ಪ್ರೇಮ ವೈಫಲ್ಯ, ಗುಂಡೇಟಿನಿಂದ ಸಾಯಲು ನಿರ್ಧರಿಸಿ ಭಾರತದ ಗಡಿ ಪ್ರವೇಶಿಸಿದ ಪಾಕ್ ಯುವಕ

ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಸಾಧ್ಯವಾಗದೆ ಮನನೊಂದ ಪಾಕಿಸ್ತಾನದ ಯುವಕನೊಬ್ಬ ಗಡಿ ಭದ್ರತಾ ಪಡೆಯ ಗುಂಡಿನ ದಾಳಿಗೆ ಸಿಲುಕಿ ಸಾಯಬಹುದು ಎಂಬ ಉದ್ದೇಶದಿಂದ ಭಾರತದ ಗಡಿ ಪ್ರವೇಶಿಸಿರುವ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಪಂಜಾಬ್ : ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಸಾಧ್ಯವಾಗದೆ ಮನನೊಂದ ಪಾಕಿಸ್ತಾನದ ಯುವಕನೊಬ್ಬ ಗಡಿ ಭದ್ರತಾ  ಪಡೆಯ  ಗುಂಡಿನ ದಾಳಿಗೆ ಸಿಲುಕಿ  ಸಾಯಬಹುದು ಎಂಬ ಉದ್ದೇಶದಿಂದ ಭಾರತದ ಗಡಿ ಪ್ರವೇಶಿಸಿರುವ ಘಟನೆ ನಡೆದಿದೆ.

 ಹೆಸರು ಬದಲಾಯಿಸಲಾಗಿದ್ದು, ಮೊಹಮದ್ ಆಸೀಪ್ (32 )   ಭಾರತದ ಗಡಿಯೊಳಗೆ  ಆಗಮಿಸಿದ ಯುವಕ.

ಮಾಬೊಕ್  ಗಡಿ ಪ್ರದೇಶದಲ್ಲಿ  ಗಡಿ ಭದ್ರತಾ ಪಡೆಯ 118 ನೇ ಬ್ಯಾಟಲಿಯನ್  ಕೈಗೆ ಹೀಗೆ ಸಿಕ್ಕಿ ಬಿದಿದ್ದು, ನಂತರ ಮಾಮ್ ದೊತ್  ಪೊಲೀಸರ ವಶಕ್ಕೆ ಒಪ್ಪಿಸಲಾಯಿತು ಎಂದು ಬಿಎಸ್ ಎಫ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರೀತಿಸಿದ ಯುವತಿ ಸಿಗದ ಹಿನ್ನೆಲೆಯಲ್ಲಿ ಸಾಯಲು ನಿರ್ಧರಿಸಿ,  ಗಡಿ ಭದ್ರತಾ ಪಡೆಯ ಗುಂಡಿಕ್ಕಿ ಕೊಲ್ಲಬಹುದು ಎಂಬ ಉದ್ದೇಶದಿಂದ ಗಡಿ ಪ್ರದೇಶದೊಳಗೆ ಆಗಮಿಸಿದ್ದಾಗಿ ಆತ  ಹೇಳಿರುವುದಾಗಿ  ಭದ್ರತಾ ಪಡೆ  ಸಿಬ್ಬಂದಿ ತಿಳಿಸಿದ್ದಾರೆ.

ಬಿಎಸ್ಎಫ್ ಯೋಧರ  ಗುಂಡು  ತನ್ನ ಮುರಿದ  ಹೃದಯದ   ಆಘಾತವನ್ನು ಕೊನೆಗೊಳಿಸುತ್ತದೆ ಎಂದು  ಭಾವಿಸಿ  ಆಶೀಫ್  ಭಾರತೀಯ ಗಡಿಯ ಕಡೆಗೆ ನಡೆದು ಬಂದಿದ್ದಾನೆ. ಮೊದಲಿಗೆ  ಆತ ನೇಣುಬಿಗಿದುಕೊಳ್ಳಲು ತೀರ್ಮಾನಿಸಿದ್ದನಂತೆ.

ಆದರೆ, ಪವಿತ್ರ ರಂಜಾನ್ ಮಾಸದ ಹಿನ್ನೆಲೆಯಲ್ಲಿ ಮನಸ್ಸು ಬದಲಾವಣೆ ಮಾಡಿದ್ದಾಗಿ ಮೃತ ಯುವಕನೇ ಬಿಎಸ್ ಎಫ್ ಅಧಿಕಾರಿಗಳೊಂದಿಗೆ ಹೇಳಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com