ತೃತೀಯ ರಂಗಕ್ಕೂ ಮುಕ್ತವಾಗಿದ್ದೇನೆ: ರಾಜಕೀಯ ಪಕ್ಷ ಸ್ಥಾಪಿಸಲು ಚಿಂತಿಸಿರುವ ಬೈಚುಂಗ್ ಭುಟಿಯಾ

ಭಾರತೀಯ ಫುಟ್ಬಾಲ್ ತಂಡದ ಮಾಜಿ ಆಟಗಾರ ಬೈಚುಂಗ್ ಭುಟಿಯಾ ರಾಜಕೀಯ ಪಕ್ಷ ಸ್ಥಾಪಿಸಲು ಮುಂದಾಗಿದ್ದು ತೃತೀಯ ರಂಗದೊಂದಿಗೆ ಕೈ ಜೋಡಿಸುವುದಕ್ಕೂ ಮುಕ್ತನಾಗಿದ್ದೇನೆ ಎಂದು ಹೇಳಿದ್ದಾರೆ.

ತಾವು ರಾಜಕೀಯ ಪ್ರವೇಶಿಸುತ್ತಿದ್ದು, ಸಿಕ್ಕಿಂ ಡೆಮಾಕ್ರೆಟಿಕ್ ಪಕ್ಷವನ್ನು ಸೋಲಿಸುವುದು ನನ್ನ ಆದ್ಯತೆ ಎಂದು ಬೈಚುಂಗ್ ಭುಟಿಯಾ ತಿಳಿಸಿದ್ದಾರೆ.  ಸಿಕ್ಕಿಂ ನಲ್ಲಿ 25 ವರ್ಷಗಳಿಂದ ಎಸ್ ಡಿಪಿ ಆಡಳಿತದಲ್ಲಿದೆ. ತಮ್ಮ ಹಮ್ರೋ ಸಿಕ್ಕಿಂ ಪಕ್ಷದ ಗುರಿ ಸಿಕ್ಕಿಂ ನಲ್ಲಿ ಸುದೀರ್ಘವಾಗಿ ಆಡಳಿತ ನಡೆಸುತ್ತಿರುವ ಎಸ್ ಡಿಪಿಯನ್ನು ಕಿತ್ತೊಗೆಯುವುದು ಎಂದು ಪಿಟಿಐ ಗೆ ನೀಡಿರುವ ಸಂದರ್ಶನದಲ್ಲಿ ಭುಟಿಯಾ ಹೇಳಿದ್ದಾರೆ. 
ತಮ್ಮ ಪಕ್ಷವನ್ನು ಬೆಳೆಸುವುದಕ್ಕಾಗಿ ಹಾಗೂ ಸಿಕ್ಕಿಂ ನಲ್ಲಿ ಆಡಳಿತದ ಬದಲಾವಣೆಗಾಗಿ ನಾವು ಫೆಡರಲ್ ಫ್ರಂಟ್ ಹಾಗೂ ತೃತೀಯ ರಂಗದೊಂದಿಗೂ ಕೈಜೋಡಿಸುವುದಕ್ಕೆ ಸಿದ್ಧವಿದ್ದೇವೆ ಎಂದು ಭುಟಿಯಾ ತಿಳಿಸಿದ್ದಾರೆ. ಆಮ್ ಆದ್ಮಿ ಪಕ್ಷದಿಂದ ತಾವು ಪ್ರಭಾವಿತರಾಗಿರುವುದಾಗಿ ಹೇಳಿರುವ ಭುಟಿಯಾ, ಭ್ರಷ್ಟಾಚಾರದ ವಿರುದ್ಧ ಆಮ್ ಆದ್ಮಿ ಪಕ್ಷದ ಹೋರಾಟ ಆ ಪಕ್ಷವನ್ನು ಜನರಿಗೆ ಹತ್ತಿರವಾಗಿಸಿದೆ ಎಂದು ಭುಟಿಯಾ ಅಭಿಪ್ರಾಯಪಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com