ಪಲ್ಗರ್ ಉಪಚುನಾವಣೆ: ಚುನಾವಣಾ ಆಯೋಗ 'ರಾಜಕೀಯ ಪಕ್ಷ' ಒಂದರ ಪ್ರೇಯಸಿ ಎಂದು ಶಿವಸೇನಾ ಟೀಕೆ!

ಪಲ್ಗರ್ ಲೋಕಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವನ್ನು ರಾಜಕೀಯ ಪಕ್ಷದ ಪ್ರೇಯಸಿ ಎಂದು ಶಿವಸೇನಾ ಕರೆದಿದೆ.
ಚುನಾವಣಾ ಆಯೋಗದ ಚಿತ್ರ
ಚುನಾವಣಾ ಆಯೋಗದ ಚಿತ್ರ

ಮುಂಬೈ: ಪಲ್ಗರ್  ಲೋಕಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವನ್ನು ರಾಜಕೀಯ ಪಕ್ಷದ ಪ್ರೇಯಸಿ ಎಂದು ಶಿವಸೇನಾ  ಕರೆದಿದೆ.

ಮೇ 28 ರಂದು ನಡೆದ ಚುನಾವಣೆ ಸಂದರ್ಭದಲ್ಲಿ  ಗೆಲ್ಲಲು ಸಾಧ್ಯವಿರುವ ಎಲ್ಲಾ ತಂತ್ರಗಳನ್ನು ಬಿಜೆಪಿ ಕಾರ್ಯಕರ್ತರು ಬಳಸಿಕೊಳ್ಳುವಂತೆ  ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವೀಸ್  ಹೇಳಿಕೆ ಇರುವ ವಿಡಿಯೋವೊಂದನ್ನು  ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆಯ ಬಿಡುಗಡೆ ಮಾಡಿದ ನಂತರ ಸಂಜಯ್   ರಾವತ್ ಈ ರೀತಿಯಲ್ಲಿ ಟೀಕಿಸಿದ್ದಾರೆ.

ಉಪಚುನಾವಣೆ ಸಂದರ್ಭದಲ್ಲಿ  ಹಣ ವಿತರಿಸುತ್ತಿದ್ದ ಬಿಜೆಪಿ ಕಾರ್ಯಕರ್ತರು  ಸಾಕ್ಷಿ ಸಮೇತ  ಸಿಕ್ಕಿಬಿದ್ದಿದ್ದಾರೆ. ಆದರೆ, ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಂಡಿಲ್ಲ.  ದೇಶದ ಎಲ್ಲಾ ಕಡೆಗಳಲ್ಲಿಯೂ ಇದೇ ರೀತಿ ಯಾವುದೇ ಕ್ರಮ ಕೈಗೊಂಡಲ್ಲ.  ಇದರ ಅರ್ಥ ಚುನಾವಣಾ ಆಯೋಗ 'ರಾಜಕೀಯ ಪಕ್ಷ'ದ' ಪ್ರೇಯಸಿ ಎಂಬುದನ್ನು ಸೂಚಿಸುತ್ತದೆ ಎಂದು ಅವರು ಹೇಳಿದ್ದಾರೆ.

 ಆದಾಗ್ಯೂ, ಬಿಜೆಪಿ ಬಳಿಕ ವಿಡಿಯೋವನ್ನು ತಿರುಚಲಾಗಿದೆ ಎಂದು ಆರೋಪ ಮಾಡುತ್ತಿದೆ.

 ಬಿಜೆಪಿಯ ಸಂಸದ ಚಿಂತಾಮನ್ ವಾಂಗ ನಿಧನ ಹೊಂದಿದ್ದ ಹಿನ್ನೆಲೆಯಲ್ಲಿ ಫಲ್ಗರ್ ಲೋಕಸಭಾ ಚುನಾವಣೆ ಅಗತ್ಯವಾಗಿತ್ತು. ನಾಲ್ಕು ಲೋಕಸಭಾ ಹಾಗೂ 9 ವಿಧಾನಸಭಾ ಕ್ಷೇತ್ರ ಸೇರಿದಂತೆ ದೇಶದಾದ್ಯಂತ 10 ರಾಜ್ಯಗಳಲ್ಲಿ ಸೋಮವಾರ ಮತದಾನ ನಡೆದಿತ್ತು.

ಉತ್ತರ ಪ್ರದೇಶದ ನೂರ್ ಪುರ್,  ಪಂಜಾಬಿನ ಶಹಾಕೊಟ್,   ಬಿಹಾರದ ಜೊಕಿಹಾತ್, ಜಾರ್ಖಂಡಿನ  ಗೊಮಿಯಾ ಮತ್ತು ಸಿಲ್ಲಿ  ಕೇರಳ ಚೆಂಗನ್ನೂರು,  ಮಹಾರಾಷ್ಟ್ರದ ಪಾಲೂಸ್ ಕಾಡೆಗಾಹನ್,  ಮೇಘಾಲಯದ ಅಂಪಾಟಿ,  ಉತ್ತರಖಂಡ್ ನ ತಾರಳಿ  ಕ್ಷೇತ್ರಗಳಲ್ಲಿ ಚುನಾವಣೆ ನಡೆದಿತ್ತು.  ನಾಳೆ ಮತ ಎಣಿಕೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com