಾಳಿಗೆ ತತ್ತರಿಸಿದ ಪಾಕಿಸ್ತಾನ: ಶಾಂತಿ ಕಾಪಾಡಲು ಪಾಕಿಸ್ತಾನದ ಸಮ್ಮತಿ

ಗಡಿಯಲ್ಲಿ ತನ್ನ ಪುಂಡಾಟವನ್ನು ಮುಂದುವರೆಸಿದ್ದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತಕ್ಕ ಪಾಠ ಕಲಿಸಿದ್ದು, ಭಾರತದ ಮಾರಕ ದಾಳಿಗೆ ತತ್ತರಿಸಿರುವ ಪಾಕಿಸ್ತಾನ ಗಡಿಯಲ್ಲಿ ಶಾಂತಿ ಕಾಪಾಡಲು ಸಮ್ಮತಿ ಸೂಚಿಸಿದೆ.
ಭಾರತದ ಮಾರಕ ದಾಳಿಗೆ ತತ್ತರಿಸಿದ ಪಾಕಿಸ್ತಾನ: ಶಾಂತಿ ಕಾಪಾಡಲು ಪಾಕಿಸ್ತಾನದ ಸಮ್ಮತಿ
ಭಾರತದ ಮಾರಕ ದಾಳಿಗೆ ತತ್ತರಿಸಿದ ಪಾಕಿಸ್ತಾನ: ಶಾಂತಿ ಕಾಪಾಡಲು ಪಾಕಿಸ್ತಾನದ ಸಮ್ಮತಿ
ಜಮ್ಮು: ಗಡಿಯಲ್ಲಿ ತನ್ನ ಪುಂಡಾಟವನ್ನು ಮುಂದುವರೆಸಿದ್ದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತಕ್ಕ ಪಾಠ ಕಲಿಸಿದ್ದು, ಭಾರತದ ಮಾರಕ ದಾಳಿಗೆ ತತ್ತರಿಸಿರುವ ಪಾಕಿಸ್ತಾನ ಗಡಿಯಲ್ಲಿ ಶಾಂತಿ ಕಾಪಾಡಲು ಸಮ್ಮತಿ ಸೂಚಿಸಿದೆ. 
ಜಮ್ಮು ಅಂತಾರಾಷ್ಟ್ರೀಯ ಗಡಿಯಲ್ಲಿ ಶಾಂತಿ ಕಾಪಾಡಲು ಪಾಕಿಸ್ತಾನ ರೇಂಜರ್ ಗಳು ಒಪ್ಪಿಗೆ ಸೂಚಿಸಿದ್ದಾರೆ ಎಂದು ಬಿಎಸ್ ಎಫ್ ಹಾಗೂ ರೇಂಜರ್ ಅಧಿಕಾರಿಗಳು ತಿಳಿಸಿದ್ದಾರೆ. 
ಉಭಯ ದೇಶಗಳ ಬಿಎಸ್ ಎಫ್ ಹಾಗೂ ರೇಂಜರ್ ಅಧಿಕಾರಿಗಳು ದೂರವಾಣಿ ಕರೆ ಮೂಲಕ ಮಾತನಾಡಿದ್ದು, ಪಾಕಿಸ್ತಾನ ರೇಂಜರ್ ಗಳು ಅಂತಾರಾಷ್ಟ್ರೀಯ ಗಡಿಯಲ್ಲಿ ಶಾಂತಿ ಕಾಪಾಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಮೇ.18ರಂದು ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿದ್ದ ಪಾಕಿಸ್ತಾನ ಸೇನೆ ಇಬ್ಬರು ನಾಗರೀಕರನ್ನು ಬಲಿ ಪಡೆದುಕೊಂಡಿತ್ತು. ಪಾಕಿಸ್ತಾನ ಈ ಉದ್ಧಟತನಕ್ಕೆ ದಿಟ್ಟ ಉತ್ತರ ನೀಡಿದ್ದ ಗಡಿ ಭದ್ರತಾ ಪಡೆಗಳು ಅಂತರಾಷ್ಟ್ರೀಯ ಗಡಿಯಲ್ಲಿದ್ದ ಪಾಕಿಸ್ತಾನ ಸೇನಾ ಬಂಕರ್ ಗಳನ್ನು ಧ್ವಂಸಗೊಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com