ಮೇಜರ್ ಲೀತುಲ್ ಗೊಗೊಯ್ ತಪ್ಪಿತಸ್ಥ ಅಂತಾ ಗೊತ್ತಾದರೆ, ದಂಡನಾರ್ಹ ಶಿಕ್ಷೆ- ಬಿಪಿನ್ ರಾವತ್

ಯಾವುದೇ ರೀತಿಯ ಅಪರಾಧ ಪ್ರಕರಣದಲ್ಲಿ ಮೇಜರ್ ಲೀತುಲ್ ಗೊಗೊಯ್ ತಪಿತಸ್ಥ ಎಂದು ಕಂಡುಬಂದರೆ ದಂಡನಾರ್ಹ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
ಬಿಪಿನ್ ರಾವತ್
ಬಿಪಿನ್ ರಾವತ್

ಶ್ರೀನಗರ : ಯಾವುದೇ ರೀತಿಯ ಅಪರಾಧ ಪ್ರಕರಣದಲ್ಲಿ ಮೇಜರ್ ಲೀತುಲ್ ಗೊಗೊಯ್  ತಪಿತಸ್ಥ ಎಂದು ಕಂಡುಬಂದರೆ ದಂಡನಾರ್ಹ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.

 ಮೊನ್ನೆ ದಿನ 18 ವರ್ಷದ ಯುವತಿಯೊಂದಿಗೆ ಗೊಗೊಯ್ ಹೋಟೆಲ್ ವೊಂದರ ಪ್ರವೇಶಕ್ಕೆ ಯತ್ನಿಸಿರುವ ಆರೋಪ ಕೇಳಿಬಂದ ನಂತರ  ಶ್ರೀನಗರ ಪೊಲೀಸರಿಂದ  ಕೆಲ ಗಂಟೆಗಳ ಕಾಲ  ಗೊಗೊಯ್ ಅವರನ್ನು ಬಂಧಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ಸೇನೆಯ ಯಾವುದೇ ಅಧಿಕಾರಿಗಳು ಅಪರಾಧ ಪ್ರಕರಣದಲ್ಲಿ ತಪಿತಸ್ಥರು ಎಂದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾವತ್ ಸುದ್ದಿಗಾರರಿಗೆ ಹೇಳಿದ್ದಾರೆ.

 ಒಂದು ವೇಳೆ ಮೇಜರ್ ಗೊಗೊಯ್ ಏನಾದರೂ ತಪ್ಪು ಮಾಡಿದಲ್ಲೀ ಶೀಘ್ರದಲ್ಲಿಯೇ ಅವರಿಗೆ ಶಿಕ್ಷೆ ನೀಡುವ ಭರವಸೆ ನೀಡುವುದಾಗಿ  ಸೇನಾ ಮುಖ್ಯಸ್ಥರು ತಿಳಿಸಿದ್ದಾರೆ.

ಗೊಗೊಯ್ ಭಾಗಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com