ನಾಲ್ಕು ಲೋಕಸಭೆ, 10 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಮತ ಎಣಿಕೆ ಪ್ರಗತಿಯಲ್ಲಿ

ನಾಲ್ಕು ಲೋಕಸಭಾ ಕ್ಷೇತ್ರ ಮತ್ತು 10 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ...
ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿ
ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿ

ನವದೆಹಲಿ: ನಾಲ್ಕು ಲೋಕಸಭಾ ಕ್ಷೇತ್ರ ಮತ್ತು 10 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ. ಮುಕ್ತ ಮತ್ತು ನ್ಯಾಯಸಮ್ಮತ ಮತ ಎಣಿಕೆಗೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಮಹಾರಾಷ್ಟ್ರದ ಪಲ್ಗರ್ ಮತ್ತು ಭಂದಾರಾ-ಗೊಂಡಿಯಾ ಕ್ಷೇತ್ರ, ಉತ್ತರ ಪ್ರದೇಶದ ಕೈರಾನಾ ಮತ್ತು ನಾಗಲಾಂಡ್ ಸಂಸದೀಯ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿತ್ತು. ಈ ಕ್ಷೇತ್ರಗಳು ಮುಂದಿನ ವರ್ಷದ ಸಂಸತ್ತು ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಮುಖ್ಯವಾಗಿವೆ.

ಪಂಜಾಬ್ ನ ಶಾಹ್ ಕೊಟ್, ಉತ್ತರಾಖಂಡದ ತರಲಿ, ಮೇಘಾಲಯದ ಅಂಪತಿ, ಕೇರಳದ ಚೆಂಗನ್ನೂರು, ಬಿಹಾರದ ಜೊಕಿಹಟ್, ಜಾರ್ಖಂಡ್ ನ ಗೊಮಿಯಾ ಮತ್ತು ಸಿಲ್ಲಿ, ಪಶ್ಚಿಮ ಬಂಗಾಳದ ಮಹೆಶ್ತಾಲಾ, ಉತ್ತರ ಪ್ರದೇಶದ ನೂರ್ಪುರ್, ಮಹಾರಾಷ್ಟ್ರದ ಪಲುಸ್ ಕಡೆಗಾಂವ್ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿತ್ತು.

ನೂರ್ಪುರ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com