ಬಾಂಗ್ಲಾದೇಶ ಭವನ ಉದ್ಘಾಟಿಸಿದ ಪ್ರಧಾನಿ ಮೋದಿ , ಶೇಕ್ ಹಸೀನಾ

ಭಾರತ ಹಾಗೂ ಬಾಂಗ್ಲಾದೇಶಗಳ ನಡುವಿನ ಸಾಂಸ್ಕೃತಿಕ ಬಾಂಧವ್ಯದ ಕುರುಹು ಆಗಿ ಪ್ರಧಾನಿ ನರೇಂದ್ರಮೋದಿ ಹಾಗೂ ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ಪಶ್ಚಿಮ ಬಂಗಾಳದ ಶಾಂತಿನಿಕೇತನ್ ನಲ್ಲಿಂದು ಬಾಂಗ್ಲಾದೇಶ ಭವನವನ್ನು ಉದ್ಘಾಟಿಸಿದರು.
ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ  ಅವರೊಂದಿಗೆ ಭಾರತ ಪ್ರಧಾನಿ ನರೇಂದ್ರಮೋದಿ
ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ ಅವರೊಂದಿಗೆ ಭಾರತ ಪ್ರಧಾನಿ ನರೇಂದ್ರಮೋದಿ

ಶಾಂತಿನಿಕೇತನ್ :  ಭಾರತ ಹಾಗೂ ಬಾಂಗ್ಲಾದೇಶಗಳ ನಡುವಿನ ಸಾಂಸ್ಕೃತಿಕ  ಬಾಂಧವ್ಯದ ಕುರುಹು ಆಗಿ  ಪ್ರಧಾನಿ ನರೇಂದ್ರಮೋದಿ ಹಾಗೂ ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ಪಶ್ಚಿಮ ಬಂಗಾಳದ ಶಾಂತಿನಿಕೇತನ್ ನಲ್ಲಿಂದು  ಬಾಂಗ್ಲಾದೇಶ ಭವನವನ್ನು ಉದ್ಘಾಟಿಸಿದರು.

ವಿಶ್ವ ಭಾರತಿ ವಿಶ್ವವಿದ್ಯಾಲಯದ ಸಂಕೀರ್ಣದಲ್ಲಿ ಬಾಂಗ್ಲಾದೇಶ ಭವನ ನಿರ್ಮಿಸಲಾಗಿದ್ದು, ಉದ್ಘಾಟನಾ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರಮೋದಿ ,1971ರ ಬಾಂಗ್ಲಾದೇಶ ವಿಮೋಚನಾ ಯುದ್ದದ ವೇಳೆ  ಭಾರತೀಯ ಯೋಧರು ತಮ್ಮ ಜೀವ ಬಲಿದಾನ ಮಾಡಿದ್ದಾರೆ. ರವೀಂದ್ರ ನಾಥ್ ಠಾಗೋರ್  ಸಬ್ ಕಾ ಸಾಥ್, ಸಬ್ ಕಾ ವಿಕಾಸ್  ಸಂದೇಶ ಸಾರಿದ ಕವಿ. ಬಾಂಗ್ಲಾದೇಶ ಭವನ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಒಪ್ಪಂದದ ಸಂಕೇತವಾಗಿದೆ ಎಂದರು.

ಶೇಕ್ ಹಸೀನಾ ಮಾತನಾಡಿ ರವೀಂದ್ರ ನಾಥ್ ಠಾಗೋರ್  , ಭಾರತ ಹಾಗೂ ಬಾಂಗ್ಲಾದೇಶಕ್ಕೆ ಸೇರಿದ ಕವಿಯಾಗಿದ್ದಾರೆ ಎಂದರು.
ಬಾಂಗ್ಲಾದೇಶ ಭವನದಲ್ಲಿನ  ವಸ್ತುಪ್ರದರ್ಶನಾಲಯವು ಪ್ರಸಿದ್ಧ ಕವಿ ರವೀಂದ್ರನಾಥ್ ಠಾಗೋರ್  ಬಾಂಗ್ಲಾದೇಶದೊಂದಿಗೆ ಹೊಂದಿದ್ದ ಸಂಬಂಧವನ್ನು  ಪ್ರದರ್ಶಿಸುತ್ತದೆ. ಬಾಂಗ್ಲಾದೇಶ ವಿಮೋಚನಾ ಯುದ್ಧ ಹಾಗೂ ಭಾರತ- ಬಾಂಗ್ಲಾ ನಡುವಿನ ಸಂಬಂಧವನ್ನು ವಿವರಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com