ಲೈಂಗಿಕ ಕಾರ್ಯಕರ್ತೆಯರಿಗೆ ಸಹ 'ನೋ' ಎನ್ನುವ ಹಕ್ಕಿದೆ: ಸುಪ್ರೀಂ ಮಹತ್ವದ ತೀರ್ಪು

ಲೈಂಗಿಕ ಕಾರ್ಯಕರ್ತೆಯರಿಗೆ ಸಹ ಬಲವಂತದ ಸೆಕ್ಸ್ ಅನ್ನು ಧಿಕ್ಕರಿಸುವ ಅಥವಾ ತಿರಸ್ಕರಿಸುವ "ಹಕ್ಕು" ಇದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ನವದೆಹಲಿ: ಲೈಂಗಿಕ ಕಾರ್ಯಕರ್ತೆಯರಿಗೆ ಸಹ ಬಲವಂತದ ಸೆಕ್ಸ್ ಅನ್ನು ಧಿಕ್ಕರಿಸುವ ಅಥವಾ ತಿರಸ್ಕರಿಸುವ "ಹಕ್ಕು" ಇದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ರಾಷ್ಟ್ರ ರಾಜಧಾನಿಯಲ್ಲಿ 1997ರಲ್ಲಿ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ಸರ್ವೋಚ್ಚ ನ್ಯಾಯಾಲಯ ಈ ತೀರ್ಪು ನೀಡಿದೆ."ಮಹಿಳೆಯೊಬ್ಬ ಲೈಂಗಿಕ ಕಾರ್ಯಕರ್ತೆಯೇ ಆದರೂ ಅವಳಿಗೆ ಸಹ ಯಾರೊಂದಿಗೂ ಲೈಂಗಿಕ ಕ್ರಿಯೆಯನ್ನು ನಿರಾಕರಿಸುವ ಹಕ್ಕು ಇದೆ" ಎಂದು ನ್ಯಾಯಾಲಯವು ತಿಳಿಸಿದೆ.
ನ್ಯಾಯಮೂರ್ತಿಗಳಾದ ಆರ್. ಭಾನುಮತಿ ಹಾಗೂ ಇಂದಿರಾ ಬ್ಯಾನರ್ಜಿ ಅವರನ್ನೊಳಗೊಂಡ ಪೀಠ ಈ ಹಿಂದೆ ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ರದ್ದುಗೊಳಿಸಿದೆ.ಅಲ್ಲದೆ ನಾಲ್ವರು ಆರೋಪಿಗಳಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಯಾವೊಬ್ಬ ಮಹಿಳೆ ಅದೇನೇ ಕೆಲಸ ನ್=ಮಾಡುವವಳಾಗಲಿ ಅವಳು ಓರ್ವ ವ್ಯಕ್ತಿಯಿಂದ ಅತ್ಯಾಚಾರಕ್ಕೆ ಒಳಗಾಗುವುದು ಸಲ್ಲದು ಎಂದು ನ್ಯಾಯಾಲಯ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com