ಜಮ್ಮು-ಕಾಶ್ಮೀರ: ಪೊಲೀಸರ ರೈಫಲ್ ನ್ನು ಕಸಿದ ಭಯೋತ್ಪಾದಕರು!

ಭಯೋತ್ಪಾದಕರು ಪೊಲೀಸರ ರೈಫಲ್ ನ್ನು ಕಸಿದಿರುವ ಘಟನೆ ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ನಡೆದಿದೆ.
ಜಮ್ಮು-ಕಾಶ್ಮೀರ: ಪೊಲೀಸರ ರೈಫಲ್ ನ್ನು ಕಸಿದ ಭಯೋತ್ಪಾದಕರು!
ಜಮ್ಮು-ಕಾಶ್ಮೀರ: ಪೊಲೀಸರ ರೈಫಲ್ ನ್ನು ಕಸಿದ ಭಯೋತ್ಪಾದಕರು!
Updated on: 
ಶ್ರೀನಗರ: ಭಯೋತ್ಪಾದಕರು ಪೊಲೀಸರ ರೈಫಲ್ ನ್ನು ಕಸಿದಿರುವ ಘಟನೆ ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ನಡೆದಿದೆ.
ಪೊಲೀಸ್ ಮೂಲಗಳ ಪ್ರಕಾರ ದರ್ಬನ್ ನಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ಅಡ್ವೊಕೇಟ್ ಅವರಿಗೆ ಭದ್ರತೆ ಒದಗಿಸಲು ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿಯಿಂದ ಎಕೆ-47 ರೈಫಲ್ ಗಳನ್ನು ಹಾಗೂ ಐಎನ್ಎಸ್ಎಎಸ್ ರೈಫಲ್ ಗಳನ್ನು ಉಗ್ರರು ಕಸಿದಿದ್ದಾರೆ ಎಂದು ತಿಳಿದುಬಂದಿದೆ. 
ಅವಾಮಿ ನ್ಯಾಷನಲ್ ಕಾನ್ಫರೆನ್ಸ್ ನ ರಾಜಕೀಯ ಕಾರ್ಯಕರ್ತನಾಗಿರುವ ಅಡ್ವೊಕೇಟ್, ಈ ಘಟನೆ ನಡೆದಾಗ ತಮ್ಮ ಸಂಬಂಧಿಕರ ಮನೆಯಲ್ಲಿದ್ದರು ಎಂದು ಹೇಳಲಾಗಿದೆ. ಘಟನೆ ನಡೆಯುತ್ತಿದ್ದಂತೆಯೇ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಹೊಣೆ ಹೊತ್ತಿದ್ದು ಕಸಿದುಕೊಂಡಿರುವ ರೈಫಲ್ ಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com