ಶಾಂತಿನಿಕೇತನ: ಶಾಂತಿನಿಕೇತನದ ವಿಶ್ವಭಾರತಿಯಲ್ಲಿ ನಡೆದ 49 ನೇ ಘಟಿಕೋತ್ಸವದಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಿದ್ದು ಪ್ರಧಾನಿ ನರೇಂದ್ರ ಮೋದಿಯವರು ಕ್ಷಮೆ ಯಾಚಿಸಿದ್ದಾರೆ.
ವಿಶ್ವ ಭಾರತಿ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿದ್ಯಾರ್ಥಿಗಳು ನೀರಿನ ವ್ಯವಸ್ಥೆ ಸರಿಯಾಗಿ ಆಗಿಲ್ಲ ಎಂದು ಸನ್ನೆ ಮೂಲಕ ದೂರು ನೀಡಿದ್ದರು, ಇದನ್ನು ಗಮನಿಸಿದ್ದ ಮೋದಿ ಭಾಷಣ ಪ್ರಾರಂಭಿಸುತ್ತಲೇ ಕ್ಷಮೆ ಯಾಚಿಸಿದ್ದಾರೆ.
"ದೇಶದ ಪ್ರಧಾನಿ ವಿಶ್ವಭಾರತಿ ವಿಶ್ವವಿದ್ಯಾನಿಲಯದ ಕುಲಪತಿಗಳೂ ಆಗಿದ್ದು, ಘಟಿಕೋತ್ಸವದ ವೇಳೆ ನಡೆದಿರುವ ಅವ್ಯವಸ್ಥೆಗೆ ನಾನು ಕ್ಷಮೆ ಕೇಳುತ್ತೇನೆ ಎಂದು ಮೋದಿ ಹೇಳಿದ್ದಾರೆ. ಕುಡಿಯುವ ನೀರಿನ ಅಭಾವದಿಂದ ವಿದ್ಯಾರ್ಥಿಗಳಿಗೆ ಆರೋಗ್ಯದ ಸಮಸ್ಯೆಯೂ ಉಂಟಾಗಿದೆ.