ಮಹಾ ವಿಧಾನ ಪರಿಷತ್ ಚುನಾವಣೆ: ಬಿಜೆಪಿ, ಶಿವಸೇನೆಗೆ ತಲಾ 2 ಸ್ಥಾನ, ಎನ್ ಸಿಪಿಗೆ ಒಂದು

ಮಹಾರಾಷ್ಟ್ರ ವಿಧಾನ ಪರಿಷತ್ ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಶಿವಸೇನೆ ತಲಾ ಎರಡು ಸ್ಥಾನಗಳನ್ನು ಗೆದ್ದಿದ್ದು ಎನ್ ಸಿಪಿ ಒಂದು ಸ್ಥಾನವನ್ನು ಉಳಿಸಿಕೊಂಡಿದೆ.
ಮಹಾರಾಷ್ಟ್ರ
ಮಹಾರಾಷ್ಟ್ರ
Updated on
ಮುಂಬೈ: ಮಹಾರಾಷ್ಟ್ರ ವಿಧಾನ ಪರಿಷತ್ ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಶಿವಸೇನೆ ತಲಾ ಎರಡು ಸ್ಥಾನಗಳನ್ನು ಗೆದ್ದಿದ್ದು ಎನ್ ಸಿಪಿ ಒಂದು ಸ್ಥಾನವನ್ನು ಉಳಿಸಿಕೊಂಡಿದೆ. 
ಸೋಮವಾರ ಮಹಾರಾಷ್ಟ್ರದ ವಿಧಾನ ಪರಿಷತ್ ನ 6 ಸ್ಥಳೀಯ ಸಂಸ್ಥೆ ಸ್ಥಾನಗಳಿಗೆ ಮತದಾನ ನಡೆದಿತ್ತು. ಈ ಪೈಕಿ 5 ಸ್ಥಾನಗಳ ಮತ ಎಣಿಕೆ ಮೇ.24 ರಂದು ನಡೆದಿದ್ದು, ಬಿಜೆಪಿ ಹಾಗೂ ಶಿವಸೇನೆ ತಲಾ ಎರಡು ಸ್ಥಾನಗಳನ್ನು ಗೆದ್ದಿವೆ.  ಶಿವಸೇನೆ ತಾನು ಸ್ಪರ್ಧಿಸಿದ್ದ 3 ಸ್ಥಾನಗಳ ಪೈಕಿ 2 ನ್ನು ಗೆದ್ದಿದ್ದು ಸುಧಾರಣೆ ಕಂಡಿದೆ. 
ಬಿಜೆಪಿ ಹಾಗೂ ಶಿವಸೇನೆ ಮೈತ್ರಿ ಮಾಡಿಕೊಂಡು 5 ಪೈಕಿ 4 ಗೆದ್ದಿದ್ದರೆ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಎನ್ ಸಿಪಿ ಒಂದು ಸ್ಥಾನದಲ್ಲಿ ಗೆದ್ದಿದೆ, ಅಮ್ರಾವತಿ ಹೊರತುಪಡಿಸಿ ವಾರ್ಧಾ-ಚಂದ್ರಪುರ-ಗಡ್ಚಿರೋಲಿ ಸ್ಥಾನಗಳನ್ನು ಪಡೆದಿದ್ದು, ಶಿವಸೇನೆ ನಾಸಿಕ್,  ಪರ್ಭಾನಿ-ಹಿಂಗೋಲಿಯಲ್ಲಿ ಗೆಲುವು ಸಾಧಿಸಿದೆ. ಎನ್ ಸಿಪಿ  ರಾಯ್ಗಡ್-ರತ್ನಗಿರಿ-ಸಿಂಧುದುರ್ಗ ಸ್ಥಾನವನ್ನು ಉಳಿಸಿಕೊಂಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com