2ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ ದಂಪತಿಗಳಿಗೆ ಮತದಾನದ ಹಕ್ಕು ನಿರಾಕರಿಸಿ: ಬಾಬಾ ರಾಮ್ ದೇವ್

ವಿವಾಹಿತ ದಂಪತಿಗಳಿಗೆ ಇಬ್ಬರಿಗಿಂತ ಹೆಚ್ಚು ಮಕ್ಕಳು ಇದ್ದರೆ, ಅವರ ಮತದಾನದ ಹಕ್ಕನ್ನು ನಿರಾಕರಿಸಬ್ಕು ಎಂದು ಯೋಗ ಗುರು ಬಾಬಾ ರಾಮ್ ದೇವ್ ಅಭಿಪ್ರಾಯಪಟ್ಟಿದ್ದಾರೆ.
ಬಾಬಾ ರಾಮ್ ದೇವ್
ಬಾಬಾ ರಾಮ್ ದೇವ್
ಹರಿದ್ವಾರ: ವಿವಾಹಿತ ದಂಪತಿಗಳಿಗೆ ಇಬ್ಬರಿಗಿಂತ ಹೆಚ್ಚು ಮಕ್ಕಳು ಇದ್ದರೆ, ಅವರ ಮತದಾನದ ಹಕ್ಕನ್ನು ನಿರಾಕರಿಸಬ್ಕು ಎಂದು ಯೋಗ ಗುರು ಬಾಬಾ ರಾಮ್ ದೇವ್ ಅಭಿಪ್ರಾಯಪಟ್ಟಿದ್ದಾರೆ.
ಜ್ಞಾನ ಕುಂಭ ಸಮಾವೇಶದ ಎರಡನೇ ದಿನವಾದ ಭಾನುವಾರ ಮಾತನಾಡಿ ರಾಮ್ ದೇವ್ "ತನ್ನಂತಹಾ ಯೋಗಿಗಳನ್ನು, ಬ್ರಹ್ಮಚಾರಿಗಳನ್ನು ಗೌರವಿಸಬೇಕು. ಮದುವೆಯಾದ ದಂಪತಿಗಳು ಯಾರು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆಯೋ ಅವರಿಗೆ ಮತದಾನದ ಹಕ್ಕನ್ನು ನಿರಾಕರಿಸಬೇಕು"  ಅವರು ಹೇಳಿದರು.
ತನ್ನ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಾ ರಾಮ್ ದೇವ್ "ಇದಾಗಲೇ ಜನಸಂಖ್ಯೆಯು ಅಪಾಯಕಾರಿ ಮಟ್ಟದಲ್ಲಿ ಏರುತ್ತಿದೆ.ಇನ್ನು ಎರಡಕ್ಕಿಂತ ಹೆಚ್ಚು ಮಕಳನ್ನು ಪಡೆಯುವ ಮೂಲಕ ಇನ್ನಷ್ಟು ಕಳವ್ಳಕಾರಿ ಹಂತಕ್ಕೆ ತಲುಪುವ ಆತಂಕವಿದೆ" ಎಂದರು.
ದೇಶದ ಒಟ್ಟು ಜನಸಂಖ್ಯೆಯು ಈಗಾಗಲೇ 1.5 ಕ್ಕಿಂತ ಹೆಚ್ಚಾಗಿದೆ.ಇಂತಹ ಸಂದರ್ಭದಲ್ಲಿ, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯುವ ಮೂಲಕ ಜನಸಂಖ್ಯಾ ಸಮಸ್ಯೆ ಇನ್ನಷ್ಟು ಗಂಬೀರ ಸ್ವರೂಪ ಪಡೆಯುತ್ತದೆ" ಅವರು ಹೇಳಿದ್ದಾರೆ.
ಉತ್ತರಾಖಂಡ್ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಮತ್ತು ಹರಿದ್ವಾರದಲ್ಲಿ ಪತಂಜಲಿ ವಿಶ್ವವಿದ್ಯಾಲಯದಿಂದ ಜಂಟಿಯಾಗಿ ಆಯೋಜಿಸಲ್ಪಟ್ಟ ಮೊದಲ ಜ್ಞಾನ ಕುಂಭವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಶನಿವಾರ ಉದ್ಘಾಟಿಸಿದ್ದರು.
ಜ್ಞಾನ ಕುಂಭ ಮೂಲಕ ಭಾರತೀಯ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಜ್ಞಾನವನ್ನು ತುಂಬುವ ಕಾರ್ಯ ನಿರ್ಮಿಸಬೇಕಾಗಿದೆ . "ನಾವು ಈ ಕ್ಷೇತ್ರದಲ್ಲಿ ಯಶಸ್ವಿಯಾಗುತ್ತೇವೆ ಮತ್ತು ಈ ಜ್ಞಾನಕುಂಭ ಮೂಲಕ, ಇಡೀ ದೇಶವನ್ನು ಜ್ಞಾನ ಮತ್ತು ಯೋಗ ಕ್ರಾಂತಿಯನ್ನು ಮಾಡಲಿದ್ದೇವೆ.ಇದರಿಂದ ದೇಶವೇ ಹೆಮ್ಮೆ ಪಡುವಂತಾಗಲಿದೆ" ರಾಮ್ ದೇವ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com