ಪಶ್ಚಿಮ ಬಂಗಾಳ: ಪ್ರಧಾನಿ, ಮುಖ್ಯಮಂತ್ರಿ ಹೆಸರು ಹೇಳಲು ಬಾರದ ಕೂಲಿ ಕಾರ್ಮಿಕನಿಗೆ ಥಳಿತ

ಪ್ರಧಾನಿ ನರೇಂದ್ರ ಮೋದಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹೆಸರನ್ನು ಹೇಳಲು ಬರದಿದ್ದ ಕಾರಣ ಅಮಾಯಕ.....
ಪಶ್ಚಿಮ ಬಂಗಾಳ: ಪ್ರಧಾನಿ, ಮುಖ್ಯಮಂತ್ರಿ ಹೆಸರು ಹೇಳಲು ಬಾರದ ಕೂಲಿ ಕಾರ್ಮಿಕನಿಗೆ ಥಳಿತ
ಪಶ್ಚಿಮ ಬಂಗಾಳ: ಪ್ರಧಾನಿ, ಮುಖ್ಯಮಂತ್ರಿ ಹೆಸರು ಹೇಳಲು ಬಾರದ ಕೂಲಿ ಕಾರ್ಮಿಕನಿಗೆ ಥಳಿತ
ಮಾಲ್ದಾ (ಪಶ್ಚಿಮ ಬಂಗಾಳ): ಪ್ರಧಾನಿ ನರೇಂದ್ರ ಮೋದಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹೆಸರನ್ನು ಹೇಳಲು ಬರದಿದ್ದ ಕಾರಣ ಅಮಾಯಕ ಕೂಲಿ ಕೆಲಸಗಾರನೊಬ್ಬನಿಗೆ ಅಮಾನುಷವಾಗಿ ಥಳಿಸಿದ್ದ ಘಟನೆ  ಹೌರಾ- ಮಾಲ್ಡಾ ಫಾಸ್ಟ್ ಪ್ಯಾಸೆಂಜರ್ ರೈಲಿನಲ್ಲಿ ನಡೆದಿದೆ.
ಪಶ್ಚಿಮ ಬಂಗಾಳ ಮಾಲ್ಡಾದ ಕಾಲಿಯಾಚಾಕ್ ನಿವಾಸಿಯಾದ ಕೂಲಿ ಕೆಲಸಗಾರ ಜಮಾಲ್ ಮೊಮಿನ್ ಹಲ್ಲೆಗೊಳಗಾದ ವ್ಯಕ್ತಿ. ಮೇ 14ರಂದು ಈ ಘಟನೆ ನಡೆದಿದ್ದು ತನ್ನೂರಿಗೆ ತೆರಳುತ್ತಿದ್ದ ಜಮಾಲ್ ಮೇಲೆ ಹಲ್ಲೆ ನಡೆಸಲಾಗಿದೆ.
ರೈಲು ಹೌರಾ ಮತ್ತು ಬಂದೇಲ್ ನಡುವೆ ಸಾಗುತ್ತಿದ್ದಾಗ ರೈಲನ್ನೇರಿದ ನಾಲ್ವರು ಯುವಕರು ಜಮಾಲ್ ಕುಳಿತಿದ್ದ ಸೀಟಿನಿಂದ ಆತನನ್ನು ಎಬ್ಬಿಸಲು ಯೋಜಿಸಿದ್ದಾರೆ. ಇದಕ್ಕೆ ಅವರು ಆತನಿಗೆ ದೇಶದ ಪ್ರಧಾನಿ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಯಾರೆಂದು ಕೇಳಿದ್ದಾರೆ. ಕೂಲಿ ಕೆಲಸಗಾರನಾದ ನಾನು ಹೆಚ್ಚು ಓದಿಲ್ಲ, ನನಗೆ ಇದರ ಅರಿವಿಲ್ಲ ಎಂದ ಜಮಾಲ್ ಉತ್ತರದಿಂದ ತೃಪ್ತರಾಗದ ಅವರು ನವಾಜ್ ಷರೀಫ್ ಯಾರೆಂದು ಕೇಳಿದ್ದಾರೆ. ಆದರೆ ಅದಕ್ಕೆ ಸಹ ಆತ ಉತ್ತರಿಸದೆ ಹೋದಾಗ ನೀನು ದಿನ ನಿತ್ಯ ನಮಾಜ್ ಮಾಡುತ್ತೀಯ, ಮಸೀದೆಗೆ ತೆರಳಿ ನಮಾಜ್ ಮಾಡುವ ನಿನಗೆ ನಮ್ಮ ಪ್ರಧಾನಿ ಯಾರು? ರಾಷ್ಟ್ರಗೀತೆ ಯಾವುದೆಂದು ತಿಳಿದಿಲ್ಲ ಎನ್ನುತ್ತಾ ಅವನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ.
ಕೂಲಿ ಕೆಲಸಗಾರ ಜಮಾಲ್ ಎಷ್ಟೇ ಗೋಳಾಡಿದರ್ಯು ಬಿಡದೆ ಅವನನ್ನು ಥಳಿಸಿದ್ದಾರೆ. ರೈಲಿನಲ್ಲಿದ್ದ ಬೇರೆ ಯಾವ ಪ್ರಯಾಣಿಕರೂ ಸಹ ಇವನ ನೆರವಿಗೆ ಧಾವಿಸಿರಲಿಲ್ಲ.  ಕಡೆಗೆ ಬಂದೇಲ್ ನಿಲ್ದಾಣದಲ್ಲಿ ಆತನಿಗೆ "ಭಾರತ್ ಮಾತಾ ಕಿ ಜೈ" ಎಂದು ಹೇಳಿ ಇಳಿಯುವಂತೆ ಹಲ್ಲೆಕೋರರ ದಂಡು ಸೂಚಿಸಿದೆ. 
ಜಮಾಲ್ ಗೆ ಹಲ್ಲೆ ನಡೆಸಿದ ವೀಡಿಯೋ ದೃಶ್ಯ ವೈರಲ್ ಆಗಿದ್ದು ಸ್ವಯಂ ಸೇವಾ ಸಂಥೆಯೊಂದು ಈ ಸಂಬಂಧ ಪೋಲೀಸರಿಗೆ ದೂರು ಸಲ್ಲಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com