ರಾಹುಲ್ ಗಾಂಧಿ
ದೇಶ
ಮಧ್ಯಪ್ರದೇಶ ರ್ಯಾಲಿಯಲ್ಲಿ ಅವಹೇಳನಕಾರಿ ಭಾಷಣ ಮಾಡದಂತೆ ರಾಹುಲ್‌ಗೆ ಖಡಕ್ ಶರತ್ತು!
ಜೂನ್ 6ರಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಧ್ಯಪ್ರದೇಶದ ಮಲ್ಹಾರಗಢದಲ್ಲಿ ರ್ಯಾಲಿಯಲ್ಲಿ ಭಾಗವಹಿಸುತ್ತಿದ್ದು ಈ ರ್ಯಾಲಿಗೆ ಮಲ್ಹಾರಗಢದ ಉಪ ವಿಭಾಗೀಯ ಅಧಿಕಾರಿ...
ಭೋಪಾಲ್: ಜೂನ್ 6ರಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಧ್ಯಪ್ರದೇಶದ ಮಲ್ಹಾರಗಢದಲ್ಲಿ ರ್ಯಾಲಿಯಲ್ಲಿ ಭಾಗವಹಿಸುತ್ತಿದ್ದು ಈ ರ್ಯಾಲಿಗೆ ಮಲ್ಹಾರಗಢದ ಉಪ ವಿಭಾಗೀಯ ಅಧಿಕಾರಿ, ರಾಹುಲ್ ಗಾಂಧಿಗೆ 19 ಶರತ್ತುಗಳನ್ನು ಹಾಕಿದ್ದಾರೆ.
ಕೆಲ ಪ್ರಮುಖ ಶರತ್ತುಗಳು ಹೀಗಿವೆ:
* ಧಾರ್ಮಿಕ ಭಾವನೆಗಳಿಗೆ ದಕ್ಕೆ ಉಂಟು ಮಾಡುವ ಪದಗಳನ್ನು ಭಾಷಣದಲ್ಲಿ ಬಳಸಬಾರದು.
* ರ್ಯಾಲಿಯಲ್ಲಿ ಡಿಜೆ ಸೌಂಡ್ ಸಿಸ್ಟಮ್ ಬಳಸಕೂಡದು.
* ರ್ಯಾಲಿ ನಡೆಯುವ ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ಥೆ, ವಿದ್ಯುತ್, ನೀರು, ಅಗ್ನಿಶಾಮಕ ವ್ಯವಸ್ಥೆಗಳನ್ನು ಸಂಘಟಕರೇ ಮಾಡಬೇಕು.
* ರ್ಯಾಲಿಗಾಗಿ ಹಾಕಲಾಗುವ ಟೆಂಟ್ ಗಾತ್ರ 15 ಅಡಿ ಉದ್ದ 15 ಅಡಿ ಅಗಲ ಮೀರಬಾರದು.
* ರ್ಯಾಲಿಯಿಂದ ಜನ ಹಾಗೂ ವಾಹನ ಸಂಚಾರಕ್ಕೆ ಯಾವುದೇ ಅಡಚಣೆ ಆಗಕೂಡದು. ರ್ಯಾಲಿ ಸ್ಥಳದಲ್ಲಿ ವಾಹನಗಳ ಕಳವು ನಡೆದರೆ ಅದಕ್ಕೆ ಸಂಘಟಕರೇ ಜವಾಬ್ದಾರರು.
* ನೈಸರ್ಗಿಕ ಪ್ರಕೋಪಗಳಿಂದ ಉದ್ಭವವಾಗುವ ಪ್ರತಿಕೂಲ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕೆ ಸೂಕ್ತ ವ್ಯವಸ್ಥೆಯನ್ನು ಸಂಘಟಕರೇ ಮಾಡಬೇಕು.
* ರ್ಯಾಲಿಗಳಿಗೆ ಸಂಬಂಧಿಸಿ ಸುಪ್ರೀಂಕೋರ್ಟ್ ಮತ್ತು ಮಧ್ಯಪ್ರದೇಶ ಹೈಕೋರ್ಟ್ ನೀಡಿರುವ ಮಾರ್ಗದರ್ಶಿ ಸೂತ್ರಗಳನ್ನು ಸಂಘಟಕರು ಕಟ್ಟುನಿಟ್ಟಾಗಿ ಪಾಲಿಸಬೇಕು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