ಥಾಣೆ(ಮಹಾರಾಷ್ಟ್ರ): "ನನ್ನ ತಂದೆ ಬಾಳ್ ಠಾಕ್ರೆ ಬಿಜೆಪಿಯ ದುಷ್ಟತನಗಳನ್ನು ಸಹಿಸಿಕೊಂಡಿದ್ದರು. ಆದರೆ ನನಗೆ ಅದು ಅಸಾಧ್ಯ" ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಮೇ 28 ರಂದು ನಡೆಯುವ ಪಾಲ್ಘಾರ್ ಲೋಕಸಭಾ ಉಪಚುನಾವಣೆಗಾಗಿ ಶಿವಸೇನೆ ಅಭ್ಯರ್ಥಿ ಶ್ರೀನಿವಾಸ್ ವಾನಗಾ ಪರವಾಗಿ ದಹನುದಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಠಾಕ್ರೆ, ಹಿಂದುತ್ವದ ಅಜೆಂಡಾ ಹೊಂದಿರುವುದಕ್ಕಾಗಿ ನಾವು ಕಳೆದ 25 ವರ್ಷಗಳಿಂದ ಬಿಜೆಪಿ ಜತೆಗಿದ್ದೇವೆ ಎಂದು ಅವರು ಹೇಳಿದ್ದಾರೆ.
"ಬಾಳಾ ಸಾಹೇಬ್ ಠಾಕ್ರೆ ಬಿಜೆಪಿಯವರು ಮಾಡುವ ತಪುಗಳನ್ನು, ಸ್ದುಷ್ಟತನಗನ್ನು ಸಹಿಸಿದ್ದರು. ನಾವೂ ಅದನ್ನು ಸಾಕಷ್ಟು ಕಂಡಿದ್ದೇವೆ. ಹಾಗೆಯೇ ನಾನು ಇನ್ನು ಮುಂದೆ ಇದನ್ನು ಸಹಿಸುವುದಿಲ್ಲ"
ಶಿವಸೇನೆ ಬಾಳ್ ಠಾಕ್ರೆ ಸ್ಥಾಪಿಸಿರುವ ಪಕ್ಷವಾಗಿ ಉಳಿದಿಲ್ಲ ಎಂಬ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿಕೆಗೆ ಪ್ರತಿಕ್ರಯಿಸಿದ ಠಾಕ್ರೆ "ಬಿಜೆಪಿ ಸಹ ಇಂದು ಅಟಲ್ ಜೀ ಅವರ ಕಾಲಾವಧಿಯ ಮೂಲ ಬಿಜೆಪಿಯಾಗಿಲ್ಲ, ಇದು ಮೋದಿ ಅವರ ಬಿಜೆಪಿಯಾಗಿ ಮಾರ್ಪಟ್ಟಿದೆ" ಎಂದಿದ್ದಾರೆ.
ಬುಲೆಟ್ ಟ್ರೈನ್ ಯೋಜನೆಗಾಗಿ ಭೂಸ್ವಾಧೀನಕ್ಕೆ ನಾವು ಅವಕಾಶ ನಿಡುವುದಿಲ್ಲ ಎಂದು ಅವರು ಭರವಸೆ ನೀಡಿದರು.