ಹಿಂದೂಗಳ ರಕ್ಷಣೆಗಾಗಿ ಭಜರಂಗದಳಕ್ಕೆ ಶಸಾಸ್ತ್ರ ತರಬೇತಿ

ಮಧ್ಯಪ್ರದೇಶದ ರಾಜ್ ಘರ್ ಜಿಲ್ಲೆಯ ಬಾವಾರದಲ್ಲಿ ಇದೇ ತಿಂಗಳು ಹಿಂದೂಗಳ ರಕ್ಷಣೆ ಹೆಸರಿನಲ್ಲಿ ತರಬೇತಿ ಶಿಬಿರವೊಂದನ್ನು ಆಯೋಜಿಸಿ, ಭಜರಂಗದಳದ ಕಾರ್ಯಕರ್ತರಿಗೆ ಶಸಾಸ್ತ್ರ ಮತ್ತಿತರ ಅಸ್ತ್ರಗಳ ಬಳಕೆ ಬಗ್ಗೆ ತರಬೇತಿ ನೀಡಲಾಗಿದೆ.
ತರಬೇತಿ ಶಿಬಿರದ ಚಿತ್ರ
ತರಬೇತಿ ಶಿಬಿರದ ಚಿತ್ರ

ರಾಜ್ ಘರ್: ಮಧ್ಯಪ್ರದೇಶದ ರಾಜ್ ಘರ್ ಜಿಲ್ಲೆಯ ಬಾವಾರದಲ್ಲಿ ಇದೇ ತಿಂಗಳು ಹಿಂದೂಗಳ ರಕ್ಷಣೆ ಹೆಸರಿನಲ್ಲಿ ತರಬೇತಿ ಶಿಬಿರವೊಂದನ್ನು ಆಯೋಜಿಸಿ,  ಭಜರಂಗದಳದ ಕಾರ್ಯಕರ್ತರಿಗೆ  ಶಸಾಸ್ತ್ರ   ಬಳಕೆ  ಬಗ್ಗೆ  ತರಬೇತಿ ನೀಡಲಾಗಿದೆ.

ಮೇ 3 ರಿಂದ 11ರವರೆಗೆ ನಡೆದ ಶಿಬಿರದಲ್ಲಿ ರಾಷ್ಟ್ರ ವಿರೋಧಿ ಲವ್ ಜಿಹಾದಿ ನಿಬಾಯಿಸಲು   ಆಯ್ದ 32 ಜಿಲ್ಲೆಗಳ ಸದಸ್ಯರಿಗೆ  ಬಂದೂಕು, ಲಾಠಿ, ಕತ್ತಿ, ಮತ್ತಿರ ಆಯುಧ ಬಳಕೆ ಕುರಿತಂತೆ  ತರಬೇತಿ ನೀಡಲಾಗಿದೆ. ವಿಶೇಷವಾಗಿ  ಶೂಟಿಂಗ್, ಕರಾಟೆ, ಮರ ಹತ್ತುವುದು, ಹೈ ಜಂಪಿಂಗ್ ಮತ್ತಿತರ ತರಬೇತಿ ನೀಡಲಾಗಿದೆ.

 ಒಂದು ಬಾರಿ ಶಿಬಿರಕ್ಕೆ ಹಾಜರಾದರೆ ಮತ್ತೆ ಎಲ್ಲೂ ಹೊರಗಡೆ ಹೋಗುವ ಅವಕಾಶ ಇರುವುದಿಲ್ಲ , ಬೆಳಿಗ್ಗೆ 4 ರಿಂದಲೂ ರಾತ್ರಿ 11 ಗಂಟೆಯವರೆಗೂ ಅಲ್ಲಿಯೇ ಇರಬೇಕಾಗುತ್ತದೆ , ಎಲ್ಲಾ ಸೌಕರ್ಯವನ್ನು ಅಲ್ಲಿಯೇ ನೀಡಲಾಗುತ್ತದೆ.

 ರಾಷ್ಟ್ರ ವಿರೋಧಿ ಲವ್ ಜಿಹಾದಿ ನಿಬಾಯಿಸಲು  ಈ ರೀತಿಯ ತರಬೇತಿ ಶಿಬಿರಗಳನ್ನು ಆಯೋಜಿಸುತ್ತಾ ಬರಲಾಗುತ್ತದೆ ಎಂದು ಭಜರಂಗ ದಳ ಜಿಲ್ಲಾ ಸಂಘಟಕ ದೇವಿ ಸಿಂಗ್ ಸೊಂದಿಯಾ ಹೇಳಿದ್ದಾರೆ. ಈ ಮಧ್ಯೆ ಯಾರೊಬ್ಬರು ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಬಿಜೆಪಿ ಹೇಳಿದೆ.

ಕಾನೂನಿಗೆ ವಿರುದ್ಧವಾಗಿ ಯಾರಾದರೂ ನಡೆದುಕೊಂಡರೆ  ಸೂಕ್ತ ಕ್ರಮ ಕೈಗೊಳ್ಳಲಾಗುವುದು  ಎಂದು ಮಧ್ಯಪ್ರದೇಶ ಬಿಜೆಪಿ ವಕ್ತಾರ ರಜನೀಶ್ ಅಗರ್ ವಾಲ್ ಹೇಳಿದ್ದಾರೆ.  
ತರಬೇತಿ ಶಿಬಿರದ ಬಗ್ಗೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.  ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ನೀಡಬಾರದು, ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ವಕ್ತಾರ ಪಂಕಾಜ್ ಚತುರ್ವೇದಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com