ರಾಹುಲ್ ಗಾಂಧಿ-ಚಂದ್ರಬಾಬು ನಾಯ್ಡು ಭೇಟಿ: ಮೋದಿಯನ್ನು ಮಣಿಸಲು ವರ್ಕ್ ಔಟ್ ಆಗುತ್ತಾ ಆಂಧ್ರ ಸಿಎಂ ತಂತ್ರ?

ಈ ಹಿಂದೆ ಎನ್ ಡಿಎ ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿದ್ದ ಆಂಧ್ರ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು ಈಗ ಎನ್ ಡಿಎ ಮೈತ್ರಿಕೂಟವನ್ನು ಮಣಿಸಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ.
ರಾಹುಲ್ ಗಾಂಧಿ-ಚಂದ್ರಬಾಬು ನಾಯ್ಡು ಭೇಟಿ: ಮೋದಿಯನ್ನು ಮಣಿಸಲು ವರ್ಕ್ ಔಟ್ ಆಗುತ್ತಾ ಆಂಧ್ರ ಸಿಎಂ ತಂತ್ರ?
ರಾಹುಲ್ ಗಾಂಧಿ-ಚಂದ್ರಬಾಬು ನಾಯ್ಡು ಭೇಟಿ: ಮೋದಿಯನ್ನು ಮಣಿಸಲು ವರ್ಕ್ ಔಟ್ ಆಗುತ್ತಾ ಆಂಧ್ರ ಸಿಎಂ ತಂತ್ರ?
ನವದೆಹಲಿ: ಈ ಹಿಂದೆ ಎನ್ ಡಿಎ ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿದ್ದ ಆಂಧ್ರ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು ಈಗ ಎನ್ ಡಿಎ ಮೈತ್ರಿಕೂಟವನ್ನು ಮಣಿಸಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ. 
ಅಗತ್ಯವಿದ್ದಲ್ಲಿ ಮೋದಿ ವಿರುದ್ಧದ ಮಹಾಘಟಬಂಧನ ರಚನೆ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸಲು ಸಿದ್ಧ ಎಂದು ಹೇಳ್ದಿದ ಚಂದ್ರಬಾಬು ನಾಯ್ಡು, ಈಗ ಎನ್ ಡಿಎ ವಿರುದ್ಧ ಮೈತ್ರಿ ರಚಿಸುವುದರ ಕುರಿತು ಚರ್ಚಿಸಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಶರದ್ ಪವಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. 
2019 ರ ಲೋಕಸಭಾ ಚುನಾವಣೆ ದೃಷ್ಟಿಯಿಂದ ಈಗಾಗಲೇ ವಿಪಕ್ಷಗಳ ಹಲವು ನಾಯಕರನ್ನು ಚಂದ್ರಬಾಬು ನಾಯ್ಡು ಭೇಟಿ ಮಾಡಿ ಮಾತನಾಡುತ್ತಿದ್ದು, ಈಗ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುತ್ತಿರುವುದು ಕುತೂಹಲ ಮೂಡಿಸಿದೆ. ಅ.27 ರಂದು ಕೇಜ್ರಿವಾಲ್ ಹಾಗೂ ಶರದ್ ಯಾದವ್ ಅವರನ್ನು ಚಂದ್ರಬಾಬು ನಾಯ್ಡು  ಭೇಟಿ ಮಾಡಿ ಎನ್ ಡಿಎ ವಿರುದ್ಧದ ಮೈತ್ರಿಕೂಟದ ಬಗ್ಗೆ ಚರ್ಚಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com