ರಾಮ ಮಂದಿರ ನಿರ್ಮಾಣಕ್ಕಿರುವ ಎಲ್ಲಾ ಆಯ್ಕೆಗಳೂ ಮುಕ್ತವಾಗಿರಲಿ: ಶ್ರೀ ಶ್ರೀ ರವಿಶಂಕರ್

ರಾಮ ಮಂದಿರ ನಿರ್ಮಾಣಕ್ಕೆ ಸಾಧ್ಯವಿರುವ ಎಲ್ಲಾ ಮಾರ್ಗಗಳನ್ನು ಮುಕ್ತವಾಗಿಸಬೇಕು. ಸಂತರು ತಾವು ಈ ಕುರಿತು ಪ್ರಥಮ ಹೆಜ್ಜೆ ಇಟ್ಟು ಒತ್ತಡ ಹೆಚ್ಚಿಸಬೇಕು ಎಂದು ಆದ್ಯಾತ್ಮ ಗುರು, ಆರ್ಟ್ ಆಫ್ ಲಿವಿಂಗ್ ನ....
ಶ್ರೀ ಶ್ರೀ ರವಿಶಂಕರ್
ಶ್ರೀ ಶ್ರೀ ರವಿಶಂಕರ್
Updated on
ನವದೆಹಲಿ: ರಾಮ ಮಂದಿರ ನಿರ್ಮಾಣಕ್ಕೆ ಸಾಧ್ಯವಿರುವ ಎಲ್ಲಾ ಮಾರ್ಗಗಳನ್ನು ಮುಕ್ತವಾಗಿಸಬೇಕು. ಸಂತರು ತಾವು ಈ ಕುರಿತು ಪ್ರಥಮ ಹೆಜ್ಜೆ ಇಟ್ಟು ಒತ್ತಡ ಹೆಚ್ಚಿಸಬೇಕು ಎಂದು ಆದ್ಯಾತ್ಮ ಗುರು, ಆರ್ಟ್ ಆಫ್ ಲಿವಿಂಗ್ ನ ಮುಖ್ಯಸ್ಥರಾದ ಶ್ರೀ ಶ್ರೀ ರವಿಶಂಕರ್ ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಸಂತರ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ರವಿಶಂಕರ್ "ನಮಗೆ ಮೂರು ಮಾರ್ಗಗಳಿದೆ. ಒಂದು ಮಸ್ಯೆಯನ್ನು ಬಗೆಹರಿಸಲು ಮಾತುಕತೆಗಳನ್ನು ಮುಂದುವರಿಸಬೇಕು. ಎರಡನೆಯದಾಗಿ ಈ ವಿಷಯದಲ್ಲಿ ತುರ್ತು ತೀರ್ಮಾನ ನೀಡುವಂತೆ ನಾವು ಸುಪ್ರೀಂ ಕೋರ್ಟ್ ಅನ್ನು ಒತ್ತಾಯಿಸಬೇಕು. ಮೂರನೆಯದಾಗಿ ಸರ್ಕಾರ ರಾಮಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆ ಹೊರಡಿಸಬೇಕೆಂದು ನಾವು ಮನವಿ ಮಾಡಬೇಕು.
"ಇದು 500 ವರ್ಷಗಳ ಹಿಂದಿನ ವಿಷಯವಾಗಿದ್ದು ಜನರು ನಮ್ಮ ಮೇಲೆ ಭರವಸೆ ಹೊಂದಿದ್ದಾರೆ. ಅಯೋಧ್ಯೆಯಲ್ಲಿ ಸುಂದರವಾದ ರಾಮಮಂದಿರ ನಿರ್ಮಾಣಕ್ಕಾಗಿ ಭಾರತದ ಜನರು ಬಯಸುತ್ತಾರೆ. ನಾವು ಅದಕ್ಕಾಗಿ ಪ್ರಯತ್ನಿಸಬೇಕಿದೆ.ಭಾರತದ ಜನರ ಹಾರೈಕೆಯನ್ನು ಪೂರೈಸಲು ಪ್ರಾರ್ಥಿಸಬೇಕು" ಅವರು ಹೇಳಿದ್ದಾರೆ.
ಮಂದಿರ ನಿರ್ಮಾಣದಲ್ಲಿ ಸಂತ ಸಮುದಾಯದ ಪಾತ್ರವನ್ನು ಮತ್ತಷ್ಟು ಒತ್ತಿ ಹೇಳಿದ ಶ್ರೀ ಶ್ರೀ ರವಿಶಂಕರ್ "ದೇಶ ಯಾವುದೇ ಬಿಕ್ಕಟ್ಟಿನಲ್ಲಿದ್ದಾಗ ಸಂತರು ಸಮಾಜಕ್ಕೆ ಸಹಾಯ ಮಾಡಲು ಮುಂದಾಗುತ್ತಾರೆ. ಅವರು ಸಮಾಜದಲ್ಲಿ ಶಾಂತಿಯನ್ನು ಕಾಪಾಡಲು ಹಾಗೂ  ಅಗತ್ಯವಿದ್ದಾಗ ಸಮಾಜವನ್ನು ಎಚ್ಚರಿಸಲೂ ಇದ್ದಾರೆ.ನಾವು ಜನರನ್ನು ಶಾಂತಿಯ ಮಾರ್ಗದಲ್ಲಿ ನಡೆಯುವಂತೆ ಮಾಡುತ್ತೇವೆ ಹಾಗೆಯೇ ಅಗತ್ಯವಾದರೆ ಕ್ರಾಂತಿಗಾಗಿಯೂ ಕರೆ ನೀಡಲಿದ್ದೇವೆ" ಹೇಳಿದ್ದಾರೆ.
ಎರಡು ದಿನಗಳ ಕಾಲ ನಡೆಯುವ ಸಂತರ ಸಮಾವೇಶನವದೆಹಲಿಯ ಟಾಕಟೊರಾ ಕ್ರೀಡಾಂಗಣದಲ್ಲಿ  ಇಂದಿನಿಂದ ಪ್ರಾರಂಭವಾಗಿದೆ.ದೇಶದಾದ್ಯಂತದ ಅನೇಕ ಪ್ರಮುಖ ಸಂತರು ಸಭೆಗೆ  ಆಗಮಿಸಿದ್ದಾರೆ.ಸಮಾವೇಶದಲ್ಲಿ ಅಯೋಧ್ಯೆ ವಿವಾದದ ಕುರುತು ತಮ್ಮ ಅಭಿಪ್ರಾಯವನ್ನು ಅವರು ಹಂಚಿಕೊಳ್ಳಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com