ಮಾಣಿಕ್ ಸರ್ಕಾರ್ ಯಿಂದ ರಿಪೋರ್ಟ್ ಕಾರ್ಡ್ ಕೇಳಿದ ತ್ರಿಪುರಾ ಸಿಎಂ ಬಿಪ್ಲಬ್ ಕುಮಾರ್ ದೇಬ್!

ತ್ರಿಪುರಾದಲ್ಲಿ ಉದ್ಯೋಗ ಹಾಗೂ ಆಹಾರ ಬಿಕ್ಕಟ್ಟು ಉಂಟಾಗಿರುವುದರ ಬಗ್ಗೆ ಮಾಜಿ ಸಿಎಂ ಮಾಣೀಕ್ ಸರ್ಕಾರ್ ಆರೋಪಿಸಿದ್ದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇಬ್, ಮಾಣಿಕ್ ಸರ್ಕಾರದ 25
ಬಿಪ್ಲಬ್ ಕುಮಾರ್ ದೇವ್
ಬಿಪ್ಲಬ್ ಕುಮಾರ್ ದೇವ್
ಅಗರ್ತಲಾ: ತ್ರಿಪುರಾದಲ್ಲಿ ಉದ್ಯೋಗ ಹಾಗೂ ಆಹಾರ ಬಿಕ್ಕಟ್ಟು ಉಂಟಾಗಿರುವುದರ ಬಗ್ಗೆ ಮಾಜಿ ಸಿಎಂ ಮಾಣೀಕ್ ಸರ್ಕಾರ್ ಆರೋಪಿಸಿದ್ದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇಬ್, ಮಾಣಿಕ್ ಸರ್ಕಾರದ 25 ವರ್ಷಗಳ ಸಾಧನೆ ಬಗ್ಗೆ ರಿಪೋರ್ಟ್ ಕಾರ್ಡ್ ನೀಡುವಂತೆ ಸವಾಲು ಹಾಕಿದ್ದಾರೆ. 
ರಾಜ್ಯದಲ್ಲಿ ಆಹಾರ ಹಾಗೂ ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳಿಲ್ಲ ಎಂದು ಸಮರ್ಥಿಸಿಕೊಂಡಿರುವ ಬಿಪ್ಲಬ್ ಕುಮಾರ್ ದೇವ್, ಆಧಾರ ರಹಿತವಾಗಿ ಸಿಪಿಐ(ಎಂ) ಆರೋಪ ಮಾಡಿ, ಜನರಲ್ಲಿ ಭಯ ಮೂಡಿಸಿ ಸಮಾಜದಲ್ಲಿ ಅಶಾಂತಿ ಮೂಡಿಸಲು ಯತ್ನಿಸುತ್ತಿದೆ ಎಂದು ಪ್ರತ್ಯಾರೋಪ ಮಾಡಿದ್ದಾರೆ. 
ಎರಡು ವರೆ ತಿಂಗಳಲ್ಲಿ ನಮ್ಮ ಸರ್ಕಾರ ಗ್ರಾಮೀಣ ಭಾಗದಲ್ಲಿ ಕಾಮಗಾರಿಗಳಿಗಾಗಿ ಮನ್ರೇಗಾಗೆ ಅನುದಾನವನ್ನು ಬಿಡುಗಡೆ ಮಾಡಿದೆ. ಆದರೆ ಈ ಅನುದಾನವನ್ನು ಮಾಣಿಕ್ ಸರ್ಕಾರ್ ಸರ್ಕಾರ ಕಳೆದ ನವೆಂಬರ್ ತಿಂಗಳಿನಿಂದ ನಿಲ್ಲಿಸಿತ್ತು. ಮಾಣಿಕ್ ಸರ್ಕಾರ್ ಅವರ ಆಡಳಿತಾವಧಿಯಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ನಡೆದಿದೆ. ನಮ್ಮ ಸರ್ಕಾರ ಅಲ್ಪಾವಧಿಯಲ್ಲೇ 900 ಕೋಟಿ ರೂಪಾಯಿ ಹಣ ತಂದು ಗ್ರಾಮೀಣ ಪ್ರದೇಶಗಳಿಗೆ ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ಬಿಪ್ಲಬ್ ದೇವ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com