ದೀಪಾವಳಿ ನಂತರ ಶೀಘ್ರವೇ ರಾಮಮಂದಿರ ನಿರ್ಮಾಣ ಕಾರ್ಯ ಪ್ರಾರಂಭ: ಯೋಗಿ ಆದಿತ್ಯನಾಥ್

ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸುವ ಹಿಂದೂ ಭಕ್ತರ ಆಶಯಗಳು ದೀಪಾವಳಿಯ ಬಳಿಕ ಶೀಘ್ರವೇ ನಿಜವಾಗಲಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್
ಬಿಕಾನೇರ್(ರಾಜಸ್ಥಾನ): ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸುವ ಹಿಂದೂ ಭಕ್ತರ ಆಶಯಗಳು ದೀಪಾವಳಿಯ ಬಳಿಕ ಶೀಘ್ರವೇ ನಿಜವಾಗಲಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ  ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ರಾಜಸ್ಥಾನದ ಬಿಕಾನೇರ್ ನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಆದಿತ್ಯನಾಥ್ "ಈ ಬಾರಿ ನಮಗೆಲ್ಲಾ ಶ್ರೀರಾಮ ಬೆಳಕು ತೋರಲಿದ್ದಾನೆ.ದೀಪಾವಳಿ ಹಬ್ಬದ ಬಳಿಕ ಶೀಘ್ರವೇ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ" ಎಂದರು.
ಉತ್ತರ ಪ್ರದೇಶ ಸರ್ಕಾರ ಶೀಘ್ರದಲ್ಲೇ ಅಯೋಧ್ಯೆಯಲ್ಲಿ ಭಗವಾನ್ ರಾಮನ ಪ್ರತಿಮೆಯನ್ನು ಸ್ಥಾಪಿಸುವ ಕುರಿತು ಘೋಷಣೆ ಹೊರಡಿಸಲಿದೆ ಎನ್ನುವ ಉತ್ತಪ ಪ್ರದೇಶದ  ಸಮಾಜವಾದಿ ಪಕ್ಷದ ನಾಯಕ ಅಜಮ್ ಖಾನ್ ಹೇಳಿಕೆಯ ಬೆನ್ನಿಗೇ ಯೋಗಿ ಆದಿತ್ಯನಾಥ್ ಅವರ ಈ ಹೇಳಿಕೆ ಬಂದಿದೆ.
ಶನಿವಾರ ಎ ಎನ್ ಐ ಸುದ್ದಿಸಂಸ್ಥೆ ಜತೆಗೆ ಮಾತನಾಡಿದ್ದ ಅಜಮ್ ಖಾನ್ ಶೀಘ್ರವೇ ಅಯೋಧ್ಯೆಯ ಸರಯೂ ತಟದ ಮೇಲೆ ಶ್ರೀರಾಮನ ಬೃಹತ್ ವಿಗ್ರಹ ಸ್ಥಾಪನೆಯಾಗಲಿದೆ. ಅದು ಇತ್ತೀಚೆಗೆ ಉದ್ಘಾಟನೆಗೊಂಡ 182 ಮೀಟರ್ ಎತ್ತರದ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಪ್ರತಿಮೆಗಿಂತ ಎತ್ತರವಿರಲಿದೆ ಎಂದಿದ್ದರು.
ಅಯೋಧ್ಯೆಯಲ್ಲಿರುವ ಸಂತರು ರಾಮದ ಪ್ರತಿಮೆಯನ್ನು ಸ್ಥಾಪನೆ ಮಾಡಬೇಕೆಂದು ಅಯೋಧ್ಯೆಯ ಸಂತರೂ ಒತ್ತಡ ಹಾಕುತ್ತಿದ್ದಾರೆ ಎಂದು ವರದಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com