2019ರ ಮಹಾ ಚುನಾವಣೆಯಲ್ಲಿ ಅತ್ಯಾಧುನಿಕ ಎಂ3 ಮಾದರಿ ಇವಿಎಂ ಬಳಕೆ: ಚುನಾವಣಾ ಆಯೋಗ

ಮುಂದಿನ ವರ್ಷದ ಲೋಕಸಭೆ ಚುನಾವಣೆಯಲ್ಲಿ ಬಳಕೆಗಾಗಿ ಅತ್ಯಾಧುನಿಕ ಎಂ3 ನಮೂನೆಯ ಎಲೆಕ್ಟ್ರಾನಿಕ್ ಮತದಾನ ಯಂತ್ರಗಳನ್ನು ಉತ್ಪಾದಿಸುವ ಜವಾಬ್ದಾರಿಯನ್ನು....
ಇವಿಎಂ-ಸಂಗ್ರಹ ಚಿತ್ರ
ಇವಿಎಂ-ಸಂಗ್ರಹ ಚಿತ್ರ
ನವದೆಹಲಿ: ಮುಂದಿನ ವರ್ಷದ ಲೋಕಸಭೆ ಚುನಾವಣೆಯಲ್ಲಿ ಬಳಕೆಗಾಗಿ ಅತ್ಯಾಧುನಿಕ ಎಂ3 ನಮೂನೆಯ ಎಲೆಕ್ಟ್ರಾನಿಕ್ ಮತದಾನ ಯಂತ್ರಗಳನ್ನು ಉತ್ಪಾದಿಸುವ ಜವಾಬ್ದಾರಿಯನ್ನು ಎರಡು ಸಾರ್ವಜನಿಕ ವಲಯದ ಸಂಸ್ಥೆಗಳು ವಹಿಸಿಕೊಂಡಿದೆ ಎಂದು ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಸುಮಾರು 22.3 ಲಕ್ಷ ಮತದಾನ ಘಟಕಗಳು, 16.3 ಲಕ್ಷ ನಿಯಂತ್ರಣ ಘಟಕಗಳು ಮತ್ತು ಸುಮಾರು 17.3 ಲಕ್ಷ ವಿವಿಪ್ಯಾಟ್ ಯಂತ್ರಗಳನ್ನು 2019 ರ ಲೋಕಸಭಾ ಚುನಾವಣೆಗೆ ಬಳಸಲಾಗುವುದು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಭಾರತದಾದ್ಯಂತ ಸುಮಾರು 10.6 ಲಕ್ಷ ಮತದಾನ ಕೇಂದ್ರಗಳಲ್ಲಿ ಈ ಯಂತ್ರಗಳನ್ನು ಅಳವಡಿಸಲಾಗುತ್ತದೆ.
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ಎಲೆಕ್ಟ್ರಾನಿಕ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್ ಈ ಯಂತ್ರಗಳನ್ನು ಸೆಪ್ಟೆಂಬರ್ 30 ರೊಳಗೆ ಮತದಾನ ಸಮಿತಿಗೆ ನೀಡಲು ಹೇಳಲಾಗಿತ್ತು. ಇದೀಗ ಮತಯಂತ್ರಗಳ ಹಸ್ತಾತರ ಪೂರ್ಣಗೊಂಡಿದೆ ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿದೆ.
ಇದಕ್ಕೆ ಮುನ್ನ ಬಳಕೆಯಲ್ಲಿದ್ದ ಎಂ2 ಮಾದರಿಯ ಯಂತ್ರಗಳಲ್ಲಿ ನೋಟಾ ಸೇರಿದಂತೆ ಗರಿಷ್ಠ 64 ಅಭ್ಯರ್ಥಿಗಳನ್ನು ಗುರುತಿಸಬಹುದಾಗಿತ್ತು. ಆದರೆ  2013 ರ ನಂತರ ಬಂದ ಎಂ3 ಇವಿಎಂ ಯಂತ್ರಗಳಲ್ಲಿ ನೋಟಾವನ್ನು ಒಳಗೊಂಡಂತೆ 384 ಅಭ್ಯರ್ಥಿಗಳು 24 ಮತದಾನ ಘಟಕಗಳನ್ನು ಸಂಪರ್ಕಿಸುವ ವ್ಯವಸ್ಥೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com