ನೊಯ್ಡಾದಿಂದ ನಾಪತ್ತೆಯಾಗಿದ್ದ ಕಾಶ್ಮೀರಿ ವಿದ್ಯಾರ್ಥಿ ಸಾಮಾಜಿಕ ತಾಣದಲ್ಲಿ ಭಯೋತ್ಪಾದಕನಾಗಿ ಪ್ರತ್ಯಕ್ಷ!

ದೆಹಲಿ ಸಮೀಪದ ಗ್ರೇಟರ್ ನೊಯ್ಡಾದಿಂದ ಕಾಣೆಯಾಗಿದ್ದ ಕಾಶ್ಮೀರಿ ವಿದ್ಯಾರ್ಥಿಯೊಬ್ಬ ಇಸಿಸ್ಭಯೋತ್ಪಾದಕ ಸಂಘಟನೆ ಧ್ವಜ ಹಿಡಿದು ನಿಂತಿರುವ ಚಿತ್ರ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.
ಅಹ್ತೆಶಮ್​ ಬಿಲಾಲ್​ ಸೂಫಿ
ಅಹ್ತೆಶಮ್​ ಬಿಲಾಲ್​ ಸೂಫಿ
ಗ್ರೇಟರ್ ನೊಯ್ಡಾ: ದೆಹಲಿ ಸಮೀಪದ ಗ್ರೇಟರ್ ನೊಯ್ಡಾದಿಂದ ಕಾಣೆಯಾಗಿದ್ದ ಕಾಶ್ಮೀರಿ ವಿದ್ಯಾರ್ಥಿಯೊಬ್ಬ ಇಸಿಸ್ ಯೋತ್ಪಾದಕ ಸಂಘಟನೆ ಧ್ವಜ ಹಿಡಿದು ನಿಂತಿರುವ ಚಿತ್ರ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.
ಶ್ರೀನಗರ ನಿವಾಸಿಯಾಗಿದ್ದ  ಅಹ್ತೆಶಮ್​ ಬಿಲಾಲ್​ ಸೂಫಿ (17) ಭಯೋತ್ಪಾದಕನಾಗಿ ಬದಲಾದ ಕಾಶ್ಮೀರ ವಿದ್ಯಾರ್ಥಿಯಾಗಿದ್ದು ಈತ ನೊಯ್ಡಾದ ಖಾಸಗಿ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದನು.
ಗ್ರೇಟರ್ ನೊಯ್ಡಾದ ಶಾರ್ದಾ ವಿಶ್ವವಿದ್ಯಾನಿಲಯದಲ್ಲಿ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದ ಅಹ್ತೆಶಮ್ ಕ್ಯಾಂಪಸ್ನಲ್ಲಿ ಭಾರತೀಯ ಮತ್ತು ಅಫಘಾನ್ ವಿದ್ಯಾರ್ಥಿಗಳ ನಡುವಿನ ಕಿತ್ತಾಟದ ವೇಳೆ ತಪ್ಪಾಗಿ ಆರೋಪಿತನಾಗಿ ಗುರುತಿಸಿಕೊಂಡಿದ್ದ. ಇದಾಗಿ ಆತ ದೆಹಲಿಫ಼್ಗೆ ತೆರಳಲು ವಿಶ್ವವಿದ್ಯಾನಿಲಯದ ಅಧಿಕೃತ ಅನುಮತಿ ಪಡೆದಿದ್ದ. ಆದರೆ ಅಕ್ಟೋಬರ್ 28ರಿಂದ ಆತ ನಾಪತ್ತೆಯಾಗಿದ್ದ.
