ಪತ್ನಿಯರನ್ನು ಪರಿತ್ಯಜಿಸಿದ ಆನಿವಾಸಿ ಭಾರತೀಯರಿಗೆ ಇನ್ಮುಂದೆ ಎಂಇಎ ವೆಬ್ಸೈಟ್ ಮೂಲಕ ಸಮನ್ಸ್!

ಭಾರತದಲ್ಲಿ ತಮ್ಮ ಪತ್ನಿಯರನ್ನು ಪರಿತ್ಯಜಿಸಿರುವ ಆನಿವಾಸಿ ಭಾರತೀಯರಿಗೆ ಕಾನೂನುಗಳನ್ನು ಬಿಗಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು ಈ ಸಂಬಂಧ ಕಾನೂನು...
ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್
ನವದೆಹಲಿ: ಭಾರತದಲ್ಲಿ ತಮ್ಮ ಪತ್ನಿಯರನ್ನು ಪರಿತ್ಯಜಿಸಿರುವ ಆನಿವಾಸಿ ಭಾರತೀಯರಿಗೆ ಕಾನೂನುಗಳನ್ನು ಬಿಗಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು ಈ ಸಂಬಂಧ ಕಾನೂನು ಮತ್ತು ನ್ಯಾಯ ಸಚಿವಾಲಯವು ಅಂತಹ ಎನ್ಆರ್ಐಗಳಿಗೆ ವಿದೇಶಾಂಗ ಸಚಿವಾಲಯದ ವೆಬ್ ಸೈಟ್ ಮೂಲಕ ಸಮನ್ಸ್ ನೀಡಲಿದೆ. 
ಪ್ರಸ್ತುತ ಅಂತಹ ಎನ್ಆರ್ಐಗಳಿಗೆ ಪತ್ರಿಕೆಗಳಲ್ಲಿ ನೋಟಿಸ್ ನೀಡಲಾಗುತ್ತಿದ್ದು ಈ ಸಮನ್ಸ್ ಗಳಿಗೆ ಪ್ರತಿಕ್ರಿಯೆ ನೀಡದಿದ್ದರೆ ಅಥವಾ ನೋಟಿಸ್ ಗಳನ್ನು ಓದಲು ಆಗದಿದ್ದವರು. ಸಾಗರೋತ್ತರ ನಕಲಿ ವಿಳಾಸಗಳು ಹೀಗೆ ಸರ್ಕಾರ ಎದುರಿಸುತ್ತಿರುವ ಪ್ರಮುಖ ಆಡಚಣೆಗಳನ್ನು ತಪ್ಪಿಸುವ ಸಲುವಾಗಿ ಎಂಇಎ ವೆಬ್ ಸೈಟ್ ಮೂಲಕ ನೋಟಿಸ್ ನೀಡಲಾಗುತ್ತದೆ. 
ಇಂದು ನಿಗದಿಯಾಗಿರುವ ಸಭೆಯಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮತ್ತು ಎಂಇಎ ಅಧಿಕಾರಿಗಳು ಈ ಕುರಿತು ಚರ್ಚಿಸಲಿದ್ದಾರೆ. ಇನ್ನು ಕಾನೂನು ಸಚಿವಾಲಯಕ್ಕೆ ಕಳುಹಿಸಿದ ಕರಡು ವರದಿಯಲ್ಲಿ ಭಾರತದಲ್ಲಿನ ಆತನ ಆಸ್ತಿ ಮುಟ್ಟುಗೋಲು ಮತ್ತು ಪಾಸ್ ಪೋರ್ಟ್ ರದ್ದುಗೊಳಿಸುವ ಮುಂತಾದ ಕ್ರಮಗಳನ್ನು ಡಬ್ಲೂಸಿಡಿ ಪ್ರಸ್ತಾಪಿಸಿದೆ. ಇದೇ ವೇಳೆ ಎಲ್ಲಾ ಎನ್ಆರ್ಐಗಳು ವಿವಾಹವಾದ ಒಂದು ವಾರದೊಳಗೆ ವಿವಾಹ ನೊಂದಣಿ ಮಾಡಿಸಬೇಕು ಎಂದು ಸೂಚಿಸಲಾಗಿದೆ. ಪ್ರಸ್ತುತ ಪಂಜಾಬ್ ಸೇರಿದಂತೆ ಕೆಲ ರಾಜ್ಯಗಳಲ್ಲಿ ಕಡ್ಡಾಯವಾಗಿ ನೊಂದಣಿ ಮಾಡಿಸಲಾಗುತ್ತಿದೆ. 
ದೇಶದಲ್ಲಿ ಪರಿತ್ಯಜಿಸಲಾಗಿರುವ ವಧುಗಳ ಕುರಿತು ಸರ್ಕಾರದ ಬಳಿ ಅಧಿಕೃತ ಮಾಹಿತಿಯಿಲ್ಲದಿದ್ದರು. ಕೆಲ ಎನ್ಜಿಒಗಳು ಪತ್ರಿಕೆಯಲ್ಲಿ ಪ್ರಕಟಿಸಿರುವ ಮಾಹಿತಿಗಳ ಪ್ರಕಾರ, ಪಂಜಾಬ್ ಮತ್ತು ಗುಜರಾತ್ ನಲ್ಲಿ ಮದುವೆಯಾದ ಕೆಲವೇ ದಿನಗಳಲ್ಲಿ ಸುಮಾರು 25 ಸಾವಿರ ಮಹಿಳೆಯರನ್ನು ಪರಿತ್ಯಜಿಸಲಾಗಿದೆ. ಇನ್ನು ದೆಹಲಿ, ಹರಿಯಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲೂ ಸಾವಿರಾರು ಸಂಖ್ಯೆಯಲ್ಲಿದೆ ಎಂದು ಅಂದಾಜಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com