ಮಂಗಳೂರು ಲಿಟ್ ಫೆಸ್ಟ್: ಸನ್ಮಾದ ಚೆಕ್ ಕಲ್ಲಡ್ಕ ಶಾಲೆಗೆ ದೇಣಿಗೆ-ಎಸ್ಎಲ್ ಭೈರಪ್ಪ

ಖ್ಯಾತ ಸಾಹಿತಿ ಡಾ.ಎಸ್.ಎಲ್ ಭೈರಪ್ಪ ತಮಗೆ ಸನ್ಮಾನದ ವೇಳೆ ನೀಡಲಾದ ಚೆಕ್ ನ್ನು ಕಲ್ಲಡ್ಕದ ಶಾಲೆಗೆ ದೇಣಿಗೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ.
ಮಂಗಳೂರು ಲಿಟ್ ಫೆಸ್ಟ್: ಸನ್ಮಾದ ಚೆಕ್ ಕಲ್ಲಡ್ಕ ಶಾಲೆಗೆ ದೇಣಿಗೆ-ಎಸ್ಎಲ್ ಭೈರಪ್ಪ
ಮಂಗಳೂರು ಲಿಟ್ ಫೆಸ್ಟ್: ಸನ್ಮಾದ ಚೆಕ್ ಕಲ್ಲಡ್ಕ ಶಾಲೆಗೆ ದೇಣಿಗೆ-ಎಸ್ಎಲ್ ಭೈರಪ್ಪ
ಮಂಗಳೂರು: ಖ್ಯಾತ ಸಾಹಿತಿ ಡಾ.ಎಸ್.ಎಲ್ ಭೈರಪ್ಪ ತಮಗೆ ಸನ್ಮಾನದ ವೇಳೆ ನೀಡಲಾದ ಚೆಕ್ ನ್ನು ಕಲ್ಲಡ್ಕದ ಶಾಲೆಗೆ ದೇಣಿಗೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ. 
ಮಂಗಳೂರಿನಲ್ಲಿ ನಡೆದ ಮಂಗಳೂರು ಲಿಟ್ ಫೆಸ್ಟ್ ನಲ್ಲಿ  ಭಾಗವಹಿಸುವುದಕ್ಕೂ ಮುನ್ನ ಡಾ.ಎಸ್ಎಲ್ ಭೈರಪ್ಪ ಕಲ್ಲಡ್ಕದ ಶಾಲೆಗೆ ಭೇಟಿ ನೀಡಿದ್ದರು.  ಈ ಬಗ್ಗೆ ಮಾತನಾಡಿರುವ ಎಸ್ಎಲ್ ಭೈರಪ್ಪ, "ಕಲ್ಲಡ್ಕ ಶಾಲೆಯಲಿನನ್ ಶಿಕ್ಷಣ ಪದ್ಧತಿ ನೋಡಿ ನನಗೆ ಆಶ್ಚರ್ಯವಾಯಿತು. ಭಾರತೀಯ ಸಂಸ್ಕೃತಿಯನ್ನು ಪಸರಿಸುವ ಕೆಲಸವನ್ನು ಕಲ್ಲಡ್ಕ ಶಾಲೆಯಲ್ಲಿ ಮಾಡಲಾಗುತ್ತಿದೆ. ಈ ಹಿಂದಿನ ಸರ್ಕಾರ ಶಾಲೆಗೆ ನೀಡಲಾಗುತ್ತಿದ್ದ ಬಿಸಿಯೂಟವನ್ನು ನಿಲ್ಲಿಸಿ ದೊಡ್ಡ ತಪ್ಪು ಮಾಡಿದೆ. ಆ ತಪ್ಪು ಮಾಡಿದವರಿಗೆ ಜನರು ಏನು ಪಾಠ ಕಲ್ಪಿಸಿದ್ದಾರೆ ಎಂಬುದೂ ಗೊತ್ತಿದೆ, ಶಾಲೆಯನ್ನು ನೋಡಿದ ಬಳಿಕ ದೇಣಿಗೆ ನೀಡಬೇಕು ಅಂದುಕೊಂಡೆ ಆದರೆ ಚೆಕ್ ಬುಕ್ ತಂದಿರಲಿಲ್ಲ ಆದ್ದರಿಂದ ಲಿಟ್ ಫೆಸ್ಟ್ ನಲ್ಲಿ ನೀಡಿರುವ ಚೆಕ್ ನ್ನು ಅದರ ಮೊತ್ತ ಎಷ್ಟು ಎಂಬುದನ್ನೂ ನೋಡದೇ ಹಾಗೆಯೇ ಶಾಲೆಗೆ ಹಸ್ತಾಂತರಿಸುತ್ತೇನೆ" ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com