ಶ್ರೀನಗರದ ಧಾರ್ಮಿಕ ಪ್ರದೇಶಗಳಲ್ಲಿ ಸಾರ್ವಜನಿಕ ಭಿಕ್ಷಾಟನೆ ನಿಷೇಧಿಸಿದ ಮುಫ್ತಿ ಸರ್ಕಾರ!

ಶ್ರೀನಗರದಲ್ಲಿರುವ ಪ್ರಮುಖ ಧಾರ್ಮಿಕ ಪ್ರದೇಶಗಳಲ್ಲಿ ಸಾರ್ವಜನಿಕ ಭಿಕ್ಷಾಟನೆಯನ್ನು ಮೆಹಬೂಮಾ ಮುಫ್ತಿ ಸರ್ಕಾರ ನಿಷೇಧಿಸಿದೆ.
ಶ್ರೀನಗರದ ಧಾರ್ಮಿಕ ಪ್ರದೇಶಗಳಲ್ಲಿ ಸಾರ್ವಜನಿಕ ಭಿಕ್ಷಾಟನೆ ನಿಷೇಧಿಸಿದ ಮುಫ್ತಿ ಸರ್ಕಾರ!
ಶ್ರೀನಗರದ ಧಾರ್ಮಿಕ ಪ್ರದೇಶಗಳಲ್ಲಿ ಸಾರ್ವಜನಿಕ ಭಿಕ್ಷಾಟನೆ ನಿಷೇಧಿಸಿದ ಮುಫ್ತಿ ಸರ್ಕಾರ!
ಶ್ರೀನಗರ: ಶ್ರೀನಗರದಲ್ಲಿರುವ ಪ್ರಮುಖ ಧಾರ್ಮಿಕ ಪ್ರದೇಶಗಳಲ್ಲಿ ಸಾರ್ವಜನಿಕ ಭಿಕ್ಷಾಟನೆಯನ್ನು ಮೆಹಬೂಮಾ ಮುಫ್ತಿ ಸರ್ಕಾರ ನಿಷೇಧಿಸಿದೆ. 
ಜಿಲ್ಲಾಧಿಕಾರಿಗಳಿಂದ ಅಧಿಕೃತ ಆದೇಶ ಪ್ರಕಟವಾಗಿದ್ದು, ಜಮ್ಮು-ಕಾಶ್ಮೀರದ ಸಮ್ಮರ್ ಕ್ಯಾಪಿಟಲ್ ಆಗಿರುವ ಶ್ರೀನಗರ ರಾಜ್ಯದ ಸಮಾಜಿಕ-ಆರ್ಥಿಕ ದೃಷ್ಠಿಯಿಂದ ಮಹತ್ವ ಪಡೆದುಕೊಂಡಿದೆ. ಜಿಲ್ಲೆಯನ್ನು ಹೆಚ್ಚು ನಾಗರಿಕ ಸ್ನೇಹಿಯನ್ನಾಗಿಸುವುದಕ್ಕಾಗಿ ಸಾರ್ವಜನಿಕ ಪ್ರದೇಶಗಳಲ್ಲಿ ಭಿಕ್ಷಾಟನೆಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ. 
ಜಮ್ಮು-ಕಾಶ್ಮೀರ ಭಿಕ್ಷಾಟನೆ ನಿಷೇಧ ಕಾಯ್ದೆ-1960 ರ ಪ್ರಕಾರ ಭಿಕ್ಷಾಟನೆ ಅಪರಾಧವಾಗಿದ್ದು, ಭಿಕ್ಷಾಟನೆಯನ್ನು ನಿಷೇಧಿಸಲು ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ.  ಆದೇಶವನ್ನು ಉಲ್ಲಂಘಿಸಿ ಭಿಕ್ಷಾಟನೆಯಲ್ಲಿ ತೊಡಗುವವರನ್ನು ಬಂಧಿಸಲು ಅವಕಾಶವಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com