ಗ್ರೇಟರ್ ನೊಯ್ಡಾದ ನಾಲೆಜ್ ಪಾರ್ಕ್ ಪೋಲೀಸ್ ಠಾಣೆ ಹಾಗೂ ಶ್ರೀನಗರದ  ಖ್ಯಾಯಾರ್ ಪೊಲೀಸ್ ಠಾಣೆಯಲ್ಲಿ ಇವನ ನಾಪತ್ತೆ ಕುರಿತಂತೆ ದೂರು ದಾಖಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದೀಗ ಸಿಕ್ಕಿರುವ ಸಾಮಾಜಿಕ ತಾಣಗಳಲ್ಲಿ ಚಿತ್ರದಲ್ಲಿ ಅಹ್ತೆಶಮ್ಕಪ್ಪು ಬಟ್ಟೆ ತೊಟ್ಟು ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯ ಧ್ವಜ ಹಿಡಿದು ನಿಂತಿರುವದನ್ನು ತೋರಿಸಿದೆ.ಇದರ ಮುಖೇನ ಆತ ಉಗ್ರವಾದಿ ಸಂಘಟನೆಗೆ ಸೇರಪಡೆಯಾಗಿರುವುದು ತಿಳಿದು ಬಂದಿದೆ.
"ನಾವು ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ಸಂಪರ್ಕ ಹೊಂದಿದ್ದೇವೆ, ನಾವು ಗ್ರೇಟರ್ ನೋಯ್ಡಾದಿಂದ ಕಾಶ್ಮೀರಕ್ಕೆ ತೆರಳಿದ ವಿದ್ಯಾರ್ಥಿಯಜಾಡು ಪತ್ತೆ ಮಾಡುತ್ತಿದ್ದೇವೆ" ಎಂದು ಇನ್ಸ್ಪೆಕ್ಟರ್ ಜನರಲ್ ಎಟಿಎಸ್ ಅಸಿಮ್ ಅರುಣ್ ಪಿಟಿಐಗೆ ತಿಳಿಸಿದ್ದಾರೆ.
ಜಮ್ಮು ಕಾಶ್ಮೀರ ಪೋಲೀಸರು ಸಹ ಕಣಿವೆ ರಾಜ್ಯದಲ್ಲಿ ಅಹ್ತೆಶಮ್ ಉಪಸ್ಥಿತಿಯನ್ನು ಖಚಿತಪಡಿಸುವುದಾಗಿ ಹೇಳಿದ್ದಾರೆ.ದಕ್ಷಿಣ ಕಾಶ್ಮೀರದ ಭಯೋತ್ಪಾದಕರ ಹಿಡಿತದಲ್ಲಿನ ಜಿಲ್ಲೆ ಪುಲ್ವಾಮಾ ಜಿಲ್ಲೆ ವ್ಯಾಪ್ತಿಯಲ್ಲಿ ಅಹ್ತೆಶಮ್ ಮೊಬೈಲ್ ಫೋನ್ ಕಡೆಯ ಬಾರಿಗೆ ಸಂಪರ್ಕ ಸಾಧಿಸಿದ್ದು ತಿಳಿದಿದೆ.
ಪೋಲೀಸರ ಪ್ರಕಾರ ಅಕ್ಟೋಬರ್ 28ರ ಮಧ್ಯಾಹ್ನ ಮಧ್ಯಾಹ್ನ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶ್ರೀನಗರಕ್ಕೆ ಸೋಫಿ ತೆರಳಿದ್ದ ಮತ್ತು ಕೆಲವೇ ಗಂಟೆಗಳ ನಂತರ ಪುಲ್ವಾಮಾ ತಲುಪಿದ್ದ. ಅವನು ತನ್ನ ತಂದೆಯೊಡನೆ ಕಡೆಯದಾಗಿ ಮಾತನಾಡಿದ್ದಾನೆ. ಆದಾಗ್ಯೂ ತಾನು ದೆಹಲಿಯಲ್ಲಿದ್ದು ಸದ್ಯವೇ ವಿಶ್ವವಿದ್ಯಾನಿಲಯಕ್ಕೆ ಹಿಂತಿರುಗುವುದಾಗಿ ಆತ ತನ್ನ ತಂದೆಗೆ ಹೇಳಿದ್ದಾನೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com