ಬಿಜೆಪಿ ಮೇಲಿನ ಶಿವಸೇನೆಯ ನಿಷ್ಠೆಯನ್ನು ಪ್ರಶ್ನಿಸಿದ ಫಡ್ನವಿಸ್

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಮ್ಮ ಸರ್ಕಾರದ ಸಹಭಾಗಿ ಪಕ್ಷವಾದ ಶಿವಸೇನೆ ಬಿಜೆಪಿ ಮೇಲಿನ ನಿಷ್ಠೆಯನ್ನು ಪ್ರಶ್ನಿಸಿದ್ದಾರೆ.
ದೇವೇಂದ್ರ ಫಡ್ನವಿಸ್
ದೇವೇಂದ್ರ ಫಡ್ನವಿಸ್
ನಲ ಸೊಪಾರಾ(ಮಹಾರಾಷ್ಟ್ರ): ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಮ್ಮ ಸರ್ಕಾರದ ಸಹಭಾಗಿ ಪಕ್ಷವಾದ  ಶಿವಸೇನೆ ಬಿಜೆಪಿ ಮೇಲಿನ ನಿಷ್ಠೆಯನ್ನು ಪ್ರಶ್ನಿಸಿದ್ದಾರೆ.
ನಲ ಸೊಪಾರಾದಲ್ಲಿನ ಸಾರ್ವತ್ರಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಫಡ್ನವಿಸ್ ಶಿವಸೇನೆಯ ಹೆಸರನ್ನು ಉಲ್ಲೇಖಿಸದೆ ಮಾತನಾಡುತ್ತಾ, "ಅವರು ನಮ್ಮನ್ನು ಬೆಂಬಲಿಸುತ್ತಿದ್ದಾರೆ ಎಂದು ಹೇಳುವ ಒಂದು ಪಕ್ಷ (ಶಿವಸೇನೆ)ದ ನಿಜವಾದ ನಿಷ್ಠೆ ನಮ್ಮ ಮೇಲಿದೆಯೋ ಅಥವಾ ಕಾಂಗ್ರೆಸ್, ಎನ್ಸಿಪಿ, ಬಹುಜನ್ ವಿಕಾಸ್ ಅಘಾದಿ ಅಥವಾ ಇನ್ನಾವುದೇ ಪಕ್ಷದ ಕಡೆಗಿದೆಯೆ?" ಎಂದು ಪ್ರಶ್ನಿಸಿದರು.
ಬಿಜೆಪಿ ಮತ್ತು ಶಿವಸೇನೆ ನಡುವೆ ಇತ್ತೀಚಿನ ವರ್ಷದಲ್ಲಿ ಬಿರುಕುಂತಾಗಿದ್ದ ವಿಚಾರ ಇದೇನೂ ಹೊಸದಾಗಿ ಉಳಿದಿಲ್ಲ.ರಡೂ ಪಕ್ಷಗಳು ಸಾರ್ವಜನಿಕ ಸಭೆಗಳಲ್ಲಿ ಅಥವಾ ಇನ್ನಾವುದೇ ಸಂದರ್ಭದಲ್ಲಿ ಪರಸ್ಪರ  ಟೀಕೆಗಳನ್ನು ಮಾಡುತ್ತಿದೆ.
ಮಹಾರಾಷ್ಟ್ರದ ಪಾಲ್ಗಾರ್ ಲೋಕಸಭಾ ಕ್ಷೇತ್ರಕ್ಕೆ ಇದೇ ಮೇ 28ರಂದು ಉಪ ಚುನಾವಣೆ ನಡೆಯಲಿದೆ. ಬಿಜೆಪಿಯ ಸಂಸತ್ ಸದಸ್ಯರಾಗಿದ್ದ ಚಿಂತಾಮನ್ ವಂಗಾ ಅವರ ಮರಣದಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ.
2014 ರ ಲೋಕಸಭೆ ಚುನಾವಣೆಯಲ್ಲಿ ಪಾಲ್ಗಾರ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಂಗಾ ಸಂಸದರಾಗಿ ಆಯ್ಕೆಯಾಗಿದ್ದರು. ಅವರು ಈ ವರ್ಷ ಜನವರಿ 30 ರಂದು ನಿಧನರಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com